ಪೆಟ್ರೋಲ್‌, ಡೀಸೆಲ್ 80 ಪೈಸೆ ಹೆಚ್ಚಳ; ದೇಶಾದ್ಯಂತ ಇಂದಿನ ತೈಲ ದರ ಹೀಗಿದೆ..

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ದೇಶದ ಜನತೆಗೆ ಪ್ರತಿ ದಿನ ತೈಲ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.

ಎರಡು ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಲೀಟರ್‌ಗೆ 8 ರೂ. ಏರಿಕೆಯಾಗಿದ್ದು ಗಮನಾರ್ಹ. ಸ್ಥಳೀಯ ತೆರಿಗೆಗಳ ಪ್ರಕಾರ, ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ದೆಹಲಿಯಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್​ಗೆ ನಿನ್ನೆ 102.61 ರೂ. ಇದ್ದು, ಇಂದು 103.41 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಲೀಟರ್‌ಗೆ ರೂ.93.87 ನಿಂದ 94.67 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್ 118.41 ರೂ., ಡೀಸೆಲ್ 102 ರೂ., ಚೆನ್ನೈನಲ್ಲಿ ಪೆಟ್ರೋಲ್ 108.96 ರೂ., ಡೀಸೆಲ್ 99.04 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 113.03 ರೂ., ಡೀಸೆಲ್ 97.82 ರೂ. ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ 108.99 ರೂ., ಡೀಸೆಲ್ 92.83 ರೂ. ರೂಪಾಯಿ ಇದೆ. ರಷ್ಯಾ ವಿರುದ್ಧದ ನಿರ್ಬಂಧಗಳಿಂದಾಗಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿರುವ ಕಾರಣ ಭಾರತದಲ್ಲಿ ದರಗಳು ಹೆಚ್ಚಾಗುತ್ತಿವೆ ಎಂಬುದು ತಜ್ಞರ ಅಭಿಪ್ರಾಯ.

Leave a Reply

Your email address will not be published. Required fields are marked *