ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ವಂಚನೆ ಆರೋಪ: ನ್ಯಾಯಕ್ಕಾಗಿ ಇಂಟೀರಿಯರ್ ಡಿಸೈನರ್ ಅಳಲು

ನೂತನ ಮನೆಯ ಇಂಟೀರಿಯರ್ ಕೆಲಸ ಮಾಡಿಸಿದ ನಂತರ ಬಾಕಿ ಹಣವನ್ನು ನೀಡದೆ ವಂಚನೆ ಎಸಗಿದ್ದಲ್ಲದೆ ದಬ್ಬಾಳಿ ನಡೆಸಿರುವುದಾಗಿ ಆರೋಪಿಸಿ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರನ ವಿರುದ್ಧ ಇಂಟೀರಿಯರ್ ಡಿಸೈನರ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಎಫ್​ಐಆರ್ ದಾಖಲಿಸುತ್ತಿಲ್ಲ, ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ರಾಮನಗರ: ನೂತನ ಮನೆಯ ಇಂಟೀರಿಯರ್ ಕೆಲಸ ಮಾಡಿಸಿದ ನಂತರ ಬಾಕಿ ಹಣವನ್ನು ನೀಡದೆ ವಂಚನೆ ಎಸಗಿದ ಆರೋಪ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷ  ಹುಲುವಾಡಿ ದೇವರಾಜು ಪುತ್ರನ ವಿರುದ್ಧ ಇಂಟೀರಿಯರ್ ಡಿಸೈನರ್  ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಪೊಲೀಸರು ಎಫ್​ಐಆರ್ ದಾಖಲಿಸುತ್ತಿಲ್ಲ. ಹೀಗಾಗಿ ನನಗಾ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಹುಲುವಾಡಿ ದೇವರಾಜು ಪುತ್ರ ಲಿಖಿತ್ ಬಾಕಿ 9‌ ಲಕ್ಷ ಹಣವನ್ನೂ ನೀಡದೆ ದಬ್ಬಾಳಿಕೆ ನಡೆಸುತ್ತಿರುವದಾಗಿ ಇಂಟೀರಿಯರ್ ಡಿಸೈನರ್ ಕಿಶೋರ್ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ನೀಡಿ ತಿಂಗಳಾದರೂ ಪೊಲೀಸರು ಎಫ್​ಐಆರ್ ದಾಖಲಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹುಲುವಾಡಿ ದೇವರಾಜು ಪುತ್ರ ಲಿಖಿತ್​ ನೂತನ ಮನೆ ನಿರ್ಮಾಣ ಮಾಡಿದ್ದಾರೆ. ಈ ಮನೆಯ ಇಂಟೀರಿಯರ್ ಕೆಲಸವನ್ನು ಕಿಶೋರ್ ಎಂಬವರಿಗೆ ನೀಡಿದ್ದರು. ಅದರಂತೆ ಕಿಶೋರ್ ತಮಗೆ ವಹಿಸಿದ ಕೆಲಸದಲ್ಲಿ ಶೇ.80ರಷ್ಟು ಪೂರ್ಣಗೊಳಿಸಿದ್ದಾರೆ. ಆದರೆ ಲಿಖಿತ್ ಹಣ ನೀಡದೆ ಸತಾತಿಸುತ್ತಿದ್ದನು. ಮಾತ್ರವಲ್ಲದೆ, ಬಾಕಿ ಕೆಲಸವನ್ನು ಬೇರೋಬ್ಬ ಗುತ್ತಿಗೆದಾರರಿಗೆ ವಹಿಸಿ ಕೆಲಸವನ್ನು ಪೂರ್ಣಗೊಳಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನೂತನ ಮನೆಯಲ್ಲಿ ಮಾಡಿದ್ದ ಶೇ. 80ರಷ್ಟು ಕೆಲಸದ ಬಾಕಿ 9‌ ಲಕ್ಷ ಹಣವನ್ನು ನೀಡದೆ ದಬ್ಬಾಳಿಕೆ ನಡೆಸುತ್ತಿರುವುದಾಗಿ ಆರೋಪಿಸಿ ಕಿಶೋರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರು ನೀಡಿ ತಿಂಗಳು ಕಳೆದರೂ ಪೊಲೀಸರು ಮಾತ್ರ ಎಫ್​ಐಆರ್ ದಾಖಲಿಸಿಕೊಂಡಿಲ್ಲ. ಹೀಗಾಗಿ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಕಿಶೋರ್ ಅಳಲು ತೋಡಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *