ನೈತಿಕ ಹೊಣೆ ಹೊತ್ತು KSDL ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ,

ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಪುತ್ರನ ದುಡ್ಡಿನ ಗಂಟು ಸಂಕಷ್ಟ ತಂದಿಟ್ಟಿದೆ. ಸಿಎಂ ಸೂಚನೆ ಮೇರೆಗೆ ಕರ್ನಾಟಕ ಸಾಬೂನು & ಮಾರ್ಜಕ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ದಾವಣಗೆರೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ (Madal Virupakshappa) ಪುತ್ರನ ದುಡ್ಡಿನ ಗಂಟು ಸಂಕಷ್ಟ ತಂದಿಟ್ಟಿದೆ. ಮಾಡಾಳ್ ವಿರುಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್​ಡಿಎಲ್)​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪುತ್ರ ಮಾಡಾಳ್ ಪ್ರಶಾಂತ್​ ಬಂಧನ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದರು. ಅದರಂತೆ ವಿರೂಪಾಕ್ಷಪ್ಪ ತಮ್ಮ ಆಪ್ತರ ಮೂಲಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಷಡ್ಯಂತ್ರ ನಡೆಸಲಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದ;ಲ್ಲಿ ಉಲ್ಲೇಖಿಸಿದ್ದಾರೆ. ರಾಜೀನಾಮೆ ಪತ್ರವನ್ನು ತಮ್ಮ ಆಪ್ತರೊಂದಿಗೆ ಸಿಎಂ ಕಚೇರಿ ರವಾನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಆಪ್ತರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್​ಡಿಎಲ್)​ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ಮುಜುಗರರಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡುವಂತೆ ಸಿಎಂ ಸೂಚನೆ ರವಾನಿಸಿದ್ದರು,

ಗೌಪ್ಯ ಸ್ಥಳದಲ್ಲಿ ಮಾಡಾಳ್ ವಿರೂಪಾಕ್ಷಪ್ಪ

ಇನ್ನು ಬೆಂಗಳೂರಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮತ್ತೊಂದೆಡೆ ಪುತ್ರನ ಬಂಧನವಾಗಿದ್ದರಿಂದ ಆತಂಕಗೊಂಡಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗೌಪ್ಯ ಸ್ಥಳದಲ್ಲಿ ಇದ್ದುಕೊಂಡೇ ಮುಂದಿನ ಕಾನೂನು ಹೋರಾಟ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕ ಮಾಡಾಳ್ ಬಂಧನ ಸಾಧ್ಯತೆ

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಸಾಧ್ಯತೆ ಇದೆ. ತಂದೆ ಮಾಡಾಳ್ ಪರವಾಗಿ ಪ್ರಶಾಂತ್ ಹಣ ಸ್ವೀಕರಿಸುತ್ತಿದ್ದಾರೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಶಾಸಕ ಮಾಡಾಳ್ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.

 ಬಂಧನ ಮಾಡಲು ಕಾರಣ ಏನು

1 ಪ್ರಶಾಂತ್ ಹಾಗೂ ವಿರುಪಾಕ್ಷಪ್ಪ ತಂದೆ ಮಗ 2 ಟೆಂಡರ್ ಕರೆದಿದ್ದು ಕೆ ಎಸ್ ಡಿ ಎಲ್ ಕಚ್ಚಾ ವಸ್ತು ಸರಬರಾಜು ಸಂಬಂಧ 3 ಆದರೆ ಪ್ರಶಾಂತ್ BWSSB ಅಧಿಕಾರಿ 4 ಆದರೆ BWSSB ಹಾಗೂKSDL ಗೂ ಯಾವುದೇ ಸಂಬಂಧ ಇಲ್ಲ 5 ಹೀಗಾಗಿ ತಂದೆಯ ಪರವಾಗಿಯೇ ಹಣ ಸ್ವೀಕರಿಸುತ್ತಿರುವುದು ಪ್ರಾಥಮಿಕವಾಗಿ ಧೃಡ 6 ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮಾಡಾಳ್ ವಿರೂಪಾಕ್ಷಪ್ಪ ಬಂಧನ.

ನೇರ ನೇರ ಭೇಟಿ ನಂತರ ಈಶ್ವರಪ್ಪ ರಾಜೀನಾಮೆ ನಿರ್ಧಾರ

Leave a Reply

Your email address will not be published. Required fields are marked *