ಚಿಗಟೇರಿ ಶ್ರೀ ನಾರದಮುನಿ ರಥೋತ್ಸವ; ತೇರಿನ ಗಾಲಿ‌ಗೆ ಬಿದ್ದು ವೃದ್ಧ ಸಾವು

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಪ್ರಸಿದ್ಧ ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ರಥೋತ್ಸವ ಅರ್ಧಕ್ಕೆ ನಿಂತಿದೆ. ತೇರಿನ ಗಾಲಿಗೆ ಬಿದ್ದು ವೃದ್ಧವೊರ್ವ ಸಾವನ್ನಪ್ಪಿದ ಘಟನೆ ನಡೆದೆ. ಈ ಹಿನ್ನೆಲೆ‌ ರಥೋತ್ಸವ ಅರ್ಧಕ್ಕೆ ನಿಲ್ಲಿಸಲಾಯಿತು.

ಚಿಗಟೇರಿ ಗ್ರಾಮದ ಪಕ್ಕದ ಮೈದೂರಿನ ವೃದ್ಧ ಸಾವನ್ನಪ್ಪಿದ್ದಾರೆ. ತೇರು ಎಳೆಯುವಾಗ ಕಾಲು ಜಾರಿ ಗಾಲಿಗೆ ಬಿದ್ದು ಸಾವನ್ನಪ್ಪಿದ್ದಾರೆ.‌ ಶ್ರೀ ನಾರದಮುನಿ‌ ಸ್ವಾಮಿ ರಥ ಏರಿ, ಸ್ವಲ್ಪ ದೂರು ಸಾಗುವಾಗಲೇ ಈ ಘಟನೆ ನಡೆಯಿತು. ತೇರು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಜನರು ಘಟನೆ ನೋಡಲು ಮುಗಿಬಿದ್ದರು. ತಕ್ಷಣ ಅಲ್ಲೇ ಇದ್ದ ಪೊಲೀಸರು ಜನರನ್ನು ನಿಯಂತ್ರಿಸಿ, ವೃದ್ಧನನ್ನು ಹೊರ ಸಾಗಿಸಿದರು. ವೃದ್ಧ ಸಾವನ್ನಪ್ಪಿದ ಹಿನ್ನೆಲೆ ತೇರನ್ನು ಅಲ್ಲಿಗೆ ನಿಲ್ಲಿಸಲಾಯಿತು.

ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ರಥೋತ್ಸವ ನಡೆಯದ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬೆಳಗ್ಗೆಯಿಂದ ಭಕ್ತರು ಶ್ರೀ ನಾರದಮುನಿ ದೇವರಿಗೆ ಆಯಾ ಬೆಡಗಿನವರು ಪ್ರಸಾದ ಎಡೆ ಮಾಡಿ ಭಕ್ತಿ ಸಮರ್ಪಿಸಿದರು. ನಾರದಮುನಿ‌ ಸ್ವಾಮಿ ತೇರು ಏರುವವರೆಗೂ ಎಲ್ಲವೂ ಸಂಭ್ರಮದಿಂದ ನಡೆದಿತ್ತು. ಆದರೆ, ಕೊನೆಯಲ್ಲಿ ಈ ಘಟನೆ ಸಂಭವಿಸಿದ್ದರಿಂದ ತೇರನ್ನು ಅಲ್ಲಿಗೆ ನಿಲ್ಲಿಸಿದರು.

 

 

 

 

 

Leave a Reply

Your email address will not be published. Required fields are marked *