ಭ್ರಷ್ಟಾಚಾರ ಆರೋಪ ಹೊತ್ತರೂ ಮಾಡಾಳ್ ವಿರುದ್ಧ ಗೆಲುವು ಸುಲಭವ..?

ಸ್ಪೆಷಲ್ ಡೆಸ್ಕ್ ಬೆಂಗಳೂರು:

ಹೌದು ಕಳೆದ ಎರಡು ದಿನಗಳಿಂದ ರಾಜ್ಯದ್ಯಂತ ಇದೇ ಚರ್ಚೆ ಶಾಸಕ ಮಾಡಲ್ ವಿರೂಪಾಕ್ಷಪ್ಪ ಪುತ್ರ KSDL ಕಂಪನಿಗೆ ರಾಸಾಯನಿಕ ಸರಬರಾಜು ಮಾಡುವ ಟೆಂಡರ್ ಸಲುವಾಗಿ ಖಾಸಗಿ ಕಂಪನಿಯೊಂದಿಗೆ ಟೆಂಡರ್ ನೀಡುವ ಸಲುವಾಗಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು ಈಗ ರಾಜ್ಯಾದ್ಯಂತ ಇದೇ ಮಾತು.

ಭ್ರಷ್ಟಾಚಾರ ಆರೋಪ ಅಕ್ರಮ ಆಸ್ತಿ ಗಳಿಕೆ ಇನ್ನೂ ಹಲವಾರು ಆರೋಪಗಳು ಕೇಳಿ ಬಂದರು ಚೆನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ\ ಮಾಡಾಳ್ ಮಲ್ಲಿಕಾರ್ಜುನ ವಿರುದ್ಧ ಗೆಲುವು ಈ ಬಾರಿ ಅಷ್ಟು ಸುಲಭವಲ್ಲ ಎಂದು ವಿರೋಧ ಪಕ್ಷದವರೇ ಮಾತನಾಡಿಕೊಳ್ಳುತ್ತಾರೆ ಕ್ಷೇತ್ರದ ಮತದಾರರ ಅಭಿಪ್ರಾಯ ವಿಚಾರಿಸಿದಾಗ ಭ್ರಷ್ಟಾಚಾರ ಆರೋಪ ಏನೇ ಇರಲಿ ನಮ್ಮ ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಮತ್ತು ಕೊರೊನಾ ಕಷ್ಟದ ಸಮಯದಲ್ಲಿ ಜನಗಳೊಂದಿಗೆ ನಿಂತಿದ್ದಾರೆ ಹಾಗಾಗಿ ಅವರನ್ನು ಈ ಕಾರಣಕ್ಕಾಗಿ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕ್ಷೇತ್ರದಲ್ಲಿ ಮಾತುಗಳು ಹರಿದಾಡುತ್ತಿವೆ.

ಇದಕ್ಕೆ ಉದಾಹರಣೆ ಎಂದರೆ ಕಳೆದ ಎರಡು ದಿನದ ಹಿಂದೆ ನಡೆದ ಖಾಸಗಿ ವಾಹಿನಿಯ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕೂಡ ಮಾಡಲ್ ವಿರೂಪಾಕ್ಷಪ್ಪ ಮುಂದೆ ಇದ್ದಾರೆ ಇದರ ಅರ್ಥ ಕ್ಷೇತ್ರದ ಜನ ಭ್ರಷ್ಟಾಚಾರದ ಆರೋಪವಿದ್ದರೂ ಅವರು ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಮಾಡಿದಂತ ಅಭಿವೃದ್ಧಿ ಕೆಲಸಗಳು ಅವರನ್ನು ಇನ್ನು ಕೈ ಬಿಟ್ಟಿಲ್ಲ.ಜೊತೆಗೆ ತಾವು ಹಾಗೂ ತಮ್ಮ ಪುತ್ರ ಮಲ್ಲಿಕಾರ್ಜುನ ಸಂಪಾದಿಸಿದ ಜನ ಮಾಡಾಳ್ ಕೈ ಬಿಡುವ ಸಾಧ್ಯತೆ ಇಲ್ಲ ,

ದಿನೇ ದಿನೇ ಮಾಡಲ್ ಮಲ್ಲಿಕಾರ್ಜುನ ವರ್ಚಸ್ಸು ಜಾಸ್ತಿ ಆಗುತ್ತಿದೆ ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಈ ಕೆಲಸಕ್ಕೆ ಕೈ ಹಾಕಿದ್ದಾರೆ ಜೊತೆಗೆ ಅನೇಕ ವರ್ಷಗಳಿಂದ ಲಾಭ ವನ್ನ ಪಡೆಯದ ಕೆ.ಎಸ್. ಡಿ.ಸಿ.ಎಲ್. ವಿರೂಪಾಕ್ಷಪ್ಪ ಅವರು ಅದರ ಅಧ್ಯಕ್ಷರಾದ ಮೇಲೆ ಕೋಟಿ ಗಟ್ಟಲೆ ಲಾಭ ಪಡೆದಿದೆ , ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾದಾಗಿನಿಂದ ವಿರುಪಾಕ್ಷಪ್ಪ ಅವರ ವರ್ಚಸ್ಸು ಈ ಪ್ರಕರಣದಿಂದ ಕಮ್ಮಿ ಆದಂತೆ ಕಾಣುತ್ತಿಲ್ಲ .

ಚನ್ನಗಿರಿ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಗ್ಗೆ ಬಿಜೆಪಿ ಅಭ್ಯರ್ಥಿ ಬಗ್ಗೆ ಗೊಂದಲ .
ಚುನಾವಣೆ ಸಂದರ್ಭದಲ್ಲಿ ಈ ಘಟನೆ ನಡೆದಿರವುದು ವಿಪಕ್ಷಗಳಿಗೆ ಬಿಜೆಪಿ ಯಿಂದ ಅಭ್ಯರ್ಥಿ ಯಾರಾಗಬಹುದು ಎಂದು ಲೆಕ್ಕಾಚಾರ ಆರಂಭಿಸಿದ್ದಾರೆ ಆದ್ರೆ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿಯಿಂದ ಮಾಡಲ್ ವಿರೂಪಾಕ್ಷಪ್ಪ ಹಾಗೂ ಮಲ್ಲಿಕಾರ್ಜುನ ಇವರನ್ನು ಬಿಟ್ಟು ಯಾವ ಅಭ್ಯರ್ಥಿ ಬಿಜೆಪಿಯಿಂದ ನಿಂತರು ಸೋಲುವುದು ಗ್ಯಾರಂಟಿ ಎಂಬ ಲೆಕ್ಕಾಚಾರ ಇದೆ

ವಿರೋಧಿಗಳಿಗೆ ನಡುಕ
ಮಾಡಲ್ ಮಲ್ಲಿಕಾರ್ಜುನ ವರ್ಚಸ್ಸು ದಿನೇ ದಿನೇ ಜಾಸ್ತಿ ಆದಂತೆ ವಿರೋಧಿಗಳಲ್ಲಿ ನಡುಕ ಪ್ರಾರಂಭ ಆಗಿತ್ತು
ಸಾಮಾಜಿಕ ಜಾಲತಾಣದಲ್ಲಿ ಕೊಡ ಮಲ್ಲಿಕಾರ್ಜುನ ಆಕ್ಟಿವ್
ಮಾಡಲ್ ಮಲ್ಲಿಕಾರ್ಜುನ ಜನರ ಬಳಿಗೆ ತಲುಪಲು ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದರು ,ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತಿದರು ದಿನ ಬೆಳಗ್ಗೆಯಿಂದ ರಾತ್ರಿ ವರೆಗೂ ಕ್ಷೇತ್ರದ ತುಂಬ ಸಂಚಾರ ಮಾಡಿ ಜನರ ಬಳಿ ಬರುತ್ತಿದ್ದರು .

ನೈತಿಕ ಹೊಣೆ ಹೊತ್ತು KSDL ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ,

Leave a Reply

Your email address will not be published. Required fields are marked *