ಆರ್ಆರ್ಬಿ ಹುದ್ದೆಗಳು: ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್ ವಲಯದಲ್ಲಿನ (RRB) 9,995 ಹುದ್ದೆಗಳಿಗೂ ಕೂಡ ಐಬಿಪಿಎಸ್ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 27.ನಿಗದಿತ ಹುದ್ದೆಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ 386, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ 200 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಪದವಿ ಓದಿರುವ ಗರಿಷ್ಠ 40 ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ 175 ರೂ. ಇತರ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ibps.inಇಲ್ಲಿಗೆ ಭೇಟಿ ನೀಡಿ.
SBI ಬ್ಯಾಂಕ್ನಿಂದ ಭರ್ಜರಿ ಜಾಬ್ ಆಫರ್: 1040 ಹುದ್ದೆಗೆ ಅರ್ಜಿ ಆಹ್ವಾನ