ಕನ್ನಡ ಚಿತ್ರರಂಗದ ಮೇರುಶಿಖರದಂತಿದ್ದ ಡಾ. ವಿಷ್ಣುವರ್ಧನ್

ತನ್ನ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿರದೆ, ಸಾರ್ಥಕವಾಗಿ ಬದುಕಿದ ಜೀವ ಡಾ. ವಿಷ್ಣುವರ್ಧನ್ ಅವರದ್ದು. ಹೆಣ್ಣು ಮಕ್ಕಳೊಂದಿಗೆ ಯಾವತ್ತೂ ಅಸಭ್ಯವಾಗಿ ವರ್ತಿಸದೆ ಅವರನ್ನು ಸದಾ ಗೌರವದಿಂದ ನೋಡುತ್ತಾ, ಒಂದೆರಡು ಚಲನಚಿತ್ರ 25 ದಿನ ಓಡಿದರೆ ದೊಡ್ಡ ಸೆಲೆಬ್ರಿಟಿಯಂತೆ ವರ್ತಿಸುವ ಈಗಿನ ಮಾಡರ್ನ್ ಚಿತ್ರರಂಗದಲ್ಲಿ, ತಾನು ಎಷ್ಟೇ ಯಶಸ್ವಿಗಳಿಸಿದರೂ ‘ನಾನೇ’ ನನ್ನಿಂದನೆ ಎಲ್ಲಾ ಎನ್ನುವ ಅಹಂ ಭಾವನೆಯನ್ನು ಮೈಗೂಡಿಸಿಕೊಳ್ಳದೆ ತನಗಿಂತಲೂ ಕಿರಿಯ ನಟರೊಂದಿಗೆ ಅನ್ಯೋನ್ಯತೆಯಿಂದ ಇದ್ದವರು ಇವರು. ರಾಜಕೀಯ ಕೇಸರೆರೆಚಾಟದಿಂದ ,ಡ್ರಗ್ಸ್, ಆಲ್ಕೋಹಾಲ್ ಮುಂದಾದ ವಿಷಯಗಳಿಂದ ದೂರವಿದ್ದ ನಟ ಇವರು.

ಸಭ್ಯವಾಗಿ, ಯಾವುದೇ ತುಂಡು ಉಡುಗೆ, ಬ್ರೇಕ್ ಡ್ಯಾನ್ಸ್ ಇಲ್ಲದೆ ಒಂದು ಕುಟುಂಬ ಕೂತು ನೋಡುವಂತ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಯಜಮಾನ, ಸೂರ್ಯವಂಶ, ಮುಂತಾದ ಚಲನಚಿತ್ರಗಳನ್ನು ಮಾಡಿದ ಹೆಗ್ಗಳಿಕೆ ಸಾಹಸ ಸಿಂಹ ವಿಷ್ಣುವರ್ಧನ್ ಅವರದ್ದು. ಮನೆಗೆ ಒಳ್ಳೆಯ ಮಗನಾಗಿ, ನಾಡಿಗೆ ಮಾದರಿ ನಟನಾಗಿ, ಸಮಾಜಕ್ಕೆ ಉತ್ತಮ ಸೇವಕನಾಗಿ, ಚಿತ್ರರಂಗಕ್ಕೆ ಮಾರ್ಗದರ್ಶಕನಾಗಿ ಇದ್ದವರು ಇವರು..

ಇವರೆಲ್ಲಾ ಇದ್ದಾಗ ಕನ್ನಡ ಚಿತ್ರರಂಗ ಹೇಗಿತ್ತು ಎಷ್ಟು ಒಗ್ಗಟ್ಟಿನಲ್ಲಿ ಇತ್ತು. ಚಿತ್ರರಂಗಕ್ಕೆ ಒಂದು ದೊಡ್ಡ ಶಕ್ತಿ ಇತ್ತು. ಈಗಿನ ಸನ್ನಿವೇಶದ ಕಥೆ ಹೇಳೋದೇ ಬೇಡ ಈಗ ಒಬ್ಬ ನಟನನ್ನು ಕಂಡ್ರೆ ಇನ್ನೊಬ್ಬನಿಗೆ ಆಗೋದಿಲ್ಲ, ಬರೀ ಕಾಲು ಎಳೆಯುವವರೆ ತುಂಬಿ ಹೋಗಿದ್ದಾರೆ. ಅವರ ಅಭಿಮಾನಿಗಳ ಬೇಕಾಬಿಟ್ಟಿ ಹಾರಾಟ ನೋಡಿಕೆ ಅಂತೂ ಎರಡು ಕಣ್ಣುಸಾಲದು, ಬರೀ ಅಸೂಯೆ ದ್ವೇಷ ತುಂಬಿಹೋಗಿದೆ. ಈ ಪರಿಸ್ಥಿತಿಯಲ್ಲಿ ವಿಷ್ಣುವರ್ಧನ್ ಇರಬೇಕಿತ್ತು, ಬದುಕಿರಬೇಕಿತ್ತು. ಇವರನ್ನು ಕಳ್ಕೊಂಡೆವು ಇವರ ಸ್ಥಾನ ತುಂಬಬಹುದಾದ ಪುನೀತ್ ರಾಜ್ ಕುಮಾರ್ ಅವರನ್ನೂ ಕಳ್ಕೊಂಡೆವು……

ಕನ್ನಡ ಚಿತ್ರರಂಗದ ಮೇರುಶಿಖರದಂತಿದ್ದ ಡಾ. ವಿಷ್ಣುವರ್ಧನ್ ಸರ್ ಅವರಿಗೆ ಜನ್ಮದಿನಾಚರಣೆಯ ಶುಭ ನಮನಗಳು…..

Leave a Reply

Your email address will not be published. Required fields are marked *