ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸೈಡ್‌ ಎ ಸೈಡ್ ಬಿ ಅಂತ ಎರಡು ಭಾಗಗಳಲ್ಲಿ ಬರ್ತಿದೆ..

ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸೈಡ್‌ ಎ ಸೈಡ್ ಬಿ ಅಂತ ಎರಡು ಭಾಗಗಳಲ್ಲಿ ಬರ್ತಿದೆ.

ಸೀಕ್ವೆಲ್ ಗಳು ಈಗೇನೂ ಹೊಸತಲ್ಲ. ಇತ್ತೀಚೆಗಂತೂ ಅದು ಮಾಮೂಲಿ ಎಂಬಷ್ಟು ಅತಿಯಾಗಿದೆ.

ಕೆಲವು ಸೀಕ್ವೆಲ್ ಗಳು ಪ್ಲಾನಲ್ಲೇ ಇರಲ್ಲ. ಸಿನಿಮಾ ಗೆದ್ದಮೇಲೆ ಅದಕ್ಕೆ ಹುಟ್ಕೊಳೋ ಅಂಥವು.

ಇನ್ನು ಕೆಲವು ಸರಿಯಾದ ಪ್ಲಾನಲ್ಲೇ ಭಾಗಗಳಾಗಿ ಸ್ಕ್ರಿಪ್ಟಿಂಗ್ ಆಗಿರುತ್ತವೆ.

ಇನ್ನು ಕೆಲವನ್ನು ಹತ್ತಾರು ಭಾಗಗಳಲ್ಲಿ ಹೇಳ್ತಾ ಹೋಗೋದು ಎಂಬಂತೆಯೇ ಪ್ರಾಜೆಕ್ಟ್ ಎಂಬ ರೀತಿಯಲ್ಲಿ ಯೋಜಿಸಲಾಗಿರುತ್ತದೆ.

ಇನ್ನು ಕೆಲವು ಅಸಲಿಗೆ ಸೀಕ್ವೆಲ್ ಆಗಿರೋದಿಲ್ಲ. ಆದರೂ ಹೆಸರು ಮಾತ್ರ ಕ್ಯಾರಿ ಮಾಡ್ಕೊಂಡ್ ಹೋಗ್ತವೆ. ಕಮರ್ಷಿಯಲ್ ಕಾರಣಕ್ಕೆ

ಇನ್ನು ಕೆಲವು ಒಂದು ಭಾಗದಲ್ಲಿ ಹೇಳೋಕೆ ದೊಡ್ಡದಾಗತ್ತೆ ಅನ್ನೋ ಕಾರಣಕ್ಕೆ ಎರಡು ಭಾಗಗಳಾಗಿ ಬರುವಂಥವು.

 

ಇನ್ನು ಕೆಲವು ಎರಡು ಭಾಗ ಅಂತ ಅನೌನ್ಸ್ ಆಗಿ ಮೊದಲನೇದು ಫ್ಲಾಪ್‌ಆದ ಕೂಡಲೇ‌ ಸೀಕ್ವೆಲ್ ಕ್ಯಾನ್ಸಲ್ ಆಗುವಂಥವು.

 

ಕೆಜಿಎಫ್.. ಬಾಹುಬಲಿ.. ಕಾಂತಾರ…ಫಾಸ್ಟ್ & ಫ್ಯೂರಿಯಸ್… ಡಾನ್.. ಗೋಲ್ ಮಾಲ್ ಸೀರೀಸ್.. ಸಾಂಗ್ಲಿಯಾನ, ರತಿ ವಿಜ್ಞಾನ, ತೋತಾಪುರಿ ಹೆಡ್ ಬುಷ್ ಹೀಗೆ ನೂರಾರು ಉದಾಹರಣೆಗಳು ಮೇಲೆ ಹೇಳಿದ ಎಲ್ಲ ಕೆಟಗರಿಗಳಲ್ಲಿ ಹಂಚಿಹೋಗುವಂಥ ಸಿನಿಮಾಗಳು. ಯಾವುದು ಯಾವುದರಡಿ ಬರತ್ತೆ ಅಂತ ನೀವೇ ನೋಡ್ಕಳಿ.

 

ಸಪ್ತಸಾಗರದಾಚೆ ಎಲ್ಲೋ ಭಿನ್ನ ಅನಿಸುವುದು…ಅಟ್ ಲೀಸ್ಟ್ ಕನ್ನಡದ ಮಟ್ಟಿಗೆ ಭಿನ್ನ ಅನಿಸುತ್ತಿರುವುದು ಅದರ ರಿಲೀಸ್‌ಡೇಟ್ ಗಳನ್ನು ಅನೌನ್ಸ್ ಮಾಡಿರೋ ಮೂಲಕ.ಹಾಗೂಎರಡು ಭಾಗಗಳು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ತೆರೆಗೆ ಬರುತ್ತಿರುವುದರ ಮೂಲಕ.

ಇದು ಅಪರೂಪದ್ದು.

ಇಲ್ಲಿ ನಂಗೆ ನಿರ್ದೇಶಕ ಮತ್ತು ಚಿತ್ರತಂಡದ ಖಚಿತತೆ ಕ್ಲಾರಿಟಿ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ.

 

ಸ್ಕ್ರಿಪ್ಟ್ ಲೆವೆಲ್ಲಿಂದ ಟೈಟಲ್ ಘೋಷಣೆ ಹೊತ್ತಿಂದ ಇಂದಿನ ತನಕ ನಿರೀಕ್ಷೆ ಭರವಸೆ ಹುಟ್ಟಿಸುತ್ತಲೇ ಬಂದಿರುವ ರಕ್ಷಿತ್- ಹೇಮಂತ್ ಕಾಂಬಿನೇಷನ್ ನಿನ್ನೆಯಿಂದ ಅದನ್ನು ದುಪ್ಪಟ್ಟಾಗಿಸಿದೆ.

ಗೆಲುವು ಸೋಲುಗಳಾಚೆ ಇದೊಂದು ಶ್ರದ್ಧೆ ಮತ್ತು ವಿಪರೀತ ಪ್ಯಾಶನ್ನಿನಿಂದ ರೂಪಿಸಿರೋ ಪ್ರಾಜೆಕ್ಟ್ ಎಂಬುದರ ಬಗ್ಗೆ ಯಾವ ಸಂಶಯವೂ ಇಲ್ಲ. ಹಾಗಾಗಿ ಹೆಚ್ಚಿನ ನಿರೀಕ್ಷೆ ಮತ್ತು ಗೆಲ್ಲಲೆಂಬ ಪ್ರಾರ್ಥನೆ.‌

 

ಏನಂದ್ರೆ … ಹೀಗೆ ಸೀಕ್ವೆಲ್ ಪ್ಲಾನ್ ಇದ್ದಿದ್ರೆ ಅದೂ ಒಂದೇ ತಿಂಗಳ ಅಂತರದಲ್ಲಿ ಬರೋ ಹಾಗಿದ್ದಿದ್ರೆ.. ಈ ಸಿನಿಮಾನ ಸೈಡ್ ಎ ಸೈಡ್ ಬಿ ಅಂತ ಬಿಡೋ ಬದ್ಲು…

 

ಸಪ್ತಸಾಗರದೀಚೆ ಎಲ್ಲೋ

ಸಪ್ತಸಾಗರದಾಚೆ ಎಲ್ಲೋ

ಅಂತ ಬಿಡ್ಬಹುದಿತ್ತಲ್ವಾ ಅಂತ ತಮಾಷೆಗೆ ಅಂದ್ಕೊಂಡೆ.

 

ಉಹೂಂ.. ಡೈರೆಕ್ಟರ್ ನ ಪರಿಕಲ್ಪನೆಯನ್ನು ಅಗೌರವಿಸಲಾರೆ. ಕ್ಲಾಸ್‌ಟೈಟಲನ್ನು ಅಪಹಾಸ್ಯ ಮಾಡಲಾರೆ..

ಅದು ಸರಿ ಇದೆ. ಚೆಂದ ಇದೆ

ಆಲ್ ದ ಬೆಸ್ಟ್ ಸಪ್ತಸಾಗರದಾಚೆ‌ ಎಲ್ಲೋ ಇರುವ ತಂಡಕ್ಕೆ…

Leave a Reply

Your email address will not be published. Required fields are marked *