Breaking news: ಪಕ್ಷೇತರರಾಗಿ ಮಾಡಾಳ್ ಮಲ್ಲಿಕಾರ್ಜುನ ಸ್ಪರ್ಧೆ ಖಚಿತ – ಬಿಜೆಪಿ ಕಾಂಗ್ರೆಸ್ ಗೆ ಶುರುವಾಗಿದೆ ನಡುಕ

ಚನ್ನಗಿರಿ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದನ್ನು ಖಚಿತ ಪಡಿಸಿದ್ದಾರೆ ,ಮಾಡಾಳ್ನಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ ಚನ್ನಗಿರಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ನಮ್ಮ ತಂದೆಯವರ ಕಾಲದಲ್ಲಿ ಆಗಿದೆ ನಮ್ಮ ಚನ್ನಗಿರಿ ಕ್ಷೇತ್ರದ ಜನ ಸ್ವಾಭಿಮಾನಿಗಳು ಸ್ವಾಭಿಮಾನಕ್ಕೆ ದಕ್ಕೆ ಬಂದ್ರೆ ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದರು .

*ಜನರ ಆಶೀರ್ವಾದದಿಂದ ನಾನು ಕಣಕ್ಕೆ ಇಳಿಯುತ್ತಿದೇನೆ *

ಜನರು ನಾವು ಕಷ್ಟದಲ್ಲಿದ್ದಾಗ ನಮಗೆ ನಮ್ಮ ಕ್ಷೇತ್ರದ ಜನ ನಮ್ಮ ಕೈ ಹಿಡಿದಿದ್ದಾರೆ ಸಾವಿರಾರು ಜನ ದಿನ ನಮ್ಮ ಮನೆಯ ಹತ್ತಿರ ಬಂದು ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯ ಮಾಡಿದ್ದಾರೆ ಅದರಿಂದ ನಾನು ಚುನಾವಣೆಗೆ ನಿಳುತಿದ್ದೇನೆ ಎಂದರು .

*ನಮ್ಮ ತಂದೆಯ ಅಭಿವೃದ್ದಿ ಕೆಲಸ ನಮಗೆ ಶ್ರೀ ರಕ್ಷೆ*

ನಮ್ಮ ತಂದೆ ಮಾಡಿದ ಅಭಿವೃದ್ದಿ ಕೆಲಸವೇ ನಮಗೆ ಶ್ರೀ ರಕ್ಷೆ ನಾವು ಇಂದು ತೋದರೆಯಲ್ಲಿದ್ದೇವೆ ನಮ್ಮ ತಂದೆಯ ಜನಪರ ಕೆಲಸಗಳೆ ನಮಗೆ ಶ್ರೀ ರಕ್ಷೆ ಎಂದು ಹೇಳಿದರು .
*ಯಾರನ್ನೂ ಚನ್ನಗಿರಿ ಮೋದಿ ಅಂತ ಹೇಳುತ್ತಿದ್ದಾರೆ*

ಚನ್ನಗಿರಿ ಅಲ್ಲಿ ಮಾಧ್ಯಮದವರು ಯಾರೋ ಒಬ್ಬ ವ್ಯಕ್ತಿಯನ್ನು ಚನ್ನಗಿರಿ ಮೋದಿ ಎಂದು ಕರೆದು ಅವರನ್ನು ಮೋದಿಗೆ ಹೋಲಿಕೆ ಮಡುತಿದ್ದಾರೆ ಎಂದು ಹೇಳಿದರು .

**ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ*ನಿಮ್ಮ ಸೇವೆ ಮಾಡಲು ಅವಕಾಶ ನೀಡಿ* *ಮಾಡಾಳ್ ಮಲ್ಲಿಕಾರ್ಜುನ ತಾಯಿ*

ನಾವು ನಮ್ಮ ಕಷ್ಟ ಸುಖ ಎರಡನ್ನೂ ನಮ್ಮ ಕ್ಷೇತ್ರದ ಜನರ ಜೊತೆ ಕಳೆದಿದ್ದೇವೆ ನಮ್ಮ ಕ್ಷೇತ್ರದ ಜನರು ಎಂದು ನಮ್ಮನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಆದ್ದರಿಂದ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಇನ್ನೂ ಮುಂದಿನ ಕೆಲಸ ನಿಮಗೆ ಬಿಟ್ಟದ್ದು ಎಂದು ಮಾಡಾಳ್ ವಿರೂಪಾಕ್ಷಪ್ಪ ಪತ್ನಿ ಹೇಳಿದರು .

*50.000 ಲಿಡ್ ನಿಂದ ಗೆಲುವು*
ಮಾಡಾಳ್ ಮಲ್ಲಿಕರ್ಜುನ್ ಚುನಾವಣೆಯಲ್ಲಿ ಸುಮಾರು 50,000ಕ್ಕು ಹೆಚ್ಚು ವೋಟ್ ಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

*ನಾಳೆ ನಾಮಿನೇಷನ್*
ಮಾಡಾಳ್ ಮಲ್ಲಿಕಾರ್ಜುನ್ ನಾಳೆ ಸಾಂಕೇತಿಕವಾಗಿ ನಾಮಿನೇಷನ್ ಮಾಡುವುದಾಗಿ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಮಾಡಾಳ್ ಮಲ್ಲಿಕಾರ್ಜುನ್ ಸ್ಪರ್ಧೆಯಿಂದ ಎದುರಾಳಿಗಳಿಗೆ ಶುರುವಾಗಿದೆ ನಡುಕ 

ಮಾಡಾಳ್ ಮಲ್ಲಿಕಾರ್ಜುನ ಸ್ಪರ್ಧೆಯಿಂದ ಎದುರಾಳಿಗಳಿಗೆ ನಡುಕ ಹುಟ್ಟಿದೆ ,ಮಾಡಾಳ್ ಸ್ಪರ್ಧೆ ಬಿಜೆಪಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೇರ ಹೊಡೆತ ಕೊಡಲಿದೆ .

 

ಮಾಡಾಳ್ ಗೆ ಜನರ ಭಲ..! ಎಷ್ಟು ಭಾರಿ ರೈಡ್ ಆದರೂ ಮಾಡಾಳ್ ನ ಸೋಲೋಕೆ ಬಿಡಲ್ಲ ಎಂತಿದ್ದಾರೆ ಕ್ಷೇತ್ರದ ಜನ

 

 

 

 

Leave a Reply

Your email address will not be published. Required fields are marked *