ಗಾಂಧಿ ಜಯಂತಿ ದಿನ ಮಹಾತ್ಮನ ಬಗ್ಗೆ ನಿಮಗೆ ತಿಳಿಯದಿರುವ ಮಾಹಿತಿ-

ಸ್ವಾತಂತ್ರ್ಯ ಹೋರಾಟಗಾರನಿಗಿಂತ ಮೊದಲು ಬಂದಿದ್ದು ಪತ್ರಕರ್ತ ಗಾಂಧೀಜಿ

ಒಬ್ಬ ಪತ್ರಕರ್ತರಾಗಿ ಮಹಾತ್ಮಗಾಂಧಿ ಇಷ್ಟೆಲ್ಲಾ ಬರೆದರಾ?ನಿಜಕ್ಕೂ ಬಹಳ ಆಶ್ಚರ್ಯವಾಗುತ್ತದೆ. ಸ್ವಾಮಿನಾಥನ್   ಕೃಷ್ಣಸ್ವಾಮಿ ಎ೦ಬುವವರು gandiji ಪತ್ರಕರ್ತರಾಗಿ ಬರೆದವುಗಳನ್ನೆಲ್ಲ ಸೇರಿಸಿ The Collected Works of Mahatma Gandhi wow ಗ್ರಂಥ ಸರಣಿ ಪ್ರಕಟಿಸಿದ್ದಾರೆ. ಏನಿಲ್ಲವೆಂದರು ಸುಮಾರು ನೂರಕ್ಕೂ ಹೆಚ್ಚು ಭಾಗ (volumes) ಗಳನ್ನೊಳಗೊಂಡ ಕೃತಿಗಳಿವು.ಇವುಗಳಲ್ಲಿನ ಬಹುತೇಕ ಗಾಂಧೀಜಿ ಬರಹಗಳು  ತಾವು ಆರಂಭಿಸಿದ ಮೂರು ಪತ್ರಿಕೆಗಳಿಗೆ ಬರೆದವುಗಳು.ಸುಮಾರು ಐವತ್ತು ವರ್ಷಗಳ ಸತತವಾಗಿ ಕಾಲ ವೃತ್ತಿಪರ ಪತ್ರಕರ್ತನೊಬ್ಬ ಬರೆದರೆ ಎಷ್ಟಾಗುವುದೋ ಅದಕ್ಕಿಂತ ಹೆಚ್ಚಾಗುವಷ್ಟನ್ನು ಅದರ ಅರ್ಧ ಅವಧಿಯೊಳಗೆ ಗಾಂಧೀಜಿ ಬರೆದಿದ್ದಾರೆ.

ಗಾಂಧೀಜಿ ಮನಸ್ಸು ಮಾಡಿದ್ದರೆ ಅವರು ಪತ್ರಕರ್ತರಾಗಿಯೇ ಜೀವನ ಸಾಗಿಸಬಹುದಿತ್ತು. ಪತ್ರಿಕೋದ್ಯಮದಲ್ಲಿ ಅವರ ಅರ್ಹತೆ ಅದು.’ಇಂಡಿಯನ್ ಒಪಿನಿಯನ್’ ಪತ್ರಿಕೆಯ ಮುಕ್ಕಾಲು ಭಾಗ ಗಾಂಧೀಜಿ ಬರಹಗಳಿಂದಲೇ ತುಂಬಿರುತ್ತಿತ್ತು. ಗಾಂಧೀಜಿಗೆ ಪತ್ರಕರ್ತನ ಭಾಷೆ ಕರಗತವಾಗಿತ್ತು ಕೃಷ್ಣಸ್ವಾಮಿ ಸ್ವಾಮಿನಾಥನ್ ಹೇಳುವಂತೆ ಗಾಂಧೀಜಿಯ ಉಡುಪಿನಂತೆ ಅವರ ಬರಹವೂ, ಅಷ್ಟೊಂದು ಸರಳ, ನಿರಾಡಂಬರ, ಅವರು ವಿಶೇಷಣಗಳನ್ನು ಬಳಸುತ್ತಿರಲಿಲ್ಲ.ಜಿರಳೆ ಕಂಡಾಗ ತಕ್ಷಣ ಸಾಯಿಸುವಂತೆ, ವಿಶೇಷಣಗಳನ್ನು ಕಂಡಾಗ ನಿರ್ದಯದಿಂದ ಎಡಿಟ್ ಮಾಡುತ್ತಿದ್ದರು.ವಿಷಯದಿಂದಲೇ ಬರಹ ಗಮನಸೆಳೆಯಬೇಕೇ ಹೊರತು ಭಾಷೆಯ ಆಡಂಬರದಿಂದಲ್ಲ” ಗಾಂಧೀಜಿ ಲೇಖನ, ಸಂಪಾದಕೀಯಗಳನ್ನು ಓದಿದರೆ ಅದು ವೇದ್ಯವಾಗುತ್ತದೆ.

ತಮ್ಮ ಆರಂಭದ ಬರವಣಿಗೆ ಬಗ್ಗೆ ಗಾಂಧೀಜಿ ಬರೆದುಕೊಂಡಿದ್ದಾರೆ-

 ‘ಉದ್ದುದ್ದ ವಾಕ್ಯ, ದೊಡ್ಡ ದೊಡ್ಡಪದ ಬಳಕೆಯೇ ಬರವಣಿಗೆಯೆಂದು ಭಾವಿಸಿದ ದಿನಗಳಿದ್ದವು. ಹೀಗಾಗಿ ನಾನು ವಿಶೇಷಣ ಹಾಗೂ ಅಲಂಕಾರಿಕ ಪದಗಳನ್ನು ಧಾರಾಳವಾಗಿ ಬಳಸುತ್ತಿದ್ದೆ. ಆದರೆ ನಿಧಾನವಾಗಿ ಅರ್ಥವಾಗಲಾರಂಭಿಸಿತ್ತು ನಾನು ಯಾವುದು ಸರಿಯೆಂದು ತಿಳಿದಿದ್ದೇನೋ ಅದು ತಪ್ಪು ಎಂದು. ಕ್ರಮೇಣ ನನ್ನ ಬರಹದ ಶೈಲಿ ಬದಲಿಸಿಕೊಂಡೆ. ಇದು ನನ್ನ ಚಿಂತನೆ ಕ್ರಮವನ್ನು ಸಹ ಬದಲಿಸಿತು. ಪತ್ರಕರ್ತ ಬರೆಯುವ ಹಾಗೆ ಬರೆಯಲಾರಂಭಿಸಿದೆ. ಅದೇ ಸರಿಯಾದ ಮಾರ್ಗವೆಂದು ಅನಿಸಿತು. ಪಂಡಿತ ಬರೆದಿದ್ದು ಅವನ ವರ್ಗದವರಿಗೆ ಮಾತ್ರ ಅರ್ಥವಾಗುತ್ತದೆ. ಪತ್ರಕರ್ತನದು ಎಲ್ಲರಿಗೂ ಅರ್ಥ ವಾಗುವ ಭಾಷೆ.’

ಗಾಂಧೀಜಿಯವರು ಏನಿಲ್ಲವೆಂದರೂ 10 ದಶಲಕ್ಷ ಪದಗಳನ್ನು ಬರೆದಿರಬಹುದು. ಅಂದರೆ ದಿನಕ್ಕೆ ಐನೂರು ಪದಗಳಂತೆ ಐವತ್ತು ವರ್ಷ ಬರೆದರೆ ಎಷ್ಟೋ ಅಷ್ಟು

ಖ್ಯಾತ ಪತ್ರಕರ್ತ ವಿ.ಎನ್. ನಾರಾಯಣನ್ ಅವರು ತಮ್ಮ Peerless Communicator ಎಂಬ ಲೇಖನದಲ್ಲಿ ಒಬ್ಬ ಪತ್ರಕರ್ತನಾಗಿ ಗಾಂಧೀಜಿ ಪತ್ರಿಕೋದ್ಯಮದ ಪಾಠ ಮಾಡಬಹುದಿತ್ತು  ಅವರೊಬ್ಬ ಪರಿಣಾಮಕಾರಿ ಸಂವಹನಕಾರ.ಅವರ ನೇರ, ದಿಟ್ಟ ಬರಹ ಕೋಟ್ಯಂತರ ದೇಶವಾಸಿಗಳಿಗೆ ತಲುಪುತ್ತಿತ್ತು. ಅವರು ಬರೆಯುವ ಕಾಲಕ್ಕೆ ಟಿವಿ, ರೆಡಿಯೋಗಳಿರಲಿಲ್ಲ. ಪತ್ರಿಕೆಗಳೂ ಈ ಪ್ರಮಾಣದಲ್ಲಿ ಪ್ರಸಾರ ಹೊಂದಿರಲಿಲ್ಲ. ದೇಶದಲ್ಲಿ ಸಾಕ್ಷರತೆಯೂ ಇರಲಿಲ್ಲ. ಆದರೂ ಗಾಂಧೀಜಿ ಬರೆದಿದ್ದು ಇಡೀ ದೇಶಕ್ಕೆ ಗೊತ್ತಾಗುತ್ತಿತ್ತು.” ಗಾಂಧೀಜಿ ಬರೆದಿದ್ದೇನೆಂದು ತಿಳಿದುಕೊಳ್ಳುವ ತವಕ, ಆಸೆ ಎಲ್ಲರಿಗೂ ಇತ್ತು ಅವರ ಲೇಖನಗಳನ್ನು ಹಳ್ಳಿಗಳಲ್ಲಿ ಓದುಬರಹ ಬಲ್ಲವರು ಊರಜನ ಸೇರುವ ಕಡೆಗಳಲ್ಲಿ ನಿಂತು ಓದಿ ಹೇಳುತ್ತಿದ್ದರು.ಗಾಂಧೀಜಿ ಕರೆ ಕೊಟ್ಟರೆ ಅದು ಅವರ ಪತ್ರಿಕೆಗಳ ಮೂಲಕ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿತ್ತು ಒಂದೆರಡು ತಿಂಗಳುಗಳ ನಂತರ.  ಆಗ ಈಗಿನಂತೆ ಟಿವಿ ಚಾನೆಲ್ ಗಳಿರಲಿಲ್ಲ. Breaking News ಬಿತ್ತರ ಕೂಡ ಇರಲಿಲ್ಲ, ಅತಿ ಕಡಿಮೆ ಪದಗಳಲ್ಲಿ ಹೆಚ್ಚಿನ ಸಂಗತಿಗಳನ್ನು ಹೇಳಬೇಕಾದ ಅಗತ್ಯವನ್ನು ಅವರು ಮನಗಂಡಿದ್ದೇ ಆಗ. ಗಾಂಧೀಜಿ ತಮ್ಮ ನಾಲ್ಕು ದಶಕಗಳ ಪತ್ರಕರ್ತನ ಜೀವನದಲ್ಲಿ ಆರು ಪತ್ರಿಕೆ ಆರಂಭಿಸಿದ್ದರು.

  •  ಇಂಡಿಯನ್ ಒಪಿನಿಯನ್,
  •  ಯಂಗ್ ಇಂಡಿಯಾ,
  • ಹರಿಜನ್,
  • ಹರಿಜನ್ ಸೇವಕ,
  • ಹರಿಜನ ಬಂಧು
  • ನವ್ ಜೀವನ್

ಆದರೆ ಯಾವ ಪತ್ರಿಕೆಯ ಪ್ರಸಾರವೂ ಕೆಲವು ಸಾವಿರಕ್ಕಿಂತ ಹೆಚ್ಚಿರಲಿಲ್ಲ.

ಹಾಗಂತ ಬೇಡಿಕೆ ಇರಲಿಲ್ಲವೆಂದಲ್ಲ ಗಾಂಧೀಜಿ ಪತ್ರಿಕೆ ಪ್ರಕಟವಾಗಿ ಹೊರಬರುವುದನ್ನೇ ಜನ ಕಾಯುತ್ತಿದ್ದರು.ಆದರೆ ಆ ದಿನಗಳಲ್ಲಿ ಈಗಿನಂತೆ ಪ್ರಿಂಟಿಂಗ್ ಸೌಲಭ್ಯಗಳಾಗಲಿ, ವಿತರಣಾ ವ್ಯವಸ್ಥೆಯಾಗಲಿ ಇರಲಿಲ್ಲ. ಆದರೂ ಗಾಂಧೀಜಿ ಬರೆದ ವಿಚಾರ ಸಮಸ್ತ ದೇಶವಾಸಿಗಳನ್ನು ತಲುಪುತ್ತಿತ್ತು.ಯಾರಾದರೂ ಈ ಪ್ರಶ್ನೆ ಕೇಳಿದರೆ – ಯಾರು ಮೊದಲು ಬಂದರು ಪತ್ರಕರ್ತ ಗಾಂಧೀಜಿಯೋ, ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಯೋ? –ಉತ್ತರ ತೀರಾ ಸರಳ. ಪತ್ರಕರ್ತ ಗಾ೦ಧೀಜಿಯೇ ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಗಿಂತ ಸುಮಾರು ಇಪ್ಪತ್ತು ವರ್ಷ ಮೊದಲು ಆಗಮಿಸಿದರು.

 

ಗಾಂಧೀಜಿ ಪತ್ರಿಕೋದ್ಯಮದ ಪಟ್ಟುಗಳನ್ನು ಬಹಳ ಬೇಗ ಕಲಿತುಕೊಂಡರು. ಹಾಗಂತ ಅವರಿಗೆ ಯಾವುದೇ ಮಾರ್ಗದರ್ಶನವಿರಲಿಲ್ಲ.ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ ಕೆಲವೇ ತಿಂಗಳುಗಳಲ್ಲಿ ಪತ್ರಕರ್ತನಾಗಬೇಕಾದ ಅಗತ್ಯ ಹಾಗೂ ಅನಿವಾರವನ್ನು ಮನಗಂಡರು. ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಹಕ್ಕಿಗೆ ಹೋರಾಟ ಮಾಡಲು ಪತ್ರಿಕೋದ್ಯಮವೇ ಸೂಕ್ತ ಮಾರ್ಗವೆಂಬುದು ಅವರಿಗೆ ಸ್ಪಷ್ಟವಾಗಿತ್ತು.

ಇಂಡಿಯನ್ ಒಪಿನಿಯನ್ ಪತ್ರಿಕೆಗೆ ಗಾಂಧೀಜಿ ಮಾಡಿದ ಮಹದುಪಕಾರವೆಂದರೆ ವೃತ್ತಿ ಘನತೆಗೆ ಹೊಸ ಭಾಷ್ಯ ಬರೆದಿದ್ದು,ಎಲ್ಲ ಅಪಸವ್ಯಗಳ ನಡುವೆಯೂ ವೃತ್ತಿಧರ್ಮ ಅಪೇಕ್ಷಿಸುವ ಸತ್ಯ, ಧೈರ್ಯ, ಪಾರದರ್ಶಕತೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯುವುದು ಯಾವುದೇ ಸಂದರ್ಭದಲ್ಲಿ ರಾಜಿಯಾಗದ ಗುಣವನ್ನು ಗಾಂಧೀಜಿ ಅಳವಡಿಸಿಕೊಂಡರು. ಪತ್ರಿಕೋದ್ಯಮವೆಂದರೆ ಸತ್ಯ ಹಾಗೂ ನ್ಯಾಯವನ್ನು ಅರಸುವ ಮಾಧ್ಯಮ ಎಂದೇ ಅವರು ಭಾವಿಸಿದ್ದರು.  ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ಒಪಿನಿಯನ್ ಶುರು ಮಾಡುವ ಮುನ್ನ ಗಾಂಧೀಜಿ ಅಲ್ಲಿನ ಬೇರೆ ಬೇರೆ ಪತ್ರಿಕೆಗಳ ಸಂಪಾದಕರಿಗೆ ಪತ್ರ ವಿಭಾಗಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ಈ ಅಭ್ಯಾಸವನ್ನು ಅವರು ಕೊನೆ ತನಕವೂ ಮುಂದುವರಿಸಿಕೊಂಡು ಬಂದರು.ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಬಳಿಕ ಗಾಂಧೀಜಿ ‘ಯಂಗ್ ಇಂಡಿಯಾ’ ಪತ್ರಿಕೆ ಸಂಪಾದಕರಾದರು,ಅದೇ ಸಂದರ್ಭದಲ್ಲಿ ಗುಜರಾತಿ ಮಾಸಿಕವೊಂದನ್ನು ಆರಂಭಿಸುವ ಯೋಚನೆ ಬಂತು. ‘ನವಜೀವನ್’ ವನ್ನು ಶುರು ಮಾಡಿದರು  ಗಾಂಧೀಜಿ ಗುಜರಾತಿಯಲ್ಲಿ ಸಹ ಬರೆಯುತ್ತಿದ್ದರು. ಬರಹಗಳು ಭಾರತದ ಎಲ್ಲ ಭಾಷೆಗಳಲ್ಲಿ ಅನುವಾದಿಸಿಕೊಂಡು ಪ್ರಕಟವಾಗುತ್ತಿದ್ದವು. ಅನಂತರ ಪತ್ರಿಕೆಯನ್ನು ವಿಸ್ತಾರಗೊಳಿಸಲು ‘ನವ್ ಜೀವನ್’ವನ್ನು ಹಿಂದಿಯಲ್ಲೂ ಪ್ರಕಟಿಸಲಾರಂಭಿಸಿದರು.ಅದರಿಂದ ಪತ್ರಿಕೆ ಪ್ರಸಾರ ದ್ವಿಗುಣಗೊಂಡಿತಲ್ಲದೇ, ಅದು ಬಹುಬೇಗ ಜನಪ್ರಿಯವಾಯಿತುಸಂಚಿಕೆಯಿಂದ ಸಂಚಿಕೆಗೆ ಯಂಗ್ ಇಂಡಿಯಾ ಮತ್ತು ನವ ಜೀವನ್ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸಲು ಅವೆಷ್ಟು ಯಶಸ್ವಿಯಾಯಿತೆಂದರೆ, ಈ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟಕ್ಕೆ ನೇರವಾಗಿ ನೆರವಾಗುತ್ತಿದ್ದವು.ಈ ಪತ್ರಿಕೆಗಳ ಮೂಲಕವೇ ಗಾಂಧೀಜಿ ಸಾರ್ವಜನಿಕರಿಗೆ ಕರೆ ಕೊಡುತ್ತಿದ್ದರು. ಆoದರೆ ಈ ಪತ್ರಿಕೆಗಳು ದೇಶದ ಸ್ವಾತಂತ್ರ್ಯ ಹೋರಾಟದ ಮುಖವಾಣಿಗಳಂತೆ ಕೆಲಸ ಮಾಡುತ್ತಿದ್ದವು.

ಗಾಂಧೀಜಿ ಎಲ್ಲಿಯೇ ಇರಲಿ, ಈ ಪತ್ರಿಕೆಗಳಿಗೆ ಬರೆಯುವುದನ್ನು ನಿಲ್ಲಿಸುತ್ತಿರಲಿಲ್ಲ. ಪ್ರವಾಸದಲ್ಲಿದ್ದಾಗಲೂ ಬರೆಯುತ್ತಿದ್ದರು.ಕೆಲವು ಸಲ ಬಳಲಿಕೆಯಿಂದಾಗಿ ಅವರಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ಸುಮ್ಮನಾಗುತ್ತಿರಲಿಲ್ಲ. ಡಿಕ್ಟೇಟ್ ಮಾಡುತ್ತಿದ್ದರು.

ಪತ್ರಿಕೆಗಳು ಎಲ್ಲ ವರ್ಗಗಳಿಗೂ ಸಿಗುವಂತಾಗಬೇಕೆಂದು ಗಾಂಧೀಜಿ,

ಹರಿಜನ್,

ಹರಿಜನ್ ಸೇವಕ್

ಹಾಗೂ ಹರಿಜನ್ ಬಂಧು

ಪತ್ರಿಕೆಗಳನ್ನು ಆರಂಭಿಸಿದರು.

ಈ ಪತ್ರಿಕೆಗಳನ್ನು ಆರಂಭಿಸಿದ್ದೇಕೆ ಎಂಬುದನ್ನು ಗಾಂಧೀಜಿ ಹೇಳಿಕೊಂಡಿದ್ದರೆ ಪತ್ರಿಕೆಗಳು ಕೇವಲ ಒಂದು ವರ್ಗದ ಸ್ವತ್ತಲ್ಲ. ಅದು ಎಲ್ಲ ವರ್ಗಗಳನ್ನು ತಲುಪಬೇಕು. ಅದರಲ್ಲೂ ವಿಶೇಷವಾಗಿ ಸಮಾಜದ ಅತಿ ಕೆಳಗಿನವರ್ಗಕ್ಕೆ ಪತ್ರಿಕೆ ಸಿಗುವಂತಾಗಬೇಕು.ಪತ್ರಿಕೆ ಅವರಿಗೆ ದುಬಾರಿ ವಸ್ತುವೆಂದು ಅನಿಸಬಾರದು. ಕೆಳವರ್ಗದವರೂ ಪತ್ರಿಕೆ ಓದಲಾರಂಭಿಸಿದರೆ ಸಮಾಜದಲ್ಲಿ ಪರಿವರ್ತನೆ ವೇಗ, ಸುಧಾರಣೆ ಗತಿ ಹೆಚ್ಚುತ್ತದೆ.ಈ ಕಾರಣಕ್ಕಾಗಿಯೇ ನಾನು ಹರಿಜನ್ ಆರಂಭಿಸಿದೆ. ಎಲ್ಲಿಯ ತನಕ ಜನರು ಪತ್ರಿಕೆಗಳನ್ನು

ತಮ್ಮದೆಂದು ಭಾವಿಸುವುದಿಲ್ಲವೋ ಅಲ್ಲಿಯ ತನಕ ಅದರಲ್ಲಿ ಪ್ರಕಟವಾಗಿದ್ದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.”\

1892ರ ಜನವರಿಯಲ್ಲಿ ಗಾಂಧೀಜಿ ಬಂಧನಕ್ಕೊಳಗಾದರು. ಜೈಲಿನಿಂದಲೇ ಲೇಖನಗಳನ್ನು ಪತ್ರಿಕೆಗಳಿಗೆ ಬರೆದು ಕಳಿಸುತ್ತಿದ್ದರು. ಆದರೆ ಜೈಲು ಅಧಿಕಾರಿಗಳು ಇದಕ್ಕೆ ಅವಕಾಶ ನೀಡದಿದ್ದಾಗ ಯಂಗ್ ಇಂಡಿಯಾ ಹಾಗೂ ನವಜೀವನ್‌ವನ್ನು ನಿಲ್ಲಿಸುವುದು ಅನಿವಾರ್ಯವಾಯಿತು.

ಜೈಲಿನಿಂದ ಹೊರಬಂದ ಬಳಿಕ ಪತ್ರಿಕೆಗಳನ್ನು ಆರಂಭಿಸಲು ಆಗಲಿಲ್ಲ. ಆದರೆ ಹರಿಜನ್ (ಇಂಗ್ಲಿಷ್), ಹರಿಜನ್ ಬಂಧು (ಗುಜರಾತಿ) ಹಾಗೂ ಹರಿಜನ್ ಸೇವಕ್ (ಹಿಂದಿ) ಮುಂದುವರಿಸಿದರು. 1940ರ ತನಕ ಈ ಪತ್ರಿಕೆಗಳು ಸ್ವಾತಂತ್ರ್ಯಹೋರಾಟದ ದೀವಿಗೆಗಳಂತೆ ಕೆಲಸ ಮಾಡಿದವು.

ಗಾಂಧೀಜಿ ನಾಲ್ಕು ದಶಕಗಳ ಕಾಲ ಭಾರತೀಯ ಪತ್ರಿಕೋದ್ಯಮವನ್ನು ರೂಪಿಸಿದ್ದು ಹೀಗೆ.

ಅಪ್ರತಿಮ ವೀರ ಭಗತ್ ಸಿಂಗ್ ಮಹಾತ್ಮನಾಗಲಿಲ್ಲ ಏಕೆ..?

Leave a Reply

Your email address will not be published. Required fields are marked *