ದೇಶ ವಿಭಜನೆಗೆ ಒಪ್ಪಿದ್ದಷ್ಟೇ ಗಾಂಧಿ ನೆಹರು ಪಟೇಲ್ ಮಾಡಿದ ತಪ್ಪಾ..?

ಇತಿಹಾಸವನ್ನು Dispassionate ಅಥವಾ ನಿರ್ಭಾವುಕರಾಗಿಯೇ ಓದಬೇಕಾಗುತ್ತದೆ. ಹಾಗೆ ಓದಿದರೂ ಪುಸ್ತಕ ಕೆಳಗಿಟ್ಟ ನಂತರ ಮನಸ್ಸು ಕೆಲವೊಮ್ಮೆ ಉದ್ವೇಗಕ್ಕೊಳಗಾಗುತ್ತದೆ. ನಮ್ಮ ನಾಯಕರು ಏಕೆ ಆ ತಪ್ಪುಗಳನ್ನೆಸಗಿದರು? ಅವರು ಎಸಗಿದ ತಪ್ಪಿನಿಂದಾಗಿಯೇ ಅಲ್ಲವೆ ನಾವೀಗ ಕಷ್ಟ ಅನುಭವಿಸುತ್ತಿರುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. “ಮಹಮದ್ ಅಲಿ ಜಿನ್ನಾ ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?” ಪುಸ್ತಕವನ್ನು ಬರೆದು, ಬಿಡುಗಡೆ ಮಾಡಿಯಾದ ನಂತರವೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತಾ ಇವೆ.

ಪಾಕ್‌ಸ್ತಾನ್!

ಪಂಜಾಬ್, ಅಫ್ಘಾನಿಸ್ತಾನ್, ಕಾಶ್ಮೀರ, ಸಿಂದ್ ಹಾಗೂ ಬಲೂಚಿಸ್ತಾನ್ ಈ ಐದು ಪ್ರಾಂತಗಳಲ್ಲಿ ಮೊದಲ ನಾಲ್ಕರ ಮೊದಲ ಅಕ್ಷರ ಹಾಗೂ ಕೊನೆಯದರ ಎರಡು ಅಕ್ಷರ ಸೇರಿ ‘ಪಾಕ್‌ಸ್ತಾನ್’ ಎಂಬ ಹೆಸರು ಹುಟ್ಟಿಕೊಂಡಿತು. ಸುಲಭ ಉಚ್ಚಾರಣೆ ಸಲುವಾಗಿ ಮಧ್ಯದಲ್ಲೊಂದು ‘ಐ’ ಸೇರಿಸಿದ್ದು ಆನಂತರ. ಹೀಗೆ ‘ಪಾಕಿಸ್ತಾನ’ವಾಯಿತು. ‘ಪಾಕ್‌ಸ್ತಾನ ಎಂಬ ಇಂಥದ್ದೊಂದು ಪ್ರತ್ಯೇಕ ರಾಷ್ಟ್ರದ ಕಲ್ಪನೆಯನ್ನು ಮೊದಲಿಗೆ ಕೊಟ್ಟವನು ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಚೌಧರಿ ರಹಮತ್ ಅಲಿ, 1933ರಲ್ಲಿ ಅದುವರೆಗೂ ಪ್ರತ್ಯೇಕ ಮತದಾನ, ಪ್ರತ್ಯೇಕ ಆಡಳಿತ, ಹೆಚ್ಚಿನ ಅಧಿಕಾರ, ವಿಶೇಷ ಸವಲತ್ತುಗಳಿಗಾಗಿ ಬೇಡಿಕೆ ಇಡುತ್ತಾ ಬಂದಿದ್ದ ಮುಸ್ಲಿಂ ಲೀಗ್ 1940, ಮಾರ್ಚ್ 23ರಂದು ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ರಾಷ್ಟ್ರ ರಚನೆಗೆ ಕರೆಕೊಟ್ಟಿತು.

1940, ಮಾಚ್ 26ರಂದು ಲಾಹೋರ್‌ನಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ಲೀಗ್ ಶೃಂಗವನ್ನುದ್ದೇಶಿಸಿ ಮಾತನಾಡಿದ ಮಹಮದ್ ಅಲಿ ಜಿನ್ನಾ ಏಕೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕೆನ್ನುವುದನ್ನು ಹೀಗೆ ವಿವರಿಸುತ್ತಾರೆ.

“ಹಿಂದೂ ಹಾಗೂ ಇಸ್ಲಾಂ ಎರಡು ಪ್ರತ್ಯೇಕ ಧರ್ಮಗಳು, ಪ್ರತ್ಯೇಕ ಆದರ್ಶಗಳು, ವಿಭಿನ್ನ ಸಾಮಾಜಿಕ ಹಾಗೂ ಸಾಹಿತ್ಯಕ ವಿಧಿವಿಧಾನವನ್ನು ಹೊಂದಿವೆ. ಅವುಗಳ ಮಧ್ಯೆ ಅಂತರ್ ಧರ್ಮ ವಿವಾಹವಾಗಲಿ, ಔತಣವಾಗಲಿ ಇಲ್ಲ. ನಿಜ ಹೇಳಬೇಕೆಂದರೆ ಅವೆರಡೂ ತದ್ವಿರುದ್ಧ ಹಾಗೂ ಕಲ್ಪನೆಗಳನ್ನು ಹೊಂದಿರುವ ಪ್ರತ್ಯೇಕ ನಾಗರಿಕತೆಗಳು. ಅವುಗಳ ಜೀವನ ಕಲ್ಪನೆ, ತ್ವಗಳು ವಿಭಿನ್ನ ಎರಡೂ ಧರ್ಮಗಳು ವಿಭಿನ್ನ ಇತಿಹಾಸ, ಪರಂಪರೆಯಿಂದ ಪ್ರೇರಣೆ ಪಡೆಯುತ್ತವೆ. ಪ್ರತ್ಯೇಕ ಮಹಾಗ್ರಂಥಗಳು, ಮಹಾ ಪುರುಷರನ್ನು ಹೊಂದಿವೆ. ಬಹಳಷ್ಟು ಸಂದರ್ಭಗಳಲ್ಲಿ ಒಂದು ಸಮುದಾಯಕ್ಕೆ ಯಾರು ಮಹಾಪುರುಷ ಎನಿಸುತ್ತಾನೋ ಆತ ಮತ್ತೊಂದು ಸಮುದಾಯಕ್ಕೆ ಖಳನಂತೆ ಕಾಣುತ್ತಾನೆ. ಇಂತಹ ತದ್ವಿರುದ್ಧ ಧರ್ಮಗಳೆರಡನ್ನು ಒಂದು
ಬಹುಸಂಖ್ಯಾತ, ಮತ್ತೊಂದು ಅಲ್ಪಸಂಖ್ಯಾತ ಎಂಬ ಕಲ್ಪನೆಯೊಂದಿಗೆ ಒಂದೇ ರಾಷ್ಟ್ರದ ಚೌಕಟ್ಟಿನಡಿ ತಂದರೆ ಎರಡೂ ಸಮುದಾಯಗಳ ಮಧ್ಯೆ ವೈಮನಸ್ಸು ಬಂದು ಅಂತಿಮವಾಗಿ ನಾಶಗೊಳ್ಳುತ್ತವೆ‘ ಎಂದು ಜಿನ್ನಾ ವಾದಿಸಿದರು.

ಆ ಮೂಲಕ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚನೆಯಾಗಲೇಬೇಕು ಎಂದು ಪಟ್ಟು ಹಿಡಿದರು. 1942ರಲ್ಲಿ ಗಾಂಧೀಜಿ ಕರೆಕೊಟ್ಟಕ್ವಿಟ್ ಇಂಡಿಯಾ ಚಳವಳಿಗೂ ವಿರೋಧ ವ್ಯಕ್ತಪಡಿಸಿದರು, ಬ್ರಿಟಿಷರಿಗೆ ಬೆಂಬಲ ನೀಡಿದರು. ಇಷ್ಟಾಗಿಯೂ ಗಾಂಧೀಜಿ ಮನವೊಲಿಕೆ ಪ್ರಯತ್ನವನ್ನು ಬಿಡಲಿಲ್ಲ. 1944, ಸೆಪ್ಟೆಂಬರ್ 7ರಿಂದ 27ರವರೆಗೂ ಗಾಂಧೀಜಿ ಮತ್ತು ಜಿನ್ನಾ ನಡುವೆ 14 ಸುತ್ತು ಮಾತುಕತೆಗಳು ನಡೆದವು. ಆದರೂ ಜಿನ್ನಾ ಪಟ್ಟು ಬಿಡಲಿಲ್ಲ. ನಮ್ಮದು ಪ್ರತ್ಯೇಕ ಧರ್ಮ, ಸಂಸ್ಕೃತಿ, ಪ್ರತ್ಯೇಕ ರಾಷ್ಟ್ರ ಬೇಕೇಬೇಕು ಎಂದೇ ಪ್ರತಿಪಾದಿಸಿದರು. ಆದರೆ ಭಾರತದಲ್ಲೇ ಹುಟ್ಟಿ ಬೆಳೆದು, ಹಿಂದೂ ಪೂರ್ವಜರನ್ನು ಹೊಂದಿದ್ದರೂ ತಾವೇ ಪ್ರತ್ಯೇಕ, ತಮ್ಮದೇ ಪ್ರತ್ಯೇಕ ಎಂಬ ಜಿನ್ನಾ ಮತ್ತು ಮುಸ್ಲಿಂ ಲೀಗ್ ಪ್ರತಿಪಾದನೆಯ ಬಗ್ಗೆ ಗಾಂಧೀಜಿಗೆ ಎಷ್ಟು ಹತಾಶೆಯುಂಟಾಯಿತೆಂದರೆ ಜಿನ್ನಾಗೆ ಪತ್ರವೊಂದನ್ನು ಬರೆದರು. “ಮತಾಂತರ ಹೊಂದಿದವರ ಒಂದು ಸಂಘಟನೆ ಮತ್ತು ಅದರ ಅನುಯಾಯಿಗಳು ಮೂಲ ಒಂದೇ ಆಗಿದ್ದರೂ ನಾವೇ ಪ್ರತ್ಯೇಕ ರಾಷ್ಟ್ರ ಎಂದು ಪ್ರತಿಪಾದಿಸುತ್ತಿರುವುದಕ್ಕೆ ಇತಿಹಾಸದಲ್ಲಿ ಯಾವ ಉದಾಹರಣೆಗಳೂ ನನಗೆ ಕಾಣುತ್ತಿಲ್ಲ” (I find no parallel in history for a body of converts and their descendants claiming to be a nation apart from the parent stock) wow .

ಅಲ್ಲಾ, ಮುಸ್ಲಿಂ ಪ್ರತ್ಯೇಕತೆಯ ಹಿಂದಿರುವ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರದಷ್ಟು ಮುಗ್ಧರಾಗಿದ್ದರಾ ಗಾಂಧೀಜಿ?

ದುರದೃಷ್ಟವಶಾತ್, ಮಹಮದ್ ಅಲಿ ಜಿನ್ನಾ ಅವರ ಪ್ರತ್ಯೇಕತೆ ಬೇಡಿಕೆಯ ಬಗ್ಗೆ ಗಾಂಧೀಜಿ ನೊಂದುಕೊಂಡರಾದರೂ ಲೋಪವಿರುವುದು ಜಿನ್ನಾ ಇಕ್ವಾಲ್ ಅವರಂತಹ ನಾಯಕರಲ್ಲಲ್ಲ ಮುಸ್ಲಿಮರ ಮನಸ್ಥಿತಿಯಲ್ಲೇ ಎಂಬುದನ್ನು ಗಾಂಧೀಜಿ ದೇಶವಿಭಜನೆಯ ಹೊಸ್ತಿಲಿಗೆ ಬಂದು ನಿಂತಾಗಲೂ ಅರ್ಥಮಾಡಿಕೊಳ್ಳಲಿಲ್ಲ. ಆದರೆ ಹಿಂದೂ-ಮುಸ್ಲಿಮರು ಒಂದೇ ದೇಶದೊಳಗೆ ಏಕತೆಯಿಂದ ಇರಲು ಸಾಧ್ಯವಿಲ್ಲ ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಎಂದೋ ಅರ್ಥವಾಗಿತ್ತು! 1940ರಲ್ಲೇ ಅವರು ಹೊರತಂದ “ಥಾಟ್ಸ್ಆನ್ ಪಾಕಿಸ್ತಾನ್” ಎಂಬ ಪುಸ್ತಕ ಇವತ್ತಿಗೂ ತೀರಾ ಮಹತ್ವ ಪಡೆಯುತ್ತದೆ. ಬಹುಶಃ ಮುಸ್ಲಿಮರ ಮನಸ್ಥಿತಿಯನ್ನು ಅಂಬೇಡ್ಕರ್ ಅವರಷ್ಟು ಚೆನ್ನಾಗಿ ಯಾರೂ ಅರ್ಥಮಾಡಿಕೊಂಡಿಲ್ಲ. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ದೇಶ ವಿಭಜನೆಯ ಪರವಾಗಿದ್ದರು!! 1940ರಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ರಚನೆಗಾಗಿ ಮುಸ್ಲಿಂ ಲೀಗ್ ತೆಗೆದುಕೊಂಡ ನಿರ್ಣಯಕ್ಕೆ ಬಹಿರಂಗವಾಗಿ ಸಹಮತ ಸೂಚಿಸಿದ ಅಂಬೇಡ್ಕರ್, ವಿಭಜನೆಗೆ ಬೆಂಬಲ ವ್ಯಕ್ತಪಡಿಸಿದರು. ಹಾಗೆಂದು ಅವರು ಸುಖಾಸುಮ್ಮನೆ ಹೇಳಲಿಲ್ಲ. ಪಾಕಿಸ್ತಾನ ರಚನೆಯ ಬೇಡಿಕೆಯನ್ನು ನಾನಾ ದೃಷ್ಟಿಕೋನಗಳಿಂದ ಅಳೆಯುತ್ತಾರೆ.

1. ರಕ್ಷಣೆ
2. ಮುಸ್ಲಿಂ ಮನಸ್ಥಿತಿ
3. ಹಣಕಾಸು ಮೂಲ
4. ಕೋಮು ಸೌಹಾರ್ದ
5. ಜನಸಂಖ್ಯೆ ವಿನಿಮಯ

1930ರಲ್ಲಿ ಸೈಮನ್ ಆಯೋಗ ನೀಡಿದ ವರದಿಯಲ್ಲಿ ಕೆಲವು ಹುಬ್ಬೇರುವಂತಹ ಅಂಶಗಳು ಬೆಳಕಿಗೆ ಬಂದಿದ್ದವು. ಸೇನೆಯನ್ನು ಸೇರಲು ಆಸಕ್ತಿ ತೋರುತ್ತಿರುವವರಲ್ಲಿ ಹೆಚ್ಚಿನವರು ಪಂಬಾಜ್, ಸಿಂಧೆ, ಕಾಶ್ಮೀರ, ಬಲೂಚಿಸ್ತಾನ ಮುಂತಾದ (ಸಂಭವನೀಯ ಪಾಕಿಸ್ತಾನಕ್ಕೆ ಸೇರಿದ ಭಾಗಗಳ ಜನರಾಗಿದ್ದರು. ಅವರಲ್ಲಿ ಹೆಚ್ಚಿನವರು ಸಹಜವಾಗಿಯೇ ಮುಸ್ಲಿಮರಾಗಿದ್ದರು. ಹೀಗೆ ಸೇನೆಯಲ್ಲಿ ಮುಸ್ಲಿಮರ ಪ್ರಾಬಲ್ಯವಿರುವುದರಿಂದ ಪಾಕಿಸ್ತಾನದ ಬೆಂಬಲವಿಲ್ಲದೆ ಹಿಂದೂಸ್ಥಾನವನ್ನು ರಕ್ಷಿಸಲು ಸಾಧ್ಯವಿರಲಿಲ್ಲ

“ಭಾರತೀಯ ಸೇನೆಗಾಗಿ ಮಾಡುತ್ತಿರುವ ಒಟ್ಟು ವೆಚ್ಚದಲ್ಲಿ 52 ಕೋಟಿ ರೂ. ಹಣ ಹಿಂದೂಗಳಿಂದ ಸಂಗ್ರಹಣೆಯಾಗುತ್ತಿದೆ, ಮುಸ್ಲಿಮರ ಕೊಡುಗೆ ಕೇವಲ 1 ಕೋಟಿ ರೂ.! ಈ ದುರಂತ ಅದೆಷ್ಟು ಹಿಂದೂಗಳಿಗೆ ಗೊತ್ತು? ಯಾರ ದುಡ್ಡಿನಲ್ಲಿ ಇಂಥದ್ದೊಂದು ಅಪಾಯ ಸೃಷ್ಟಿಯಾಗುತ್ತಿದೆ ಎಂದು ಹಿಂದೂಗಳಿಗೆ ತಿಳಿದಿದೆಯೇ? ಈ ಹಿಂದೂ-ಮುಸ್ಲಿಂ ಸಮಸ್ಯೆಗೆ ಅತ್ಯುತ್ತಮ ಪರಿಹಾರವೆಂದರೆ ಜನಸಂಖ್ಯೆ ವಿನಿಮಯ. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಭಾಗಗಳಿಂದ ಹಿಂದೂಗಳನ್ನು ಸ್ಥಳಾಂತರ ಮಾಡಬೇಕು, ಮುಸ್ಲಿಮರು ಹರಿದುಹಂಚಿಹೋಗಿರುವ ಸ್ಥಳಗಳಿಂದ ಅವರನ್ನು ಸ್ಥಳಾಂತರ ಮಾಡಬೇಕು. ಆ ಮೂಲಕ ಒಂದೇ ಧರ್ಮೀಯರನ್ನು ಹೊಂದಿರುವ ರಾಷ್ಟ್ರ ರಚನೆ ಮಾಡಬೇಕು’.

“ಒಂದು ವೇಳೆ, ಭಾರತ ರಾಜಕೀಯವಾಗಿ ಒಂದಾಗಿರಬೇಕು ಹಾಗೂ ಇನ್ನೊಂದೆಡೆ ಮುಸ್ಲಿಂ ಲೀಗ್‌ನ ದ್ವಿರಾಷ್ಟ್ರ ಬೇಡಿಕೆ ಮುಂದುವರಿಯುತ್ತಲೇ ಇರುತ್ತದೆಂದಾದರೆ ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿ ಹಿಂದೂಗಳದ್ದಾಗುತ್ತದೆ. ಆಗ ಹಿಂದೂಗಳು ಎರಡು ಕಠಿಣ ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗು ತ್ತದೆ-ಒಂದೋ ಸುರಕ್ಷಿತ ಸೇನೆ ಬೇಕೋ? ಅಥವಾ ಸುರಕ್ಷಿತ ಗಡಿ ಬೇಕೋ?”

“ಜನಸಂಖ್ಯೆ ವಿನಿಮಯವೇ ಶಾಶ್ವತ ಪರಿಹಾರ ಎಂಬುದು ನಿಸ್ಸಂದೇಹವಾದುದು. ಹಾಗಿದ್ದ ಮೇಲೆ ಹಿಂದೂ-ಮುಸ್ಲಿಮರು ಏಕೆ ಬರೀ ಚೌಕಾಸಿ ಮಾಡಿಕೊಂಡು ಕುಳಿತುಕೊಳ್ಳಬೇಕು. ಗ್ರೀಸ್, ಟರ್ಕಿ, ಬಲ್ಲೇರಿಯಾದಂತಹ ರಾಷ್ಟ್ರಗಳ ಜನಸಂಖ್ಯೆ ವಿನಿಮಯ(1923ರಲ್ಲಿ ಮಾಡಿಕೊಂಡು ಧರ್ಮಾಧಾರಿತ ರಾಷ್ಟ್ರಗಳಾಗಿ ಹೊರಹೊಮ್ಮಬಹುದಾದರೆ ಭಾರತೀಯರಿಂದೇಕೆ ಆ ಕೆಲಸ ಸಾಧ್ಯವಾಗುವುದಿಲ್ಲ? ಜನಸಂಖ್ಯೆ ವಿನಿಮಯವೇ ಸಮಸ್ಯೆಗೆ ಪರಿಹಾರ ಹಾಗೂ ಆ ಮೂಲಕ ಮಾತ್ರ ಶಾಶ್ವತ ಶಾಂತಿ ಸ್ಥಾಪನೆ ಸಾಧ್ಯ ಎಂಬುದು ಗೊತ್ತಿದ್ದೂ ಸುಮ್ಮನಾಗುವುದು ಮಹಾಪರಾಧ’. ಹೀಗೆ ಅಂಬೇಡ್ಕರ್ ಪರಿಪರಿಯಾಗಿ ವಿವರಿಸುತ್ತಾರೆ.

ಅಂಬೇಡ್ಕರ್ ಮಾತಿನಲ್ಲಿ ಸತ್ಯವಿತ್ತು. ಅವರಿಗೆ ದೂರ ದೃಷ್ಟಿಯಿತ್ತು. “ಹಿಂದೂ-ಮುಸ್ಲಿಮರ ನಡುವಿನ ವಿರೋಧಜನ್ಮಜಾತ ಹಾಗಾಗಿ ನೂರಾರು ವರ್ಷಗಳಿಂದ ಇದನ್ನು ಪರಿಹರಿಸಲಾಗಿಲ್ಲ. ಹಿಂದೂ-ಮುಸ್ಲಿಮರ ಸಮಸ್ಯೆ ಶಾಶ್ವತ ಹಾಗೂ ಅನಂತವಾಗಿರುತ್ತದೆ. ಹಿಂದೂ-ಮುಸ್ಲಿಂ ಏಕತೆ ಯೆಂಬುದು ಮಾಯಾಮೃಗ’

ಎಂದು ಅಂಬೇಡ್ಕರ್ ಇತಿಹಾಸದ ಉದಾಹರಣೆ ಕೊಟ್ಟು ಮನವರಿಕೆ ಮಾಡಿಕೊಡುತ್ತಾರೆ. ಇದು ರಾಷ್ಟ್ರಪಿತ ಮಹಾತ್ಮ ಗಾಂಧಿ, ಮೊದಲ ಪ್ರಧಾನಿ ನೆಹರು, ಉಕ್ಕಿನ ಮನುಷ್ಯ ಪಟೇಲ್‌ಗೆ ಅರ್ಥವಾಗಲಿಲ್ಲವೆ? ದೇಶ ವಿಭಜನೆಗೆ ಒಪ್ಪಿದ್ದಷ್ಟೇ ಗಾಂಧಿ-ನೆಹರು- ಪಟೇಲ್ ಮಾಡಿದ ತಪ್ಪೆ? ಆನಂತರ ಮಾಡಿದ್ದೇನು ಸಾಮಾನ್ಯ ತಪ್ಪೆ?

 

ಎಳೆ-ಎಳೆಯಾಗಿ ತೆರೆದುಕೊಳ್ಳುವ ಕಾಶ್ಮೀರದ ಫೈಲು!

” ಮುಸ್ಲಿಂ ಲೀಗ್ ನಾಯಕರೇ ಪಾಪುಲೇಶನ್ ಎಕ್ಸ್‌ಚೇಂಜ್‌ಗೆ ಸಿದ್ಧರಾಗಿದ್ದರು. ಜಿನ್ನಾ ಕೂಡ ಜನಸಂಖ್ಯೆ ವಿನಿಮಯದ ಪರವಾಗಿದ್ದರು. ಜಿನ್ನಾ ಅವರೇ ಪ್ರಾರಂಭಿಸಿದ್ದ ಪ್ರತಿಷ್ಠಿತ “ಡಾನ್’ ಪತ್ರಿಕೆ, ಜನಸಂಖ್ಯೆ ವಿನಿಮಯ: ಅತ್ಯಂತ ನಿರೀಕ್ಷಿತ ಪರಿಹಾರ. ಆದರೆ ಶಾಂತಿಯುತ ಪರಿಹಾರದ ಬದಲು ಕಾಂಗ್ರೆಸ್ ರಕ್ತಪಾತಕ್ಕೆ ಹಾತೊರೆಯುತ್ತಿದೆ’ ಎಂಬ ಶೀರ್ಷಿಕೆಯಡಿ ತನ್ನ ಅಭಿಪ್ರಾಯವನ್ನು ಪ್ರಕಟಿಸಿತು. “ಒಂದು ವೇಳೆ, ಭಾರತವನ್ನು ವಿಭಜನೆ ಮಾಡುವುದೇ ಆದರೆ ಮೊದಲು ಜನಸಂಖ್ಯೆ ವಿನಿಮಯ ಮಾಡಿಕೊಳ್ಳಿ. ಇಲ್ಲವಾದರೆ ಪಾಕಿಸ್ತಾನಿಯರು ಹಿಂದೂಗಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ’ ಎಂದು “ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಅಂಬೇಡ್ಕರ್ ಕೂಡ ಎಚ್ಚರಿಕೆ ನೀಡಿದ್ದರು! 1947ರಲ್ಲಿ ದೇಶವಿಭಜನೆಯಾದಾಗ ನಡೆದಿದ್ದೂ ಇದೇ ಅಲ್ಲವೆ?

ನಮ್ಮದೇ ಬೇರೆ ಧರ್ಮ, ಬೇರೆ ಸಂಸ್ಕೃತಿ, ನಮ್ಮ ನಡುವೆ ವಧುವನ್ನು ಕೊಟ್ಟು-ತರುವ ಪದ್ಧತಿಯಿಲ್ಲ ಎಂದು ಪ್ರತಿಪಾದಿಸಿದ ಜಿನ್ನಾ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚನೆ ಮಾಡಿಕೊಂಡರು. ಅಂದಮೇಲೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಬಹುದಿತ್ತಲ್ಲವೆ? ಮುಸ್ಲಿಮರು ಕೂಡಿ ಬಾಳುವವರಲ್ಲ ಎಂದು ಗೊತ್ತಾಗಿತ್ತಲ್ಲವೆ? ಗೊತ್ತಿದ್ದೂ ಏಕೆ ಜನಸಂಖ್ಯೆ ವಿನಿಮಯ ಮಾಡಿಕೊಳ್ಳಲಿಲ್ಲ? ಓಲೈಕೆಯಿಂದ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ ಎಂದು ಸಾಬೀತಾಗಿತ್ತಲ್ಲವೆ? After all, religion is their (Arab) Nationalism! ಅವರ ಶ್ರದ್ಧೆ ನಿಷ್ಠೆ ಧರ್ಮಕ್ಕೆ ಹೊರಡು, ಯಾವುದೇ ದೇಶಕ್ಕಲ್ಲ. ಅವರು ಒಂದು ರಾಷ್ಟ್ರದ ನಾಗರಿಕರಾಗಿರಬಲ್ಲರೇ ಹೊರತು, ಅವರಲ್ಲಿ ರಾಷ್ಟ್ರನಿಷ್ಠೆ ಬರುವುದು ತುಂಬಾ ಕಷ್ಟ, ಬಂದರೂ ವಿರಳ ಎಂಬುದಕ್ಕೆ ಅದುವರೆಗಿನ ಇತಿಹಾಸ ಸಾಕ್ಷಿಯಾಗಿತ್ತಲ್ಲವೆ? ಎಲ್ಲೋ ಟರ್ಕಿಯಲ್ಲಿ ಖಲೀಫನನ್ನು ಕಿತ್ತೊಗೆದಾಗ ಭಾರತೀಯ ಮುಸ್ಲಿಮರು ಖಿಲಾಫತ್ ಚಳವಳಿ ಆರಂಭಿಸಿದ್ದರು. ಸ್ವಾತಂತ್ರ್ಯ ಹೋರಾಟವೆಂಬ ಧೈಯಮಂತ್ರಕ್ಕೆ ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಸಾಧ್ಯವಾಗಲಿಲ್ಲ ಎಂದ ಮೇಲೆ ಇನ್ನೇನು ಹೇಳಬೇಕು?

ಇದನ್ನು ಗಮನದಲ್ಲಿಟ್ಟುಕೊಂಡೇ ಡಾ. ಅಂಬೇಡ್ಕರ್ “ಪಾಪುಲೇಶನ್ ಎಕ್ಸ್‌ಚೇಂಜ್’ನ ಮಾತನಾಡಿದರು. ಕೈಸುಟ್ಟುಕೊಂಡ ಮೇಲೂ, ದೇಶ ತುಂಡಾಗಲು ಬಿಟ್ಟ ನಂತರವೂ ಈ ಸತ್ಯ ಗಾಂಧಿ-ನೆಹರು-ಪಟೇಲ್‌ಗೆ ಗೊತ್ತಾಗಿರಲಿಲ್ಲವೆ? 1947ರಲ್ಲಿ ದೇಶ ಒಡೆದುಹೋಯಿತು ಬಿಡಿ, ತಲೆಕೆಡಿಸಿಕೊಳ್ಳುವುದು ಬೇಡ. ಇವತ್ತು ಪಾಕಿಸ್ತಾನದಲ್ಲಿ 17 ಕೋಟಿ ಮುಸ್ಲಿಮರಿದ್ದಾರೆ, ಬಾಂಗ್ಲಾದೇಶದಲ್ಲಿ 14 ಕೋಟಿ ಇದ್ದಾರೆ. ಭಾರತದಲ್ಲಿರುವ 16 ಕೋಟಿ ಮುಸ್ಲಿಮರ ಜತೆ ಬಾಂಗ್ಲಾ ಪಾಕಿಸ್ತಾನದ ಮುಸ್ಲಿಮರೂ ಸೇರಿಕೊಂಡಿದ್ದರೆ ದೇಶದ ಕಥೆ ಏನಾಗುತ್ತಿತ್ತು? ಒಂದು ವೇಳೆ, 1947ರಲ್ಲಿ ದೇಶ ತುಂಡಾಗದೇ ಇದ್ದಿದ್ದರೆ
171 ಬತ್ತಲೆ ಜಗತು

ಇಂದು ಬೀದಿ-ಬೀದಿಯಲ್ಲೂ ಕಾಳಗ ನಡೆಯುತ್ತಿರುತ್ತಿತ್ತು, ಇಡೀ ಭಾರತೀಯ ಉಪಖಂಡವನ್ನೇ ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿ ಎಂದು ಈ ವೇಳೆಗಾಗಲೇ ಚಳವಳಿ ಆರಂಭವಾಗಿರುತ್ತಿತ್ತೇನೋ!! ಖಂಡಿತ ಅಂತಹ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದೇನೇ ಇರಲಿ, ನಡೆದುಹೋಗಿದ್ದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಮುಂದೆ ಆಗುವ ಅನಾಹುತವನ್ನು ತಡೆಯಬೇಕಾದ ಅಗತ್ಯ ಖಂಡಿತ ಇದೆ.

“We should not hate Muslims, but we should liberate Muslims from Islam” ಎನ್ನುತ್ತಾರೆ ಅರುಣ್ ಶೌರಿ, ದೇಶ ವಿಭಜನೆ ವಿಚಾರವನ್ನೆತ್ತಿಕೊಂಡು ಜಿನ್ನಾರನ್ನು ನಾವೆಷ್ಟೇ ತೆಗಳಬಹುದು. ಆದರೆ ಇವತ್ತು ಅಸ್ಸಾಂ, ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ, ಆಂಧ್ರದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಪತ್ಯೇಕತೆಗೆ ಯಾರನ್ನು ದೂರಬೇಕು? ಮುಸ್ಲಿಮರನ್ನು ದೂರುವುದಕ್ಕಿಂತ, ದ್ವೇಷಿಸುವುದಕ್ಕಿಂತ ಮುಸ್ಲಿಮರ ತಲೆಕೆಡಿಸುವ ಮಹಮದ್ ಅಲಿ ಜಿನ್ನಾ ಮೊಹಮದ್ ಇಕ್ವಾಲ್‌ಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಜತೆಗೆ ಇಟ್ಬಾಲ್, ಜಿನ್ನಾರಂತಹ ಧರ್ಮಾಂಧರು ಎಷ್ಟು ಅಪಾಯಕಾರಿ ವ್ಯಕ್ತಿಗಳೋ, ಅವರ ಅಪಾಯ ಗೊತ್ತಿದ್ದೂ ಹುಸಿ ಆದರ್ಶ ವಾದ ಮಂಡಿಸುವ, ಓಲೈಕೆಗಿಳಿಯುವ ಗಾಂಧಿ-ನೆಹರು ಗಳಿಂದಲೂ ಅಷ್ಟೇ ಅಪಾಯ ಸೃಷ್ಟಿಯಾಗುತ್ತದೆ. 1947ರ ದೇಶ ವಿಭಜನೆಯ ನಂತರವಾದರೂ ನಮ್ಮ ನಾಯಕರು ಅಲ್ಪಸಂಖ್ಯಾತರ ಓಲೈಕೆಯನ್ನು ನಿಲ್ಲಿಸಬಹುದಿತ್ತು. ಎಲ್ಲರಲ್ಲೂ ನಾವೆಲ್ಲ ಭಾರತೀಯರು” ಎಂಬ ಐಕ್ಯ ಭಾವನೆಯನ್ನು ಮೂಡಿಸಲು ಪ್ರಯತ್ನಿಸಬಹುದಿತ್ತು. ಆದರೆ ನಾವು ಮಾಡಿದ್ದು ಹಾಗೂ ಮಾಡುತ್ತಿರುವುದೇನು? ಧರ್ಮಾಧಾರಿತ ತುಷ್ಟಿಕರಣ ಇದೇ ರೀತಿ ಮುಂದುವರಿದರೆ ಭಾರತ ಮತ್ತೊಮ್ಮೆ ವಿಭಜನೆಯ ಹೊಸ್ತಿಲಿಗೆ ಬಂದು ನಿಂತೀತು. ಇತಿಹಾಸದಿಂದ ಪಾಠ ಕಲಿಯದಿದ್ದರೆ, ಇತಿಹಾಸ ಮರುಕಳಿಸುತ್ತದೆ. ಹಾಗಂತ ಆಗಾಗ ನೆನಪಿಸಿಕೊಡಬೇಕಾಗುತ್ತದೆ ಅಲ್ವಾ?

‘ಥಾಟ್ಸ್ ಆನ್ ಪಾಕಿಸ್ತಾನ್” ಪುಸ್ತಕದ ಪ್ರಾರಂಭದಲ್ಲಿ ಅಂಬೇಡ್ಕರ್ ಒಂದು ಪುಟ್ಟಪದ್ಯ ಬರೆದಿದ್ದಾರೆ.
“More brain, O Lord, more brain! or we shall mar,
Utterly this fair garden we might win.”

(ಹೆಚ್ಚು ಬುದ್ದಿ ಕೊಡು, ಓ ದೇವರೇ ಹೆಚ್ಚು ಬುದ್ದಿ ಕೊಡು
ಈ ಮಂಕು ಸೀಮೆಯನ್ನು ನಾವು ಜಯಿಸಬಹುದು.
ಇಲ್ಲದಿದ್ದರೆ ನಾಶಗೊಳ್ಳುವೆವು ನಾವು!)

ಹೌದು, ಇನ್ನಾದರೂ ನಮ್ಮ ನಾಯಕರಿಗೆ ಬುದ್ದಿಕೊಡು ದೇವರೇ!

Leave a Reply

Your email address will not be published. Required fields are marked *