80 ರ ವಯಸ್ಸಿನಲ್ಲೂ ಸಿಂಹದಂತೆ ಹೊರಾಡಿದ “ಕುನ್ವರ್ ಸಿಂಹ”

#ಕೇಳಿದ್ದೀರಾ_ನೋಡಿದ್ದೀರಾ 1857 ರ ಸ್ವತಂತ್ರ್ಯ ಸಂಗ್ರಾಮದಲ್ಲಿ ಹೆಸರಿಗೆ ತಕ್ಕಂತೆ 80 ರ ವಯಸ್ಸಿನಲ್ಲೂ ಸಿಂಹದಂತೆ ಹೊರಾಡಿದ “ಕುನ್ವರ್ ಸಿಂಹ”.

ತಪ್ಪದೆ ಪೂರ್ಣ ಓದಿ ಸಿಂಹದ ಕಥೆಯನ್ನು . ಏಪ್ರಿಲ್26 ಕುನ್ವರ್ ಸಿಂಹರ ಬಲಿದಾನ ದಿನ.
ಬಿಹಾರದ ಜಗದೀಶಪುರಹಳ್ಳಿಯ ಜಮೀನ್ದಾರರ ಕುಟುಂಬದಲ್ಲಿ ಜನ್ಮಿಸಿದ ಕುನ್ವರ್ ಸಿಂಹ.
ಶಬ್ಜದಾ ಸಿಂಗ್ (ತಂದೆ), ಪಂಚ್ರತನ್ ದೇವಿ (ತಾಯಿ) ಮತ್ತು ಸೋದರ ಅಮರಸಿಂಹರ.
ತಂದೆ ಮತ್ತು ಸೋದರ ಸಹ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಕಾಲವಾದವರೆ.

1857 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನಾ ಸಾಹೇಬ್, ತಾತ್ಯಾ ಟೋಪೆ, ಬಹದ್ದೂರ್ ಷಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಸುರಪುರ ದೊರೆಗಳಂತೆ ವೀರ ಕುನ್ವರ್ ಸಿಂಗ್ ಸಹ ಭಾರತಾಂಬೆಯ ಸೇವೆಗಾಗಿ ತನ್ನ ಜೀವ ಮುಡಿಪಾಗಿಟ್ಟರು.

ಕ್ರಾಂತಿವೀರ ಕುನ್ವರ್ ಸಿಂಹ ಬ್ರಿಟಿಷ್ ರ ಬುದ್ದಿಯನ್ನು ಅರಿತು ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಗಾದೆಯಂತೆ ಪ್ರಾರಂಭದಲ್ಲಿ ಅವರನ್ನೆ ಯಾಮಾರಿಸಿ ಬ್ರಿಟಿಷ್ ರವರಿಂದಲೇ ಮದ್ದುಗುಂಡು ಕಾರ್ಖಾನೆ ತರೆದು ಅವರ ವಿಶ್ವಾಸಗಳಿಸಿ .ಬ್ರಿಟಿಷ್ ರ ವಿರುದ್ದವೇ ಅವರಿಗೆ ಅನುಮಾನ ಬರದಂತೆ ಸ್ವತಂತ್ರ ಹೋರಾಟಗಾರರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಾ ತನ್ನದೆ ಆದಾ ಸೈನ್ಯವನ್ನು ಕಟ್ಟಿ 1857 ಜುಲೈ 25 ರಂದು ಫಿರಂಗಿಗಳ ವಿರುದ್ದ ಭಾರತೀಯ ಸಿಪಾಯಿಗಳ ನಾಯಕನಾಗಿ ಬ್ರಿಟಿಷರನ್ನು ಸೆದೆಬಡಿದು ಅವರ ಖಜಾನೆ ವಶಕ್ಕೆ ತೆಗೆದುಕೊಂಡರು. ಇದರಿಂದ ಜಾಗೃತರಾದ ಬ್ರಿಟಿಷ್ ಸೈನ್ಯ ಕ್ಯಾಪ್ಟನ್ ಡನಬಾರ್ ನ ನೇತೃತ್ವದಲ್ಲಿ ಯುದ್ದ ಕ್ಕೆ ಬರವುದು ತಿಳಿದು ಗಾಂಗೀ ಎಂಬಲ್ಲಿ ಡನಬಾರ್ ನ ಸಮೇತ ಇಡೀ ಬ್ರಿಟಿಷ್ ಸೇನೆಯನ್ನು ಹತ ಮಾಡಿದ ಕುನ್ವರ್ ಸಿಂಹ. ಇದರಿಂದ ಹತಾಶರಾದ ಬ್ರಿಟಿಷರು ಮೇಜರ್ ಐಲ್ ದೊಡ್ಡ ಸೈನ್ಯದೊಂದಿಗೆ ಬಂದು ಕುನ್ವರ್ ಸಿಂಹ ರ ಪಡೆಯನ್ನು ಹಿಮ್ಮೆಟ್ಟಿಸಿದರು.

ಇದೊಂದು ಸೋಲಿನಿಂದ ಎಲ್ಲಾ ಹೋರಾಟಗಾರರಲ್ಲಿ ಮತ್ತೆ ಬರವಸೆ ತುಂಬಿ ಇನ್ನೂ ಕೆಲವು ಜಮೀನ್ದಾರರ ಬೆಂಬಲ ಪಡೆದು ಜೊತೆಗೆ ವಾರಣಾಸಿ ಮತ್ತು ಗಾಜಿಪುರದ ಸೈನ್ಯದ ನೆರವು ಪಡೆದು ಬ್ರಿಟಿಷ್ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದರು. ಈ ಸೋಲು ಗವರ್ನರ್‌ ಜನರಲ್‌ ಲಾರ್ಡ್ ಕ್ಯಾನಿಂಗ ಅವಮಾನವಾಗಿ ಲಾರ್ಡ್ ಕೆಡ್ ನಾಯಕತ್ವದಲ್ಲಿ ದೊಡ್ಡ ಸೈನ್ಯ ಕಳಿಸಿದರು ಕುನ್ವರ್ ಸಿಂಹ ರ ಚಾಣಕ್ಷ ಯುದ್ದತಂತ್ರಗಳಿಂದ ಬ್ರಿಟಿಷ್ ಸೈನ್ಯ ಸೋತುಸುಣ್ಣವಾಯಿತು .

ಬ್ರಿಟಿಷ್ ಸೈನ್ಯ ಮತ್ತೆ ಲುಗಾರ್ಡ್ ನಾಯಕತ್ವದಲ್ಲಿ ಅತಿದೋಡ್ಡ ಸೈನ್ಯ ಆಕ್ರಮಣಕ್ಕೆ ಸಿದ್ದವಾದಗ ಕುನ್ವರ್ ಸಿಂಹ ಚಾಣಕ್ಷ ತನದಿಂದ ಸೈನ್ಯ ಬೇರೆಡೆಗೆ ಚದುರಿಸಿ ಬ್ರಿಟಿಷ್ ಸೇನೆಗೆ ಕುನ್ವರ್ ಸಿಂಗ್ ಸೈನ್ಯ ಕಾಣದೇ ಕಂಗಾಲಾದ ಬ್ರಿಟಿಷರು ಯುದ್ಧ ಉತ್ಸವ ಕುಸಿಯುವಂತೆ ನೋಡಿ ಕಂಡು ಮತ್ತೆ ಅವರ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು ಪರಿಚಯಿಸಿದ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಫಿರಂಗಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು.

ಕುನ್ವರ್ ಸಿಂಹ ಆ ಕಾಲಕ್ಕೆ 25,000ರೂ (ಅಂದರೆ ಈಗ 250ಕೋಟಿ) ಮತ್ತು ಸೋದರ ಅಮರಸಿಂಹನ ತಲೆಗೆ 5,000ರೂ ಪ್ರಕಟಿಸಿತು ಅಂದರೆ ಆ ಮಹಾವೀರರ ಶೌರ್ಯ ಪರಾಕ್ರಮ ಹೇಗಿರಬೇಕು.

ಕುನ್ವರ್ ಸಿಂಹ ಜಗದೀಶಪುರ ತಲಪಲು ಗಂಗಾನದಿ ದಾಟುತ್ತಿದ್ದಾಗ ಬ್ರಿಟಿಷ್ ಸೈನಿಕನೊಬ್ಬ ಗುಂಡು ಹಾರಿಸಿದ ಅದು ಕುನ್ವರ್ ಸಿಂಹನ ಕೈಗೆ ತಗುಲಿ ಗಾಯವಾಗಿ ಗುಣವಾಗುವ ಲಕ್ಷಣವಿಲ್ಲದ ಕಾರಣ ತನ್ನ ಕೈಯನ್ನೆ ಕತ್ತರಿಸಿ ಗಂಗಾಮಾತೆಗೆ ಅರ್ಪಿಸಿದ ಮಹಾನ್ ರಾಷ್ಟ್ರಭಕ್ತ ಕುನ್ವರ್ ಸಿಂಹ.

ಅಮರಸಿಂಹ ತನ್ನ ಪಡೆಯೊಂದಿಗೆ ಜಗದೀಶಪುರ ತಲುಪಿ ಸೈನ್ಯವನ್ನು ಹಿಮ್ಮುಡಿಗೊಳಿಸಿದ.
ಕೇವಲ ಎರಡುದಿನಕ್ಕೆ ಬಲಗೈ ಕಳೆದುಕೊಂಡ ಅನೇಕ ಯುದ್ದಗಳನ್ನು ಮಾಡಿ, ಯುದ್ದೊಪಕರಣಗಳು ಇಲ್ಲದೆ ಮತ್ತೊಂದು ಯುದ್ದಮಾಡಬೇಕಾಗಿತ್ತು. ಇಂತಹ ಸಂದರ್ಭದಲ್ಲೂ ಅಮರಸಿಂಹ ಲಿಂಗ್ರಾಂಡ್ ಬ್ರಿಟಿಷ್ ಸೇನಾ ನಾಯಕನನ್ನು ಯುದ್ದದಲ್ಲಿ ಯಮಲೋಕಕ್ಕೆ ಕಳಿಸಿದಾಗ ಬ್ರಿಟಿಷ್ ಸೈನ್ಯ ಭಯಭೀತರಾಗಿ ಓಡಿಹೊಯಿತು ನಂತರ ಕುನ್ವರ್ ಸಿಂಹ ಚಕ್ರವರ್ತಿಯಾದ. ಕುನ್ವರ್ ಸಿಂಹ ನ ಈ ಯುದ್ದದ ಬಗ್ಗೆ ಒಬ್ಬ ಬ್ರಿಟಿಷ್ ಸೈನಿಕನ ಹೇಳಿಕೆ “ಕಸಾಯಿಖಾನೆಗೆ ಕುರಿಯ ಮಂದಿಯನ್ನು ತಂದುಬಿಟ್ಟಂಗೆ ಆಗಿದೆ ನಮ್ಮನ್ನು” ಎಂದಾಗ ಈ ವಯೋವೃದ್ದ ವೀರನ ಯುದ್ದ ತಂತ್ರಗಳು ,ಕೌಶಲ್ಯ ಹೇಗಿರಬೇಕು .

ಜನಪದ ಸಾಹಿತ್ಯದಲ್ಲಿ ಕುನ್ವರ್ ಸಿಂಹನ ಬಗ್ಗೆ ಒಂದು ಮಾತು ಬಂದಿದೆ. ”ಸಿಂಹ ಮುದಿಯಾಗಿದೆ. ಹಸಿವು ಬಾಯಾರಿಕೆಯಿಂದ ಬಳಲಿ ಬೆಂಡಾಗಿದೆ. ಸಾವಿನ ದವಡೆಯಲ್ಲಿದೆ. ಆದರೇನು! ಅದು ಸಿಂಹ. ಒಣ ಹುಲ್ಲನ್ನು ತಿಂದೀತೆ? ಇಲ್ಲ ಇಲ್ಲ. ಅರಿ, ಮದಕರಿಗಳ ಮುಂಡವನ್ನು ಸೀಳಿ ಬಿಸಿನೆತ್ತರನ್ನು ಕುಡಿಯುವುದು. ದಾಸ್ಯವೆಂಬ ಒಣ ಹುಲ್ಲು ಈ ಕುವರಸಿಂಹನಿಗೆ ಹಿಡಿಸದು. ಸ್ವತಂತ್ರವಾಗಿರಲು ತಮ್ಮ ಧರ್ಮವನ್ನು ರಕ್ಷಿಸಲು ಪರಂಗಿಗಳೆಂಬ ಮದ್ದಾನೆಗಳನ್ನು ಸೀಳಿ ಬಿಸುಡುವುದು. ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಹೋರಾಡಿದ ನಾಯಕನಾಗಿ ಅನೇಕ ಭೋಜ್ಪುರಿ ಜಾನಪದ ಗೀತೆಗಳಲ್ಲಿ ಅವನು ಉಲ್ಲೇಖಿಸಲ್ಪಟ್ಟಿದ್ದಾನೆ . ಒಂದು ನಿರ್ದಿಷ್ಟ ಜಾನಪದ ಹಾಡು ಹೀಗೆ ಹೇಳುತ್ತದೆ

ಅಬ್ ಚೋಡ್ ರೆ ಫಿರಂಗಿಯಾ! ಹಮಾರ್ ಡೆಸ್ವಾ ಲುಟ್ಪಾತ್ ಕೈಲೆ ತುಹನ್, ಮಜ್ವಾ ಉಡೈಲ್ ಕೈಲಾಸ್, ಡೆಸ್ ಪರ್ ಜುಲಮ್ ಜೋರ್. ಸಹರ್ ಗಾನ್ ಲುತಿ, ಫಂಕಿ, ದಿಯಯಾತ್ ಫಿರಂಗಿಯಾ, ಸೂರ್ಯ ಸೂರ್ಯ ಕುನ್ವಾರ್ ಕೆ ಬ್ರೇದಿ ಮಿ ಮೇ ಲಗಲ್ ಅಜಿಯಾ, ಅಬ್ ಚೋದ್ ಮರು ಫಿರಂಗಿಯಾ! ಹಮಾರ್ ಡೆಸ್ವಾ!

ಬ್ರಿಟಿಷರು ಈಗ ನಮ್ಮ ದೇಶವನ್ನು ತೊರೆಯಿರಿ, ನೀವು ನಮ್ಮನ್ನು ಲೂಟಿ ಮಾಡಿ, ನಮ್ಮ ದೇಶದ ಐಷಾರಾಮಿಗಳನ್ನು ಆನಂದಿಸಿ ಮತ್ತು ನಮ್ಮ ದೇಶದ ಪುರುಷರನ್ನು ದಮನಮಾಡಿ. ನಮ್ಮ ನಗರಗಳು ಮತ್ತು ಗ್ರಾಮಗಳನ್ನು ನೀವು ಲೂಟಿ ಮಾಡಿ ನಾಶಪಡಿಸಿದ್ದೀರಿ. ಈ ಎಲ್ಲವನ್ನೂ ತಿಳಿದುಕೊಂಡ ಕುನ್ವರ ಸಂಹನ ಹೃದಯ ಬೆಂಕಿಯಂತೆ ಸುಡುತ್ತದೆ. ಓ ಬ್ರಿಟಿಷ್! ಈಗ ನಮ್ಮ ದೇಶವನ್ನು ಬಿಟ್ಟುಹೋಗಿ.

ತನ್ನ ಕೊನೆಯ ಯುದ್ಧದಲ್ಲಿ, 23 ಏಪ್ರಿಲ್ 1858 ರಂದು ಜಗ್ದಿಸ್ಪುರದ ಬಳಿ ಹೋರಾಡಿದ ಈಸ್ಟ್ ಇಂಡಿಯಾ ಕಂಪೆನಿಯ ನಿಯಂತ್ರಣದಲ್ಲಿದ್ದ ಸೈನ್ಯವು ಸಂಪೂರ್ಣವಾಗಿ ರವಾನಿಸಲ್ಪಟ್ಟಿತು. 22 ಮತ್ತು 23 ಏಪ್ರಿಲ್ ರಂದು ಬ್ರಿಟಿಷ್ ಸೈನ್ಯದ ವಿರುದ್ಧ ಧೈರ್ಯದಿಂದ ಹೋರಾಡಿದರು ಮತ್ತು ಅವರ ಸೈನ್ಯದ ಸಹಾಯದಿಂದ ಬ್ರಿಟಿಷ್ ಸೈನ್ಯವನ್ನು ಓಡಿಸಿದರು , ಜಗದೀಶ್ ಪುರ ಕೋಟೆ ಯಿಂದ ಯೂನಿಯನ್ ಜ್ಯಾಕ್ ಧ್ವಜ ಕೆಳಕ್ಕೆ ತಂದು ತನ್ನ ಧ್ವಜವನ್ನು ಹಾರಿಸಿದರು. ಅವರು 1858 ರ ಏಪ್ರಿಲ್ 23 ರಂದು ತಮ್ಮ ಅರಮನೆಗೆ ಮರಳಿ ತಲುಪಿ ವಿಜಯದೊಂದಿಗೆ ಕುನ್ವರ್ ಸಿಂಹ ಪಟ್ಟಾಭಿಷಿಕ್ತನಾದ.

ಆದರೆ ವಿಧಿ ವೀರ ಕುನ್ವರ್ ಸಿಂಗ್ ಮಾತ್ರ ವಯಸ್ಸನ್ನು ಲೆಕ್ಕೆಸದೆ ಒಂದೇ ಕೈಯಲ್ಲಿ ಹೋರಾಡಿ ರಕ್ತಹರಿಸಿದ್ದರಿಂದ 26 ಏಪ್ರಿಲ್ 1858 ರಂದು ಭಾರತಾಂಬೆಗಾಗಿ ಬಲಿದಾನವಾದರು. ಬ್ರಿಟಿಷ್ ವಿರುದ್ದ ಸೋದರ ಅಮರಸಿಂಗ ಹೋರಾಟ ಮುಂದುವರಿಸಿದರು.

ನಾವು ಮಾತ್ರ ಇಂತ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತೆ ಬಿಟ್ಟವಲ್ಲ ಯಾಕೇ?.

ಒಂದು ದಿನ ಮುಂಚಿತವಾಗಿ ಇಂತಹ ಮಹಾತ್ಮಾ ಕ್ರಾಂತಿರತ್ನಗಳ ಬಗ್ಗೆ ಪೋಸ್ಟ್ ಮಾಡುವೆ ಕಾರಣ ಇನ್ನಾದರು ಹಿಂದೂಸ್ಥಾನ್ ಇಂತಹ ಮಹಾತ್ಮಾನ ಬಗ್ಗೆ ಎಲ್ಲರೂ ತಿಳಿದು ಇತರರಿಗೆ ಶೇರ್ ಮಾಡಿ ಮಾಹಿತಿಯನ್ನು ಹಂಚಿ ಶ್ರದ್ಧಾಂಜಲಿ ಅರ್ಪಿಸಲಿ ಎಂದು. .

ಜೈ ಬೋಲೋ ಭಾರತ್ ಮಾತಾ ಕೀ ಜೈ

ಜೈಹಿಂದ್ ಜೈಭುವನೇಶ್ವರಿ ವಂದೇಮಾತರಂ

 

Leave a Reply

Your email address will not be published. Required fields are marked *