ಚಾಮರಾಜನಗರ : ದೊಡ್ಮನೆ ಕುಡಿಯನ್ನು ಪ್ರೀತಿಯಿಂದ ಬರಮಾಡಿಕೊಂಡು ಅದ್ದೂರಿಯಾಗಿ ಸಾಂಗ್ ಬಿಡುಗಡೆ ಮಾಡಿದ ಡೊಡ್ಮನೆ ಅಭಿಮಾನಿಗಳು.!

ದೊಡ್ಡನೆಯ ಕುಡಿ ಯವರಾಜ್ ಕುಮಾರ್ ಸ್ಯಾಂಡಲ್ವುಡ್ಗೆ ಕಾಲಿಡಲು ರೆಡಿಯಾಗಿದ್ದಾರೆ. ಯುವ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆಲ್ಲಲು ಮುಂದಾಗಿದ್ದಾರೆ. ಅದಕ್ಕಾಗಿ ಇಂದು ಅಭಿಮಾನಿಗಳ ಬಹುನಿರೀಕ್ಷೆಯ ಯುವ ಸಿನಿಮಾದ ಫಸ್ಟ್ ಹಾಡು ರಿಲೀಸ್ ಆಗಿದೆ. ಚಾಮರಾಜನಗರದ ಅದ್ದೂರಿ ವೇದಿಕೆಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಯುವರಾಜನ ಇಂಟ್ರಡಕ್ಷನ್ ಹಾಡು ಇದಾಗಿದ್ದು, ಮಾಸ್ ಲುಕ್ನಲ್ಲಿ ದೊಡ್ಡನೆ ಕುಡಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಂತೂ ಯುವರಾಜ್ ಕುಮಾರ್ನನ್ನು ನೋಡಿ ಜೈಕಾರ ಕೂಗಿದ್ದಾರೆ. ಜೊತೆಗೆ ಹಾಡಿಗೂ ಒಳ್ಳೆಯ ರೆಸ್ಪಾನ್ಸ್ ನೀಡಿದ್ದಾರೆ.

ಯುವರಾಜ್ ಕುಮಾರ್ ಸಾಂಗ್ ಬಿಡುಗಡೆಗೆಂದು ವೇದಿಕೆ ಏರುತ್ತಿದ್ದಂತೆಯೇ ಅಭಿಮಾನಿಗಳು ಸಂತಸದಿಂದ ಕುಪ್ಪಳಿಸಿ ಕುಣಿಸಿದ್ದಾರೆ. ವೇದಿಕೆಗೆ ಬರ್ತಿದ್ದಂತೆ ಯುವ ಬಾಸ್, ಯುವ ಬಾಸ್ ಎಂದು ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಜೋಶ್ ಕಂಡು ಯುವರಾಜ್ ಫುಲ್ ಖುಷ್ ಆಗಿದ್ದಾರೆ.

ವೀಡಿಯೋ ನೋಡಿ.

ದೊಡ್ಡಮನೆಗೆ ಚಾಮರಾಜನಗರ ತವರು. ಈ ತವರಿನಿಂದಲೆ ಇಂದು ಸಾಂಗ್ ರಿಲೀಸ್ ಮಾಡ್ತಿದ್ದೇವೆ ಎಂದು ನಿರ್ದೇಶಕ ಆನಂದ್ ಸಂತೋಷ್ ರಾಮ್ ಹೇಳಿದ್ದರು. ಅದರಂತೆಯೇ ಇದೇ ಜಿಲ್ಲೆಯ ಐದು ತಾಲೂಕಿನ ಐವರು ವ್ಯಕ್ತಿಗಳಿಂದ ಯುವ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಎಲ್ಲ ವಯೋಮಾನದ ಐವರಿಂದ ಯುವ ಚಿತ್ರದ ಫಸ್ಟ್ ಸಾಂಗ್ ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *