ಮಣಿಪುರ ಉರಿಯುತ್ತಿದೆ. ವಿಷಯ ಏನು?

ಮಣಿಪುರ ಉರಿಯುತ್ತಿದೆ. ವಿಷಯ ಏನು?

ಮಣಿಪುರದಲ್ಲಿ ಅಫೀಮು ಧಂಧೆ ಎಗ್ಗಿಲ್ಲದೆ ಸಾಗಿತ್ತು. ಈಗಿನ ಸರ್ಕಾರ ಸಂಪೂರ್ಣ ಅದನ್ನು ನಿಲ್ಲಿಸಿದೆ. ಕಳೆದ ೫ ವರ್ಷಗಳಲ್ಲಿ 15,400ಎಕರೆ ಪ್ಲಾಂಟೇಷನ್ನಲ್ಲಿ ಬೆಳೆಸಲಾಗುತ್ತಿದ್ದ ಅಫೀಮನ್ನು ನಾಶಪಡಿಸಲಾಗಿದೆ. ಅದನ್ನು ಕುಕಿ ಮತ್ತು ಮೈತಿ ಬುಡಕಟ್ಟು ಜನಾಂಗಗಳ ಮಧ್ಯದ ಸಂಘರ್ಷ ಎಂದು ಬಿಂಬಿಸಲಾಗಿದೆ. ಸಾಮಾನ್ಯ ಜನರನ ಹತ್ಯೆ ಮಾಡಲಾಗುತ್ತಿತ್ತು. ಈಗ ಅಲ್ಲಿ ಭಾರತೀಯ ಸೇನೆ ಬಂದಿಳಿದಿದೆ. ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಚೀನಾಗೆ ಆಘಾತವಾದರೆ, ವಿಪಕ್ಷಗಳು, ವಿರೋಧಿಗಳು ಪ್ರಜಾಪ್ರಭುತ್ವದ ಕೊಲೆ ಎಂದು ಕೂಗಿದರು. ದೇವಸ್ಥಾನಗಳನ್ನು, ಮನೆಮಠಗಳನ್ನು ಸುಡಲಾರಂಭಿಸಿದರು.

ಮಣಿಪುರದ ಇತಿಹಾಸ ಏನು?

ಮಣಿಪುರದ ಮೂಲನಿವಾಸಿಗಳು ಮೈತಿ ಬುಡಕಟ್ಟು ಜನಾಂಗದವರು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರದ ಅರಸರ ಮಧ್ಯೆ ಯುದ್ಧಗಳಾಗುತ್ತಿದ್ದವು. ದುರ್ಬಲ ಮೈತಿ ಅರಸರು ಕುಕಿ ಬುಡಕಟ್ಟು ಜನಾಂಗದವರು, ಮತ್ತು ನೆರೆಯ ರೋಹಿಂಗ್ಯಾಗಳನ್ನು ಸೇನೆಗೆ ಭರ್ತಿ ಮಾಡಿಕೊಂಡರು. ಕುಕಿಗಳು ಮೂಲತಃ ಸಬಲರು. ಯುದ್ಧದಲ್ಲಿ ನೆರವು ನೀಡುವ ನೆಪದಲ್ಲಿ ಮಣಿಪುರದಲ್ಲಿ ಮನೆಮಠ ಮಾಡಿಕೊಂಡು ನೆಲಸಿದರು. ಕುಕಿ ಜನಸಂಖ್ಯೆ ಏರುತ್ತಾ ಹೋಯಿತು. ವಿಪರೀತ ಜಗಳಗಂಟರಾದ ಕುಕೀಗಳು ಮಣಿಪುರದ ಎತ್ತರದ ಸ್ಥಳಗಳನ್ನು ಆಕ್ರಮಿಸಿ ಅಲ್ಲಿದ್ದ ಮೈತಿಗಳನ್ನು ಒದ್ದೋಡಿಸಿದರು. ಮೈತಿಗಳು ಬಯಲುಸೀಮೆಗಳಿಗೆ ವಲಸೆ ಹೋದರು. ಕುಕೀಗಳು ಮತ್ತು ರೋಹಿಂಗ್ಯಾಗಳು ಎತ್ತರದ ಪ್ರದೇಶಗಳಲ್ಲಿ ಅಫೀಮು ಬೆಳೆಸಲಾರಂಭಿಸಿದರು.

ಮಣಿಪುರದ ಗಡಿಯಲ್ಲಿರುವುದು ಚೀನಾ ಮತ್ತು ಮಯನ್ಮಾರ್. ಮಣಿಪುರದ ‌ಮೇಲೆ ಕಣ್ಣಿಟ್ಟ ಚೀನಾ ಭಾರತವಿರೋಧಿ ಪಕ್ಷಗಳನ್ನು ಬೆಂಬಲಿಸಲಾರಂಭಿಸಿತು. ಇತ್ತ ಪಾಕಿಸ್ತಾನ ಸಹ ರೋಹಿಂಗ್ಯಾ ಮುಸ್ಲಿಮರ ಮೂಲಕ ತನ್ನವರನ್ನು ಒಳಬಿಡಲಾರಂಭಿಸಿತು.

ಇದರ ಮಧ್ಯೆ ಕುತಂತ್ರ ಆರಂಭಿಸಿದ್ದು ಕ್ರೈಸ್ತ ಮಿಷನರಿಗಳು. ಮಣಿಪುರದ ಹಿಂದುಳಿದ ಬುಡಕಟ್ಟು ಸ್ಥಳಗಳಲ್ಲಿ 2000 ಚರ್ಚುಗಳನ್ನು ಕಟ್ಟಿಸಿ ಎಗ್ಗಿಲ್ಲದ ಮತಾಂತರಗಳನ್ನು ನಡೆಸಿದರು. ಹೆಚ್ಚಿನ ಮೈತಿಗಳು ಕ್ರೈಸ್ತಧರ್ಮ ಸ್ವೀಕರಿಸಿದರು. 1981ರಿಂದ ಮಣಿಪುರ ವ್ಯಾಪಕ ಹಿಂಸೆಯಲ್ಲಿ ತೊಡಗಿತು. 10,000 ಕ್ಕೂ ಹೆಚ್ಚಿನ ಮೈತಿಗಳು ಪ್ರಾಣಬಿಟ್ಟರು. ಎಚ್ಚೆತ್ತ ಇಂದಿರಾಗಾಂಧಿ ಸೇನೆಯನ್ನು ಕಳಿಸಿ ಶಾಂತಿ ಸ್ಥಾಪಿಸಲು ಮಾತುಕತೆ ನಡೆಸಿದರು. ಮಾತುಕತೆಯ ಪ್ರಕಾರ ಕುಕಿಗಳು ಗುಡ್ಡಗಾಡಿನಲ್ಲಿ, ಮೈತಿಗಳು ಬಯಲು ಪ್ರದೇಶಗಳಲ್ಲಿ ನೆಲೆಸಬೇಕು ಎಂಬ ಒಪ್ಪಂದವಾಯ್ತು. ಮೈತಿಗಳು ಕಷ್ಟಕ್ಕೆ ಸಿಲುಕಿದರೆ, ಕುಕೀಗಳು ಎಗ್ಗಿಲ್ಲದೆ ಅಫೀಮು ಬೆಳೆಯಲಾರಂಭಿಸದರು. ಡ್ರಗ್ ಮಾಫಿಯಾ ಮತ್ತು ಉಗ್ರವಾದ ಎಗ್ಗುಸಿಗ್ಗಿಲ್ಲದೆ ಬೆಳೆಯಲಾರಂಭಿಸಿತು. 2008ರಲ್ಲಿ ಮಣಿಪುರದಲ್ಲಿ ಮತ್ತೆ ಯುದ್ಧ ಶುರುವಾದಾಗ ಆಗಿನ ಕೇಂದ್ರ ಸರ್ಕಾರ ಮೈತಿಗಳು, ಕುಕಿಗಳು ಮತ್ತು ಮತಾಂತರಗೊಂಡ ಕ್ರಿಶ್ಚಿಯನ್ನರ ಜೊತೆ ಒಪ್ಪಂದ ಮಾಡಿಕೊಂಡು ಅಫೀಮು ಬೆಳೆಯನ್ನು ಸಕ್ರಮಗೊಳಿಸಿತು. ಪೋಲೀಸರಿಗೂ ಯಾವ ಕ್ರಮವನ್ನೂ ತೆಗೆದುಕೊಳ್ಳದಿರಲು ಸೂಚಿಸಲಾಯಿತು. ಅಲ್ಲಿಂದ ಇಡೀ ದೇಶಕ್ಕೆ ಅಫೀಮಿನ ಸರಬರಾಜು ನಡೆಯಿತು. ಇದಕ್ಕೆ ಚೀನಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಮಯನ್ಮಾರ್ ದೇಶಗಳೂ ಸಾಥ್ ನೀಡಿದವು.

ಈಗಿನ ಸರ್ಕಾರ 2014ರಲ್ಲಿ ಅಧಿಕಾರ ಹಿಡಿದ ನಂತರ ಕೇರಳ, ಕರ್ನಾಟಕ, ಉತ್ತರ ಪ್ರದೇಶ, ಅಸ್ಸಾಂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬೇರೂರಿದ ಗಾಂಜಾ ಸರಬರಾಜು ಅಕ್ರಮವನ್ನು ರಹಸ್ಯವಾಗಿ ಛೇಧಿಸಲಾರಂಭಿಸಿತು. 2022ರಲ್ಲಿ ಗೆದ್ದ ಬಿಜೆಪಿ ಕಾಂಗ್ರೆಸ್ನಿಂದ ತನ್ನ ಕಡೆ ಬಂದ ಬೀರೇನ್ ಸಿಂಗರನ್ನು ಮುಖ್ಯಮಂತ್ರಿ ಮಾಡಿತು. ಇವರು ಮೈತಿ ಜನಾಂಗಕ್ಕೆಸೇರಿದವರು. ಇವರಿಗೆ ಅಫೀಮನ್ನು ಸಂಪೂರ್ಣವಾಗಿ ನಾಶಪಡಿಸಲು ಅಧಿಕಾರ ಕೊಡಲಾಯಿತು. ಆದಿವಾಸಿ ಮೈತಿ ಜನಾಂಗದವರು ಮೊದಲು STಗೆ ಸೇರಿದ್ದರು. ಅವರನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿ ಕುಕೀಗಳನ್ನು ಮತ್ತು ಮತಾಂತರಗೊಂಡಿದ್ದ ಕ್ರೈಸ್ತರನ್ನು ST ಕೆಟೆಗರಿಗೆ ಸೇರಿಸಿತ್ತು. ಕುಪಿತಗೊಂಡ ಮೈತಿಗಳು ಆಗಾಗ ರಂಪ ಎಬ್ಬಿಸುತ್ತಲೇ ಇದ್ದರು. 2010ರಲ್ಲಿ ಮೈತಿ ಜನಾಂಗದ ನಾಯಕರು ಆದಿವಾಸಿಗಳಾಗಿದ್ದ ತಮ್ಮನ್ನು ST ಕೆಟಗರಿಗೆ ಸೇರಿಸಬೇಕು ಎಂದು ಕೇಸ್ ಹಾಕಿದರು. 2023ರಲ್ಲಿ ಹೈಕೋರ್ಟು ಅಸ್ತು ಎಂದಿತು. ಮೊದಲೇ ಅಫೀಮು ಬೆಳೆಯನ್ನು ನಾಶಪಡಿಸಿದ್ದ ಆಘಾತದಲ್ಲಿದ್ದ ಕುಕಿಗಳಿಗೆ ಇದೊಂದು ದೊಡ್ಡ ಪೆಟ್ಟಾಯಿತು. ಇದನ್ನೇ ನೆಪವಾಗಿ ಹಿಡಿದು ಎಗ್ಗುಸಿಗ್ಗಿಲ್ಲದ ಹಿಂಸಾಚಾರ ನಡೆಸಿದ್ದಾರೆ. ಈ ಹಿಂಸಾಚಾರದ ಒಂದು ಅನುಕೂಲವೆಂದರೆ ಮೈತಿಗಳು ಒಗ್ಗಟ್ಟಿನಿಂದ ಸುಮಾರು 300ರಷ್ಟು ಚರ್ಚುಗಳನ್ನು ನಾಶಪಡೆಸಿದ್ದಾರೆ. ಕ್ರೈಸ್ತ ಮಿಷನರಿಗಳು ದಾಳಿಗೊಳಗಾಗುತ್ತಿದ್ದಾರೆ. ಕುಕೀಗಳನ್ನೂ ಒದ್ದೋಡಿಸಲಾಗುತ್ತಿದೆ. ಹೊಸ ದೇಶವಾಗಲು ಹೊರಟಿದ್ದ ಮಣಿಪುರಕ್ಕೆ ದೊಡ್ಡ ಹಿನ್ನಡೆಯಾಗಿದೆ…

Leave a Reply

Your email address will not be published. Required fields are marked *