ತಮಿಳುನಟ ಕಾರ್ತಿ ಹುಟ್ಟಹಬ್ಬಕ್ಕೆ ‘ಜಪಾನ್’ ಕ್ಯಾರೆಕ್ಟರ್ ಟೀಸರ್ ಉಡುಗೊರೆ..ಹೆಸರು ಜಪಾನ್..ಆದರೆ ಮೇಡ್ ಇನ್ ಇಂಡಿಯಾ

ಸಿನಿಮಾ :

ತಮಿಳು ನಟ ಕಾರ್ತಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 46ನೇ ವಸಂತಕ್ಕೆ ಕಾಲಿಟ್ಟಿರುವ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜನ್ಮದಿನಕ್ಕೆ ಜಪಾನ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಒಬ್ಬರಿಗೆ ಹೀರೋ, ಮತ್ತೊಬ್ಬರಿಗೆ ಕಾಮಿಡಿಯನ್ ಆಗಿ, ಇನ್ನೊಬ್ಬರಿಗೆ ವಿಲನ್ ಆಗಿ ಕಾಣಿಸಿಕೊಳ್ಳುವ ಕಾರ್ತಿ ಡಬ್ಬಲ್ ಶೇಡ್ ನಲ್ಲಿ ನಟಿಸಿದ್ದಾರೆ. ಸ್ಟೈಲಿಶ್ ಕ್ಲಾಸ್ ಹಾಕಿ, ಗುಂಗರು ಕೂದಲು ಎಂಟ್ರಿ ಕೊಟ್ಟಿರುವ ಕಾರ್ತಿ ಪಾತ್ರದ ಹೆಸರು ಜಪಾನ್..ಆದರೆ ಮೇಡ್ ಇನ್ ಇಂಡಿಯಾ..ಕನ್ನಡದಲ್ಲಿಯೂ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್, ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ಜಪಾನ್ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಾರ್ತಿ ನಟನೆಯ 25ನೇ ಸಿನಿಮಾವಾಗಿರುವ ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ. ಶೂಟಿಂಗ್ ಹಂತದಲ್ಲಿರುವ ಜಪಾನ್ ಸಿನಿಮಾವನ್ನು ದೀಪಾವಳಿಗೆ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.

Leave a Reply

Your email address will not be published. Required fields are marked *