15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಯುವಕ ಕೆಲಸಕ್ಕೆ ಗುಡ್ ಬೈ ಹೇಳಿ,ಒಂದೇ ತಿಂಗಳಲ್ಲಿ ಲಕ್ಷಾಧೀಶನಾದ

ಚಿಕ್ಕಬಳ್ಳಾಪುರ, ಜುಲೈ 19: ಆತ ಅಪ್ಪಟ ಕೃಷಿಕನ ಮಗ, ತಂದೆಯ ಕಷ್ಟ ನೋಡಿ ಕಷ್ಟಪಟ್ಟು ಬಿ.ಕಾಂ ಪದವಿ ಮುಗಿಸಿ ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿದ್ದ. ಆದ್ರೆ ಕಂಪನಿ ನೀಡುವ ಸಂಬಳ ಆತನ ಖರ್ಚಿಗೂ ಸಾಲುತ್ತಿರಲಿಲ್ಲ. ಇದ್ರಿಂದ ಬೇಸತ್ತ ಆ ಯುವಕ ಕಂಪನಿಯ ಕೆಲಸ ತೊರೆದು ಕೃಷಿಯತ್ತ ಮುಖ ಮಾಡಿದ್ದ. ಇದ್ರಿಂದ ಗ್ರಾಮಸ್ಥರು ಆ ಯುವಕನನ್ನು ನೋಡಿ ಕುಹಕವಾಡಿದ್ರು. ಆದ್ರೂ ಎದೆಗುಂದದ ಆ ಯುವಕ ತಂದೆಯ ಒಂದೂವರೆ ಎಕೆರೆ ಜಮೀನಿನಲ್ಲಿ ಬಂಗಾರದಂಥಹ ಟೆಮೆಟೊ(Tomato) ಬೆಳೆದಿದ್ದು, ಪ್ರತಿದಿನ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದನೆ ಮಾಡ್ತಿದ್ದಾನೆ. ಅಂದು ಕುಹಕವಾಡಿದ್ದವರು ಈಗ ಬೆರಗಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದ ರೈತ ನಾಗರಾಜ್ ತನ್ನ ಮಕ್ಕಳು ಚನ್ನಾಗಿ ಓದಿ ಅಧಿಕಾರಿಗಳಾಗಲಿ ಅಂತ ತನ್ನ ಮಕ್ಕಳನ್ನು ಕಷ್ಟಪಟ್ಟು ಓದಿಸಿದ್ರು. ಬಿ.ಕಾಂ ಪದವಿಧರನಾಗಿದ್ದ ರೈತ ನಾಗರಾಜ್ ಮಗ ಶಿವರಾಜ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಅದರಿಂದ ಆತನ ಖರ್ಚು ವೆಚ್ಚ ಸರಿದೂಗಿಸಲು ಕಷ್ಟವಾಗುತ್ತಿತ್ತು. ಕೊನೆಗೆ ತಂದೆಗೆ ವಿರುದ್ದವಾಗಿ ಕೆಲಸ ತೊರೆದು ಸ್ವಗ್ರಾಮಕ್ಕೆ ಆಗಮಿಸಿ ತಂದೆಯ ಒಂದೂವರೆ ಎಕೆರೆ ಜಮೀನಿನಲ್ಲಿ ಟೆಮೆಟೊ ಬೆಳೆದಿದ್ದಾನೆ. ಟೆಮೆಟೊ ಫಸಲು ಅತ್ಯುತ್ತಮವಾಗಿ ಬಂದಿದೆ. ಕಲರ್, ಗುಣಮಟ್ಟ, ಸೈಜ್ ನಲ್ಲಿ ಉತ್ತಮ ಇಳುವರಿ ಬಂದಿದೆ. ಇನ್ನೂ ಮಾರುಕಟ್ಟೆಯಲ್ಲಿ ಶಿವರಾಜ್ ಬೆಳೆದ ಹಣ್ಣಿಗೆ ಚಿನ್ನದ ಬೆಲೆ ಬಂದಿದೆ. ಇದ್ರಿಂದ ಶಿವರಾಜ್ ಪ್ರತಿದಿನ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದನೆ ಮಾಡ್ತಿದ್ದಾನೆ.

ಇನ್ನೂ ಯುವಕ ಶಿವರಾಜ್ ಬೆಳೆದ ಟೆಮೆಟೊಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಇದೆ. ಕಲರ್, ಗುಣಮಟ್ಟ, ಸೈಜ್ ನಲ್ಲಿ ಉತ್ತಮ ಇಳುವರಿ ಬಂದಿದೆ. ಇದ್ರಿಂದ 15 ಕೆ.ಜಿ ಟೆಮೆಟೊ ಬಾಕ್ಸ್ ಗೆ ಎರಡು ಸಾವಿರ ರೂಪಾಯಿ ನೀಡಿ ವರ್ತಕರು ಖರೀದಿ ಮಾಡ್ತಿದ್ದಾರೆ. ಈಗಾಗಲೇ ಶಿವರಾಜ್ ಗೆ ಇಪ್ಪತೈದು ಲಕ್ಷ ರೂಪಾಯಿ ಹಣ ಬಂದಿದೆ. ಇನ್ನೂ ಇಪ್ಪತೈದು ಲಕ್ಷ ರೂಪಾಯಿ ಹಣ ಬರುವ ನೀರಿಕ್ಷೆ ಇದೆ. ಟೆಮೆಟೊ ಬೆಳೆಯಲು ಕೇವಲ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಆದ್ರೆ ಈಗ ಮಗನ ಸಾಧನೆ ಹಾಗೂ ಸಂಪಾದನೆ ಕಂಡ ತಂದೆ ನಾಗರಾಜ್, ಫುಲ್ ಖುಷ್ ಆಗಿದ್ದಾರೆ.

ಬಿಕಾಂ ಪದವೀಧರನಾಗಿ, ಖಾಸಗಿ ಕಂಪನಿಯಲ್ಲಿ 15 ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದರೆ ಸಾಯುವವರೆಗೂ ದುಡಿದ್ರೂ ಲಕ್ಷಾಧೀಶನಾಗುತ್ತಿರಲಿಲ್ಲ, ಆದ್ರೆ ಭೂತಾಯಿ ನಂಬಿ ಟೆಮೆಟೊ ಬೆಳೆದಿದ್ದಕ್ಕೆ ಈಗ ಯುವ ರೈತ ತಿಂಗಳಲ್ಲೇ ಲಕ್ಷಾಧೀಶನಾಗಿದ್ದಾನೆ. ಇದೆ ಅಲ್ವಾ ಭೂ ತಾಯಿ ಚಮತ್ಕಾರ ಅಂದ್ರೆ.

Leave a Reply

Your email address will not be published. Required fields are marked *