ಪತ್ರಕರ್ತರ ಸಂಘದಿಂದ 38ನೇ ಪತ್ರಕರ್ತರ state conference ಉದ್ಘಾಟನೆ

38th reporters state conference

38th Repoters State-Conference

ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಸಮಾಜಕ್ಕೆ  ಉಪಯೋಗವಾಗುವ, ವಸ್ತುನಿಷ್ಠ, ಸತ್ಯನಿಷ್ಠವಾದ ವರದಿ ಮಾಡಲು ಸಲಹೆ; ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ಮಾಧ್ಯಮಗಳು ಸಮಾಜಕ್ಕೆ ಉಪಯೋಗವಾಗುವಂತಹ ವಸ್ತುನಿಷ್ಠ, ಸತ್ಯನಿಷ್ಠವಾಗಿರುವ ವಿಚಾರಗಳನ್ನು ಸಾಧ್ಯವಾದ ಮಟ್ಟಿಗೆ ಜನರಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ 38ನೇ ಪತ್ರಕರ್ತರ state-conference ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಯಾವುದೇ ಕಾರಣಕ್ಕೂ ಮೌಢ್ಯ, ಕಂದಾಚಾರ, ಕರ್ಮಸಿದ್ದಾಂತವನ್ನು ಪೆÇೀಷಿಸುವ ಕೆಲಸ ಮಾಡಬಾರದು. ಜನರಿಗೆ ಸತ್ಯ ಹೇಳಬೇಕು, ದನಿ ಇಲ್ಲದ ಜನರಿಗೆ ದನಿ ನೀಡುವ ಕೆಲಸ ಮಾಡಬೇಕು. ಪತ್ರಿಕೋದ್ಯಮದ ಬೆಳವಣಿಗೆಗೆ ತಂತ್ರಜ್ಞಾನ, ವಿಜ್ಞಾನ ಬೆಳವಣೆಗೆಯಾಗಿದೆ. ಆದರೂ ಪತ್ರಿಕೋದ್ಯಮ ಉದ್ದೇಶ ಸಫಲವಾಗಬೇಕಾದರೆ ಸುದ್ದಿಯು ಸತ್ಯನಿμÉ್ಠಯಿಂದ ಕೂಡಿರಬೇಕು. ನಾವು ಮಾಧ್ಯಮದಿಂದ ಸಮಾಜದಲ್ಲಿ ಯಾವ ಬದಲಾವಣೆ ನಿರೀಕ್ಷೆ ಮಾಡಿದ್ದೇವೆಯೋ ಆ ಬದಲಾವಣೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಹೇಳಿದರು.
ಪತ್ರಿಕೋದ್ಯಮವನ್ನು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಪತ್ರಿಕೋದ್ಯಮ ಎಂದು ಎರಡು ಭಾಗವಾಗಿ ನೋಡಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಬಹಳ ಮುಖ್ಯವಾಗಿ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಮಾಧ್ಯಮಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಕಾಯುವ, ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಯಾರ ಅಭಿವೃದ್ಧಿಯಾಗಬೇಕು ಎಂಬುವುದರ ಕುರಿತು ಇದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಜನರ ನಿರೀಕ್ಷೆಗಳು ಬಹಳಷ್ಟಿವೆ. ಜನರಿಗೆ ಪತ್ರಿಕೋದ್ಯಮದ ಮೂಲಕ ನ್ಯಾಯ ಸಿಗುತ್ತದೆ ಎಂಬ ಭಾವನೆಗಳಿವೆ. ನಮ್ಮ ಸಮಸ್ಯೆಗಳನ್ನು ಪ್ರಸಾರ ಮಾಡಿ, ನ್ಯಾಯ ಒದಗಿಸುತ್ತಾರೆಂದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ. ಆ ಮೂಲಕ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸವನ್ನು ಮಾಡುತ್ತವೆ ಎಂಬ ನಿರೀಕ್ಷೆಗಳು ಮಾಧ್ಯಮಗಳ ಮೇಲೆ ಜನರು ವಿಶ್ವಾಸವಿಟ್ಟುಕೊಂಡಿದ್ದಾರೆ. ಯಾವ ಕಾರಣಕ್ಕೂ ಜನರ ನಿರೀಕ್ಷೆ ಸುಳ್ಳಾಗಬಾರದು. ಅವರ ನಿರೀಕ್ಷೆಗೆ ತಕ್ಕಂತೆ ಮಾಧ್ಯಮ ಕಾರ್ಯನಿರ್ವಹಿಸಬೇಕು ಎಂದರು.

ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಅಗಾಧವಾಗಿದೆ. ಬಡವರು, ಶ್ರೀಮಂತರ, ಮೇಲ್ವರ್ಗ, ಕೆಳವರ್ಗದವರು ಇದ್ದಾರೆ. ಬಸವಾದಿ ಶರಣರು ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದ್ದರು. ಸಮಾಜದಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸರ್ಕಾರ ಯಾವ ರೀತಿಯಾಗಿ ಹೋಗಬೇಕು ಎಂಬುದರ ಕುರಿತು ಸರ್ಕಾರವನ್ನು ಎಚ್ಚರಗೊಳಿಸುವ, ಸಲಹೆ ನೀಡುವ ರೂಪದಲ್ಲಿ ಮಾಧ್ಯಮ ಇದ್ದಾಗ ಮಾತ್ರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದಕ್ಕೆ ಪೂರಕವಾಗಿ ವಸ್ತುನಿಷ್ಟವಾಗಿ, ಸತ್ಯನಿಷ್ಠವಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಿದರೆ ಮಾತ್ರ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದರು.

ಮೊದಲಿನಿಂದಲೂ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದೇನೆ. ಯಾವ ಕಾರಣಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೆ ಮನುಷ್ಯತ್ವ ಉಳಿಯಲಿಕ್ಕೆ ಸಾಧ್ಯವಾಗುವುದಿಲ್ಲ. ಸಮಾಜದಲ್ಲಿ ವೈಚಾರಿಕತೆ, ವೈಜ್ಞಾನಿಕತೆಯನ್ನು ಬೆಳೆಸಲು ಸಾಧ್ಯವಿಲ್ಲ. ಹಾಗೂ ಬದಲಾವಣೆ ತರಲು ಸಾಧ್ಯವಿಲ್ಲ. ವ್ಯಕ್ತಿಗೆ ತನ್ನ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿರಬೇಕು ಎಂದು ತಿಳಿಸಿದ ಅವರು, ಸಮಾಜದಲ್ಲಿ ಬದಲಾವಣೆ ತರಲು ಮಾಧ್ಯಮಗಳು, ಪತ್ರಕರ್ತರು ಸಹಕಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯಕ್ಕೆ ಕ್ರಮ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕೊಡಬೇಕು ಎಂಬುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೇಡಿಕೆಯಾಗಿದ್ದು, ಈ ಬಾರಿಯ ಬಜೆಟ್‍ನಲ್ಲಿ ಅದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಸೂಕ್ತವಾದ, ಅನುಕೂಲವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು ಈಗಾಗಲೇ ನಿವೃತ್ತ ಪತ್ರಕರ್ತರ ಮಾಸಾಶನವನ್ನು 10 ರಿಂದ 12 ಸಾವಿರಕ್ಕೆ ಮತ್ತು ಅವರ ಕುಟುಂಬದವರ ಪಿಂಚಣಿಯನ್ನು 3 ರಿಂದ 6 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದರು.
್ರೀ.ಎಸ್.ಎಸ್.ಮಲ್ಲಿಕಾರ್ಜುನ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾಉಸ್ತವಾರಿ ಸಚಿವರು ಛಾಯಚಿತ್ರ ಪ್ರರ್ದಶನ ಉದ್ಘಾಟನೆ ಮಾಡಿ ಮಾತನಾಡಿದರು.

ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಪತ್ರಕರ್ತರ state-conference ನಡೆಯುತ್ತಿರುವುದು ಸಂತಸ ತಂದಿದೆ. ಕಾಲ ಕಾಲಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಗಳು ಆದಂತೆ ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದೆ. ಹೀಗೆ ಬೀಸುವ ಗಾಳಿ ನಾಡಿನ, ದೇಶದ, ಜಾಗತಿಕ ಮಟ್ಟದ ಜನರಿಗೆ, ಜೀವಿಗಳಿಗೆ ಸಂಭ್ರಮ, ಸಂತಸ ಮತ್ತು ಸುಖ ನೀಡುವಂತಾಗಬೇಕು ಎನ್ನುವುದು ನನ್ನ ಅಭಿಲಾμÉ. ಸ್ವಾತಂತ್ರ್ಯ ಹೋರಾಟಕ್ಕೋಸ್ಕರ ಆರಂಭಗೊಂಡ ಪತ್ರಿಕೆಗಳು ಭಾರತೀಯರನ್ನು ಒಗ್ಗೂಡಿಸುವಿಕೆಯಲ್ಲಿ, ಎಲ್ಲ ಧರ್ಮ, ಜಾತಿ, ಮತಗಳ ಸಮುದಾಯಗಳಲ್ಲಿ ಪರಸ್ಪರ ದೇಶಪ್ರೇಮ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಭಾರತಕ್ಕೆ ಸ್ವಾತಂತ್ರ ಲಭಿಸುವುದರಲ್ಲಿ ಪತ್ರಿಕೋದ್ಯಮದ ಕೊಡುಗೆಯೂ ಅಪಾರವಾಗಿದೆ ಎಂದರು.
ತ್ವರಿತವಾಗಿ ಸುದ್ದಿ ಮಾಡುವ ಧಾವಂತದಲ್ಲಿ ಸುಳ್ಳು ಮತ್ತು ಸತ್ಯದ ತರ್ಕಕ್ಕೆ ಅವಕಾಶ ಇಲ್ಲದಂತೆ ಸುದ್ದಿಗಳನ್ನು ಪ್ರಸಾರ ಮಾಡಿರುವ ಹಲವಾರು ಉದಾಹರಣೆಗಳಿವೆ. ವೀಕ್ಷಕರ ಅಥವಾ ಓದುಗನ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುವ ಸಂಸ್ಕøತಿ ಹೆಚ್ಚಾಗುತ್ತಿದೆ. ಇದರ ಬಗ್ಗೆ, ಪತ್ರಕರ್ತರೇ ಅವಲೋಕಿಸಬೇಕಾಗಿದೆ. ಇಂದಿನ ಪೈಪೆÇೀಟಿಯ ಯುಗದಲ್ಲಿ ವೇಗದ ಜೊತೆಗೆ ವಿಶ್ವಾಸಾರ್ಹತೆಗೂ ಆದ್ಯತೆ ಆಗತ್ಯ ಇದೆ., ಹೀಗೆ ಆಗಬೇಕಾದರೆ ಪತ್ರಕರ್ತರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ಅಗತ್ಯ ಇದೆ. ಅದರಲ್ಲೂ ಹೊಸದಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಪತ್ರಕರ್ತನಿಗೆ ಸುದ್ದಿ ಸಂಗ್ರಹ, ಸುದ್ದಿ ಸಂಪಾದನೆ, ಭಾμÁ ಜ್ಞಾನ, ತಾಂತ್ರಿಕ ನೈಪುಣ್ಯತೆ. ಕೌಟುಂಬಿಕ ಹಾಗೂ ಸಾಮಾಜಿಕ ಕಾಳಜಿ, ಆಡಳಿತಾತ್ಮಕವಾದ ಯೋಚನೆ, ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಅಧ್ಯಯನ, ಇತಿಹಾಸ, ಪರಂಪರೆ, ಸಂಸ್ಕøತಿಗಳನ್ನು ಮೈಗೂಡಿಸಿಕೊಂಡು ಹಲವಾರು ಆಯಾಮಗಳಲ್ಲಿ ತರಬೇತಿ ನೀಡಬೇಕಾದ ಜವಾಬ್ದಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹಿಂದೆಂದಿಗಿಂತಲೂ ಈಗ ಅಧಿಕವಾಗಿದೆ ಎಂದು ಭಾವಿಸುತ್ತೇನೆ ಎಂದರು.

ಸರ್ಕಾರವು ಪತ್ರಿಕೆಗಳು, ಅದರಲ್ಲೂ ಕನ್ನಡ ಪತ್ರಿಕೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮಾಧ್ಯಮ ಕ್ಷೇತ್ರದ ಸಂಪಾದಕರಿಂದ ಹಿಡಿದು ಪತ್ರಿಕೆ ಹಂಚುವವರೆಗೆ ವಿವಿಧ ಯೋಜನೆಗಳನ್ನು ನೀಡಿದೆ. ಇದಕ್ಕಾಗಿ ನಮ್ಮ ಮುಖ್ಯಮಂತ್ರಿಗಳಾದ ಸನ್ಮಾನ ಸಿದ್ದರಾಮಯ್ಯರವರನ್ನು ನಾವೆಲ್ಲರೂ ಅಭಿನಂದಿಸಲೇಬೇಕು ಎಂದು ತಿಳಿಸಿದರು.

ಸಾರಿಗೆ, ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿ, ಮಾಜಿ ಸಚಿವರು ಮತ್ತು ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಶಾಸಕರಾದ ಬಿ.ದೇವೇಂದ್ರಪ್ಪ, ಡಿ.ಜಿ.ಶಾಂತನಗೌಡ, ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಡಾ. ಎ.ವಿ.ವೆಂಕಟೇಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾದ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಇಟ್ನಾಳ್, ಇನ್‍ಸೈಟ್ಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ವಿನಯ್ ಕುಮಾರ್ ಜಿ.ಬಿ, ಪ್ರಜಾಪಿತ ನಿರ್ದೇಶಕರು ಬಸವರಾಜ ರಾಜಋಷಿ, ಕಾರ್ಯನಿರತ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎ. ಫಕ್ರುದ್ದೀನ್, ಪತ್ರಕರ್ತ ಸಂಘದ ಖಜಾಂಚಿ ಎನ್.ವಿ ಬದರಿನಾಥ್, ಜಿಲ್ಲಾ ಕೂಟ ವರದಿಗಾರರ ಅಧ್ಯಕ್ಷರಾದ ಕೆ. ಏಕಾಂತಪ್ಪ , ದಾವಣಗೆರೆ ನಗರವಾಣಿ ಸಂಪಾದಕರಾದ ಮಲ್ಲೇಶ್, ಜನತಾವಾಣಿ ಸಂಪಾದಕರಾದ ಎಂ.ಎಸ್ ವಿಕಾಸ್ ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಇ.ಎಂ. ಮಂಜುನಾಥ ಸ್ವಾಗತಿಸಿದರು.

Leave a Reply

Your email address will not be published. Required fields are marked *