Praksh Raj: ನಾನು ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ!

ಪ್ರಕಾಶ್ ರಾಜ್ ಜನಪ್ರಿಯ ನಟ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಿರೂಪಕ ಮತ್ತು ರಾಜಕಾರಣಿ. ಇವರನ್ನು ಬಹುಮುಖ ಪ್ರತಿಭೆ ಎಂದೇ ಕರೆಯಲಾಗುತ್ತದೆ. ಪ್ರಕಾಶ್ ರಾಜ್ ಅವರು ಯಾವುದೊ ಒಂದು ಚಿತ್ರರಂಗ ಅಲ್ಲ. ಭಾರತದ ಬಹುತೇಕ ಚಿತ್ರರಂಗಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಇವರ ಬಗ್ಗೆ ಹೇಳಲು ಕಾರಣ ಇದೆ. ಪ್ರಕಾಶ್ ರಾಜ್ ಅವರು ಸಿನಿಮಾ ಮಾತ್ರ ಅಲ್ಲ, ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿ ಆಗಿದ್ದಾರೆ. ರಾಜಕೀಯ ಹೇಳಿಕೆಗಳ ಮೂಲಕ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಈಗ ಪ್ರಕಾಶ್ ರಾಜ್ ಅವರ ಮಾತನಾಡಲು ಕಾರಣ ಅವರು ನೀಡಿರುವ ಹೊಸ ಹೇಳಿಕೆ.

ಹೆಸರಾಂತ ನಟ ಪ್ರಕಾಶ್ ರಾಜ್‌ ಈ ಹಿಂದೆ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇಂತಹ ನಿರ್ಧಾರವನ್ನು ಅವರು ಮಾಡಿದ್ದೇಕೆ. ನಂತರ ಆ ನೋವಿನಿಂದ ಹೊರ ಬಂದಿದ್ದು ಹೇಗೆ ಎನ್ನುವ ಬಗ್ಗೆ

ಮಗನ ಸಾವಿನ ನಂತರ ಪ್ರಕಾಶ್ ರಾಜ್ ಆತ್ಮ ಹತ್ಯೆ ನಿರ್ಧಾರ!

ನಟ ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ಮೂರು ಮಂದಿ ಮಕ್ಕಳಿದ್ದರು. ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಸಿದ್ದು ಎಂಬ ಒಬ್ಬ ಮಗ ಇದ್ದ. ಅದರೆ ದುರದೃಷ್ಟವಶಾತ್ ಮಗ ಸಿದ್ದು ಚಿಕ್ಕವಯಸ್ಸಿನಲ್ಲಿ ನಿಧನ ಹೊಂದಿದ. ಅದೇ ನೊವಿನಿಂದಲೆ ನಟ ಪ್ರಕಾಶ್ ರಾಜ್ ತಾವು ಕೂಡ ಆತ್ಮ ಹತ್ಯೆ ಮಾಡಿಕೊಳ್ಳ ಬೇಕು ಎಂದು ನಿರ್ಧರಿಸಿ ಬಿಟ್ಟಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

5 ವರ್ಷದ ಮಗ ಸತ್ತಿದ್ದು ಹೇಗೆ?

ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಪುತ್ರ ಸಿದ್ದು 5 ವರ್ಷದವನಿದ್ದಾಗ, ಫಾರ್ಮ್ ಹೌಸ್‌ ಕಟ್ಟಡದಿಂದ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಇದು ನಡೆದಿದ್ದು 2004ರಲ್ಲಿ. ಆಗಲೆ ಪ್ರಕಾಶ್ ರಾಜ್ ತಾವು ಕೂಡ ಈ ಲೋಕ ಬಿಟ್ಟು ಹೂಗಬೇಕು ಎಂದು ನಿರ್ಧಾರಿಸಿ ಆತ್ಮ ಹತ್ಯಗೆ ಮುಂದಾಗಿದ್ದರಂತೆ. ಆದರೆ ತಮ್ಮ ನಿರ್ಧಾರವನ್ನು ಬೇರೆ ಕಾರಣಕ್ಕೆ ಬದಲಿಸಿಕೊಂಡರು.

ಪುತ್ರನ ನಿಧನದ ಬಳಿಕ ಎರಡನೇ ಮದುವೆ!

ಪ್ರಕಾಶ್ ರಾಜ್ ಅವರು ನಟಿ ಲಲಿತಾ ಕುಮಾರಿ ಅವರನ್ನು 1994 ರಲ್ಲಿ ವಿವಾಹವಾದರು. ನಂತರ ಅವರ ಪುತ್ರ ನಿಧನ ಹೊಂದಿದ ಬಳಿಕಾ 2009 ರಲ್ಲಿ ವಿಚ್ಛೇದನ ಪಡೆದು ಮೊದಲ ಪತ್ನಿಯಿಂದ ದೂರಾಗಿದ್ದಾರೆ. 24 ಆಗಸ್ಟ್ 2010 ರಂದು ಪ್ರಕಾಶ್ ರಾಜ್ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರೊಂದಿಗೆ ವಿವಾಹ ಆಗಿದ್ದಾರೆ. ಈ ದಂಪತಿಗೆ 2015ರಲ್ಲಿ ಗಂಡು ಮಗು ಜನಿಸಿದೆ. ಮಗನಿಗೆ ವೇದಾಂತ್ ಎಂದು ನಾಮಕರಣ ಮಾಡಿದ್ದಾರೆ.

 

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 – 25497777

Leave a Reply

Your email address will not be published. Required fields are marked *