ಅಪ್ರತಿಮ ವೀರ ಭಗತ್ ಸಿಂಗ್ ಮಹಾತ್ಮನಾಗಲಿಲ್ಲ ಏಕೆ..?

“ದಿಲ್ ಸೆ ಮರ್ ಕರ್ ಭೀ ನೇ ನಿಗಿ ವತನ್ ಕಿ ವುಲ್ಲತ್

 ಮೇರಿ ಮಿಠೀ ಸೇ ಖುಷ್ಟುಯೇ ವತನ್ ಆಯೇಗಿ!’

ನಾನು ಸತ್ತ ನಂತರವೂ ನನ್ನೊಳಗಿರುವ ತಾಲ್ಲೂಾಡಿನ ಪ್ರೀತಿ ಹೋಗುವುದಿಲ್ಲ.

ನನ್ನ ದೇಹದ ಬೂದಿ ಕೂಡ ಈ ಮಣ್ಣಿನ ಸುಗಂಧ ವನ್ನು ಹೊರಸೂಸುತ್ತಿರುತ್ತದೆ

ಅಂತ ಹೇಳಿ, ಅವನೇನೋ ಕುಣಿಕೆಗೆ ತಲೆಕೊಟ್ಟು ಚಿರನಿದ್ರೆಗೆ ಶರಣಾಗಿದ್ದಾ

ಆದರೆ ಪ್ರತಿ ವರ್ಷ ಮಾರ್ಚ್ ಬಂದಾಗಲೂ ಮನಸು ಸೂತಕದ ಮನೆಯಾಗುತ್ತದೆ.

ಸಾಯುವ ಮೊದಲು ಆತ ಹೇಳಿದ ಉರ್ದು ದ್ವಿಪದಿ ನೆನಪಾಗುತ್ತದೆ.

ಒಂದು ವೇಳೆ, ಅವನು ಬದುಕಿದ್ದರೆ? ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ.

ಆಗ ಮನಸು ಗಾಂಧೀಜಿಯನ್ನು ಶಪಿಸಲಾರಂಭಿಸುತ್ತದೆ!

 

ನೀವೇ ಹೇಳಿ.. ಇಪ್ಪತ್ತೂರು ವರ್ಷ, ಸಾಯುವ ವಯಸ್ಸಾ?

ಒಂದು ದಿನ ಸಾಯಂಕಾಲ ವೀರಕಲಿಗಳ ಕಥೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ,

ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ.

ಅಪ್ಪನ ಕಥೆ ಮುಂದುವರಿ ದಿತ್ತು,ಗದ್ದೆ ದಾಟಿ ಆಚೆ ಬದಿ ಸೇರಿದ್ದೂ ಆಯಿತು.

ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು.

ಹಿಂದಿರುಗಿ ನೋಡಿದರೆ ಮಗನೇ ಇಲ್ಲ.

ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ.

ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿದ್ದೀಯಾ? ಅಂತ ಪ್ರಶ್ನಿಸಿದಾಗ

‘ಅಪ್ಪಾ, ಈ ಗದ್ದೆಯಲ್ಲೆಲ್ಲ ಬಾಂಬ್ ಬೆಳೆಯ ಬೇಕು. ಅದಕ್ಕೆ ಬಾಂಬ್ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ’ ಎಂದ!

 

ಅವನೇ ಭಗತ್ ಸಿಂಗ್,

ಹುಟ್ಟಿದ್ದು 1909, ಸೆಪ್ಟೆಂಬರ್ 28ರಂದು, ಪಂಜಾಬ್‌ನ ಲಾಯಲ್ ಪುರ ಜಿಲ್ಲೆಯ ಬಾಂಗಾದಲ್ಲಿ. ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ ಮೂರನೇ ಪುತ್ರ. ಇಡೀ ಕುಟುಂಬವೇ ಕ್ರಾಂತಿಕಾರಿ ಗಳಿಂದ ಕೂಡಿತ್ತು. ಕಿಶನ್‌ಸಿಂಗ್ ಮತ್ತು ಅವರ ಕಿರಿಯ ಸೋದರ ರಾದ ಸ್ವರಣ್ ಸಿಂಗ್ ಹಾಗೂ ಅಜಿತ್ ಸಿಂಗ್ ಮೂವರೂ ಜೈಲು ಸೇರಿದ್ದರು.  ಆದರೆ ಭಗತ್ ಸಿಂಗ್ ಜನಿಸುವ ವೇಳೆಗೆ ಸರಿಯಾಗಿ ಕಿಶನ್ ಸಿಂಗ್ ಮತ್ತು ಸ್ವರಣ್ ಸಿಂಗ್ ಬಿಡುಗಡೆಯಾದರು. ಅಜಿತ್ ಸಿಂಗ್ ಕೂಡ ಬಿಡುಗಡೆಯಾಗುವ ಸಂದರ್ಭ ಬಂತು. ಹೀಗೆ ಜನನ ದೊಂದಿಗೆ ಇಡೀ ಕುಟುಂಬಕ್ಕೇ ಅದೃಷ್ಟ ತಂದನೆಂಬ ಕಾರಣಕ್ಕೆ ‘ಭಗತ್ ಸಿಂಗ್’ (ಅದೃಷ್ಟವಂಥ) ಎಂಬ ಹೆಸರಿಟ್ಟರು. ಆದರೆ ಮಗ ಕೂಡ ಅಪ್ಪನ ಹಾದಿ ತುಳಿದು ಜೈಲು ಸೇರುತ್ತಾನೆ, ಕುಣಿಕೆಗೆ ತಲೆಕೊ ಡುತ್ತಾನೆ ಅಂತ ಬಹುಶಃ ಯಾರೂ ಊಹಿಸಿರಲಿಲ್ಲ.

ಭಗತ್ ಸಿಂಗ್ ಡಿ.ಎ.ವಿ. ಹೈಸ್ಕೂಲ್ ಸೇರಿದ.

ಅದೇ ವೇಳೆಗೆ ಅಂದರೆ 1919ರಲ್ಲಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಸಂಭವಿ ಸಿತ್ತು.

ಸಾವಿರಾರು ಜನರು ಹತ್ಯೆಯಾಗಿರುವ ದಟ್ಟ ಸುದ್ದಿ ಹಬ್ಬಿತು.

ಶಾಲೆ ಬಿಟ್ಟ ಕೂಡಲೇ ತಂಗಿ ಕೈಗೆ ಬ್ಯಾಗ್ ಕೊಟ್ಟ ಭಗತ್, ಅದೆತ್ತಲೋ ಹೆಜ್ಜೆ ಹಾಕಿದ.

ಮನೆಗೆ ಮರಳಲೇ ಇಲ್ಲ.

ಎಲ್ಲರಿಗೂ ಗಾಬರಿ. ಆದರೆ ಭಗತ್ ಸಿಂಗ್ ಹತ್ಯಾಕಾಂಡ ನಡೆದಿದ್ದ ಸ್ಥಳಕ್ಕೆ ಹೋಗಿದ್ದ.

ರಾತ್ರಿ ಮನೆಗೆ ಮರಳಿದಾಗ ಕೈಯಲ್ಲಿ ಇಂಕಿನ ಬಾಟಲಿ ಯಿತ್ತು.

ಅದರಲ್ಲಿ ಶಾಹಿಯ ಬದಲು ರಕ್ತದಿಂದ ತೊಯ್ದಿದ್ದ ಮಣ್ಣಿತ್ತು.

ಆ ಮಣ್ಣು ಮನೆಯ ಪೂಜಾ ಕೊಠಡಿ ಸೇರಿ ನಿತ್ಯ ಆರಾಧನೆಗೆ ಭಾಜನವಾಯಿತು.

ಈ ಮಧ್ಯೆ, 1922ರಲ್ಲಿ ಗೋರಕ್ ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ಕಾಂಗ್ರೆಸ್ ಮೆರವಣಿಗೆಯೊಂದನ್ನು ಆಯೋಜಿಸಿತ್ತು.

ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲವರು 22 ಪೊಲೀಸರನ್ನು ಮನೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿದರು. ಮನನೊಂದ ಗಾಂಧೀಜಿ ದೇಶಾದ್ಯಂತ ನಡೆಯುತ್ತಿದ್ದ ‘ಅಸಹ ಕಾರ ಚಳವಳಿ’ಯನ್ನೇ ಕೈಬಿಡುವಂತೆ ಕರೆ ನೀಡಿದರು! ಆದರೆ 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ಅಸಹಕಾರದಂತಹ ಮಹತ್ವದ ಚಳವಳಿಯನ್ನೇ ಕೈಬಿಟ್ಟಿದ್ದು ಸರಿಯೆ? ಅಲ್ಲದೆ ತನ್ನ ಬಾಲ್ಯದ ಹೀರೊ ಕರ್ತಾರ್ ಸಿಂಗ್‌ನನ್ನು ಗಲ್ಲಿಗೇರಿಸಿದಾಗ ಕಾಂಗ್ರೆಸಿಗರೇಕೆ ಧ್ವನಿಯೆತ್ತಲಿಲ್ಲ? ಪೊಲೀಸರನ್ನು ಕೊಂದಾಗ ಮಾತ್ರ ಅಹಿಂಸಾವಾದ ಜಾಗೃತವಾಗುವುದೇಕೆ? ಎಂಬ ಪ್ರಶ್ನೆಗಳು 13 ವರ್ಷದ ಭಗತ್ಸಿಂಗ ನನ್ನು ಕಾಡಲಾರಂಭಿಸಿದವು. ಅದು ಕಾಂಗ್ರೆಸ್ಸಿಗರ ಅಹಿಂಸಾ ಚಳವಳಿ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು.ಅದರಲ್ಲೂ ಲಾಲಾ ಲಜಪತ್ ರಾಯ್ ಪ್ರಾರಂಭಿಸಿದ್ದ ಲಾಹೋರ್‌ನ ನ್ಯಾಷನಲ್ ಕಾಲೇಜು ಸೇರಿದ ನಂತರ ಭಗತ್ ಸಂಪೂರ್ಣವಾಗಿ ಬದಲಾದ. ಮಾರ್ಕ್ಸ್, ಲೆನಿನ್, ಟ್ರಾಟಸ್ಕಿ ಬರಹಗಳ ಪ್ರಭಾವಕ್ಕೊಳಗಾದ. ಅವನೊಳಗೂ ಕ್ರಾಂತಿಯ ಬೀಜ ಮೊಳಕೆಯೊಡೆಯಿತು.

ಅದು 1928, ಅಕ್ಟೋಬರ್ 30.

ಭಾರತೀಯ ರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು! ಸೈಮನ್ ಆಯೋಗ ಇಂಗ್ಲೆಂಡ್‌ನಿಂದ ಆಗಮಿಸಿತ್ತು,

ಆದರೆ ಸೈಮನ್ ಆಯೋಗ ಲಾಹೋರ್‌ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕಪ್ಪು ಬಾವುಟಗಳನ್ನು ಹಿಡಿದಿದ್ದ ಪ್ರತಿಭಟನಾಕಾರರಿಗೆ ಹಿಂದೆಸರಿಯುವಂತೆ ಸೂಚನೆ ನೀಡಿಲಾಯಿತು. ಆದರೂ ಯಾರೂ ಕದಲಲಿಲ್ಲ.

ಪೊಲೀಸ್ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್, ಲಾಠಿ ಚಾರ್ಜ್‌ಗೆ ಆದೇಶ ನೀಡಿದ. ಅದರಲ್ಲೂ ಸ್ಕಾಟ್ ಎಂಬ ಪೊಲೀಸ್ ಅಧಿಕಾರಿ ವಯೋವೃದ್ದ ಲಾಲಾ ಲಜಪತ್ ರಾಯ್ ಅವರ ಎದೆಗೆ ಲಾಠಿಯಿಂದ ಬಡಿದು ಪ್ರಾಣಾಂತಿಕವಾಗಿ ಗಾಯಗೊಳಿಸಿದ.

18 ದಿನಗಳ ಕಾಲ (1928, ನವೆಂಬರ್ 17) ನರಳಿದ ಲಜಪತ್ ರಾಯ್ ನಮ್ಮನ್ನಗಲಿದರು.

ಕೆರಳಿದ ಭಗತ್ ಸಿಂಗ್ ಮತ್ತು ರಾಜಗುರು 1928, ಡಿಸೆಂಬರ್ 17ರ ಸಾಯಂಕಾಲ 4 ಗಂಟೆ ಸಮಯದಲ್ಲಿ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್‌ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು.

ಆ ವೇಳೆಗಾಗಲೆ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ್ ಆಜಾದರ ಪರಿಚಯವಾಗಿತ್ತು.

ಆಜಾದರ ಮಾರ್ಗದರ್ಶನದಲ್ಲಿ ಮತ್ತೊಂದು ಯೋಜನೆ ಸಿದ್ಧವಾಯಿತು.

ಏಕೆಂದರೆ 1929, ಏಪ್ರಿಲ್‌ನಲ್ಲಿ ದಿಲ್ಲಿಯ ಕೇಂದ್ರೀಯ ಶಾಸನ ಸಭೆಯ ಮುಂದೆ ಬ್ರಿಟಿಷ್ ಸರಕಾರ ಎರಡು ಮಸೂದೆ ಗಳನ್ನು ಮುಂದಿಡಲಿತ್ತು. ಆ ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂಬುದು ಗೊತ್ತಾಗಿತ್ತು. ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಕಾಂಗ್ರೆಸ್ ಕೂಡ ವಿರುದ್ಧವಾಗಿತ್ತು. ಹಾಗಾಗಿ ಮಸೂದೆಗಳು ಬಿದ್ದುಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವೈಸರಾಯ್ ತನ್ನ ‘ವೀಟೋ’ ಅಧಿಕಾರವನ್ನು ಉಪಯೋಗಿಸಿ ಮಸೂದೆಗೆ ಅಂಗೀಕಾರ ನೀಡುವ  ಅವಕಾಶವಿತ್ತು.

ಹಾಗಾಗಿ ಚಂದ್ರಶೇಖರ್ ಆಜಾದ್ ಯೋಜನೆಯೊಂದನ್ನು ರೂಪಿಸಿದ್ದರು. 1929, ಏಪ್ರಿಲ್ 8ರಂದು ಅಧಿವೇಶನ ಆರಂಭ ವಾಯಿತು.

ಪನಾಮ ಹ್ಯಾಟ್ ಧರಿಸಿದ್ದ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಬಾಂಬ್ ಮತ್ತು ರಿವಾಲ್ವಾರ್‌ಗಳೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀನರಾಗಿದ್ದರು.

ನಿರೀಕ್ಷೆಯಂತೆಯೇ ಮತದಾನದ ವೇಳೆ ಎರಡೂ ಮಸೂದೆಗಳು ಬಿದ್ದು ಹೋದವು.

ವೀಟೋ ಅಧಿಕಾರ ಬಳಸಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸುವುದಾಗಿ ವೈಸರಾಯ್ ಘೋಷಣೆ ಮಾಡಿದ್ದೂ ಆಯಿತು.

ಆದರೆ ವೀಟೋ ಪ್ರಯೋಗಿಸುವ ಮೊದಲು ಸದನದೊಳಗೆ ಬಾಂಬ್ ಸ್ಫೋಟ. ಇದ್ದಕ್ಕಿದ್ದಂತೆಯೇ ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ.

ಜನಜಂಗುಳಿಯಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ವಿಚಾರಣೆ ಎದುರಿಸುವ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದುದ್ದಗಲಕ್ಕೂ ಪಸರಿಸುವ, ಸಾರುವ ಸಲುವಾಗಿ ಬಂಧಿತರಾದರು.

1930, ಅಕ್ಟೋಬರ್ 7ರಂದು ತೀರ್ಪು ಹೊರಬಿತ್ತು. ಶಾಸನ ಸಭೆಯಲ್ಲಿ ಬಾಂಬ್ ಸ್ಫೋಟ ಮಾಡಿದ್ದಕ್ಕಾಗಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಗೆ ಗಲ್ಲುಶಿಕ್ಷೆ ನಿಗದಿಯಾಯಿತು!

ಇತ್ತ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ದುಂಡುಮೇಜಿನ ಸಮ್ಮೇಳನ(ರೌಂಡ್ ಟೇಬಲ್ )ದಲ್ಲಿ ಪಾಲ್ಗೊಳ್ಳು ವಂತೆ ಬ್ರಿಟಿಷರು ಕಾಂಗ್ರೆಸ್ಸನ್ನು ಒತ್ತಾಯಿಸಲಾ ರಂಭಿಸಿದರು.

ಇಂತಹ ಒತ್ತಾಯದ ನಂತರ ದುಂಡುಮೇಜಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಹೊರಟು ನಿಂತರು.

ಆ ವೇಳೆಗಾಗಲೇ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವರನ್ನು ಗಲ್ಲಿಗೇರಿಸುವ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹಣೆ ಆರಂಭವಾಗಿತ್ತು.

ದುಂಡು ಮೇಜಿನ ಸಮ್ಮೇಳನಕ್ಕೆ ಹೊರಟು ನಿಂತಿದ್ದ ಗಾಂಧೀಜಿಗೆ, ಗಲ್ಲು ಶಿಕ್ಷೆಯನ್ನು ತೆಗೆದುಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ಮನವಿ ಮಾಡಲಾಯಿತು.

ಅಪ್ರತಿಮ ದೇಶಭಕ್ತರಾದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ರವರ ಅಂತಿಮ ಸಂಸ್ಕಾರದ ಅಪರೂಪದ ಫೋಟೊ.

1931, ಮಾರ್ಚ್ 5ರಂದು ಲಾರ್ಡ್ ಇರ್ವಿನ್ ಜತೆ ಗಾಂಧೀಜಿ ಒಪ್ಪಂದಕ್ಕೆ ಸಹಿಹಾಕಿ ದರು.

ಅದರೊಂದಿಗೆ ಕಾಂಗ್ರೆಸ್ ಅಸಹಕಾರ ಚಳವಳಿಯನ್ನು ಕೈಬಿಡಲು ಒಪ್ಪಿತು,

ಕಾಂಗ್ರೆಸ್ಸಿಗರ ವಿರುದ್ಧ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಲು ಬ್ರಿಟಿಷ್ ಆಡಳಿತ ಸಮ್ಮತಿ ನೀಡಿತು.

ಆದರೆ ದುಂಡುಮೇಜಿನ ಸಮ್ಮೇಳನಕ್ಕೆ ಹೋದ ಗಾಂಧೀಜಿ, ಭಗತ್ ಸಿಂಗ್‌ ಮಾಫಿ ನೀಡುವ ವಿಚಾರ ಬಿಟ್ಟು ಉಳಿದೆಲ್ಲ ವಿಷಯಗಳ ಬಗ್ಗೆಯೂ ಇರ್ವಿನ್ ಜತೆ ಚರ್ಚೆ ನಡೆಸಿದ್ದರು!

ಒಂದು ವೇಳೆ, ಅಸಹಕಾರ ಚಳವಳಿಯನ್ನು ಕೈಬಿಡಬೇಕಾದರೆ, ಒಪ್ಪಂದಕ್ಕೆ ಸಹಿಹಾಕ ಬೇಕಾದರೆ ಭಗತ್ ಸಿಂಗ್‌ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡಬೇಕೆಂದು ಗಾಂಧೀಜಿಯೇನಾದರೂ ಪೂರ್ವಷರತ್ತು ಹಾಕಿದ್ದರೆ, ಬ್ರಿಟಿಷರಿಗೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ.

 ಆದರೆ ಭಗತ್ ಸಿಂಗ್ ಸಾಯುವುದು ಬ್ರಿಟಿಷರಿಗಿಂತ ಗಾಂಧೀಜಿಗೆ ಅನಿವಾರ್ಯವಾಗಿತ್ತು!

 

ಬಾಲ ಗಂಗಾಧರ ತಿಲಕ್ ರ ಮರಣದ ಆ ಸ್ಥಾನವನ್ನು ಬಹಳ Convenient ಆಗಿ ಆಕ್ರಮಿಸಿದ್ದ ಗಾಂಧೀಜಿಗೆ ಭಯವಿದ್ದಿದ್ದು ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾತ್ರ.

23 ವರ್ಷದ ಭಗತ್ ಸಿಂಗ್, 62 ವರ್ಷದ ಗಾಂಧೀಜಿಯಷ್ಟೇ ಹೆಸರುವಾಸಿಯಾಗಿದ್ದ. ಗಾಂಧೀಜಿ ಹೇಗೆತಾನೇ ಸಹಿಸಿಯಾರು?   ಆದರೆ ಗಾಂಧೀಜಿ ದ್ರೋಹ ಬಗೆದ ನಂತರ, ಭಗತ್‌ನನ್ನು ಉಳಿಸಿಕೊಳ್ಳಲು ಬೇರಾವುದe ಮಾರ್ಗಗಳು ಉಳಿದಿರಲಿಲ್ಲ.

ಮಾರ್ಚ್ 23ರಂದು ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೊದಲು ಸುಖದೇವ, ನಂತರ ಭಗತ್ ಸಿಂಗ್ ಕೊನೆಯವನಾಗಿ ರಾಜಗುರು ಮುಖಕ್ಕೆ ಕಪ್ಪು ಬಟ್ಟೆ ತೊಡದೆ, ಕೈಗೆ ಕೊಳ ಹಾಕಿಸಿಕೊಳ್ಳದೆ ಕುಣಿಕೆಯನ್ನು ಚುಂಬಿಸಿ ನಗುತ್ತಲೇ ತಲೆಕೊಟ್ಟು ನಮ್ಮಿಂದ ದೂರ ವಾದರು.

ಒಬ್ಬ ವ್ಯಕ್ತಿ ತನ್ನ ಪ್ರಾಣಾರ್ಪಣೆಗಿಂತ ಮಿಗಿಲಾದ ತ್ಯಾಗವೇನನ್ನು ಮಾಡಲು ಸಾಧ್ಯ?

ಇಂತಹ ತ್ಯಾಗವನ್ನು ಮಾಡಿದ ಭಗತ್ ಸಿಂಗ್‌ಗೆ ಗಲ್ಲುಶಿಕ್ಷೆ ನೀಡದಂತೆ ಒತ್ತಾಯಿಸಿ ಸಹಿ ಸಂಗ್ರಹಣೆ ನಡೆಯುತ್ತಿತ್ತು. ಅದಕ್ಕೆ ಸಹಿ ಹಾಕುವಂತೆ ಕೇಳಿದಾಗ ಗಾಂಧೀಜಿ ಹೇಳಿದ್ದೇನು ಗೊತ್ತಾ? ಅವನೊಬ್ಬ ‘ಮಿಸ್‌ ಗೈಡೆಡ್ ಪೇಟ್ರಿಯಾಟ್’-ದಾರಿತಪ್ಪಿದ ದೇಶಭಕ್ತ!

ಇದೇ ಗಾಂಧೀಜಿ, ಖಿಲಾಫತ್ ಚಳವಳಿಯ ನಂತರ ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ಹಿಂದೂಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತರುತ್ತಿದ್ದ ಸ್ವಾಮಿ ಶ್ರದ್ದಾನಂದರನ್ನು 1926 ಡಿಸೆಂಬರ್ 26ರಂದು ಕೊಲೆಗೈದಿದ್ದ ಅಬ್ದುಲ್ ರಷೀದ್‌ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡುವಂತೆ ಬ್ರಿಟಿಷರಿಗೆ ಮನವಿ ಮಾಡಲು ಹೇಸಿರಲಿಲ್ಲ!

80 ರ ವಯಸ್ಸಿನಲ್ಲೂ ಸಿಂಹದಂತೆ ಹೊರಾಡಿದ “ಕುನ್ವರ್ ಸಿಂಹ”

ಇಂತಹ ಗಾಂಧೀಜಿಯನ್ನು ನಾವು ಮಹಾತ್ಮಎಂದು ಗೌರವಿ ಸುತ್ತೇವೆ. ಆದರೆ 23 ವರ್ಷದ ಯುವಕನ ವಿರುದ್ಧ ದ್ವೇಷಸಾಧಿಸಲು ಪ್ರಯತ್ನಿಸಿದ, ನೇಣಿಗೇರಿಸುವುದನ್ನು ತಪ್ಪಿಸಿ ಎಂದು ಮೊರೆಯಿಟ್ಟರೂ ಸ್ಪಂದಿಸದ,

ದಾರಿತಪ್ಪಿದ ದೇಶಭಕ್ತರು ಎನ್ನುವ ಮೂಲಕ ಕ್ರಾಂತಿಕಾರಿಗಳ ತ್ಯಾಗವನ್ನು ಮರೆತು ಅಗೌರವ ತೋರಿದ ಗಾಂಧೀಜಿ ಹೇಗೆತಾನೇ ಮಹಾನ್ ಅಹಿಂಸಾವಾದಿಯಾದಾರು? ಮಹಾತ್ಮಎನಿಸಿಯಾರು?

ಖಂಡಿತ, 2338 ದಿನಗಳ ಕಾಲ ಜೈಲಿನಲ್ಲಿದ್ದ ಗಾಂಧೀಜಿಗೆ ಬದುಕುವ ದಾರಿ ಗೊತ್ತಿತ್ತು.

ಹಾಗಾಗಿಯೇ ಅವರನ್ನು ಬ್ರಿಟಿಷರು ಗಲ್ಲಿಗೇರಿಸುವುದು ಬಿಡಿ, ಕಿರುಬೆರಳಿನಿಂದಲೂ ತಿವಿಯಲಿಲ್ಲ.

ಏಕೆಂದರೆ ಬ್ರಿಟಿಷರಿಗೆ ಬೇಕಿದ್ದು ಗಾಂಧೀ ನೇತೃತ್ವದ ಕಾಂಗ್ರೆಸ್ಸೇ ಹೊರತು, ಸುಭಾಷ್ ಚಂದ್ರ ಬೋಸ್ ನೇತೃತ್ವದ ಕಾಂಗ್ರೆಸ್ಸಲ್ಲ!

ಹಾಗಾಗಿಯೇ ಕ್ರಾಂತಿಕಾರಿಗಳ ‘ಭೂಗತ ಚಟುವಟಿಕೆ’ಯ (Underground Activity) ಬಗ್ಗೆ ಉರಿದು ಬೀಳುತ್ತಿದ್ದ ಬ್ರಿಟಿಷರು, ಕೈಗೆ ಸಿಕ್ಕ ಕ್ರಾಂತಿಕಾರಿಗಳನ್ನು ನಿರ್ದಯವಾಗಿ ಗಲ್ಲಿಗೇರಿಸುತ್ತಿದ್ದರು.

ಆದರೆ ಅಹಿಂಸಾವಾದಿಗಳನ್ನು ಮಾತುಕತೆಗೆ ಕರೆದು ಆತಿಥ್ಯ ನೀಡುತ್ತಿದ್ದರು. ದುರದೃಷ್ಟವಶಾತ್, ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸುವ ಸಲುವಾಗಿ ಪ್ರಾಣತೆತ್ತಿದ್ದು ಕ್ರಾಂತಿಕಾರಿಗಳಾದರೆ ಮಹಾತ್ಮನಾಗಿದ್ದು, ಮಹಾನ್ ಅಹಿಂಸಾವಾದಿ ಎಂಬ ಬಿರುದು ಪಡೆದಿದ್ದು ಗಾಂಧೀಜಿ!

ಮನಸ್ಸು ಕುದಿಯುವುದು ಅದಕ್ಕೇ ಮಹಾತ್ಮನೆನಿಸಿದ ಗಾಂಧೀಜಿ ಪುಸ್ತಕಗಳಲ್ಲಿ ಸ್ಥಾನ ಪಡೆದರೆ, 23ನೇ ವರ್ಷಕ್ಕೇ ಹುತಾತ್ಮನಾದ ಭಗತ್ ಸಿಂಗ್ ಭಾರತೀಯರ ಹೃದಯದಲ್ಲಿ ಸ್ಥಾನ ಗಳಿಸಿದ್ದಾನೆ. ಜೈಹಿಂದ್ !

Leave a Reply

Your email address will not be published. Required fields are marked *