ದಾವಣಗೆರೆ:ಏ.26 ರಂದು ಪದವಿ , ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾಕ್-ಇನ್ ಇಂಟವ್ರ್ಯೂವ್

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಏ.26 ರ ಬೆಳಗ್ಗೆ 10.00 ಗಂಟೆಗೆ “ವಾಕ್-ಇನ್ ಇಂಟವ್ರ್ಯೂವ್”ನ್ನು ಆಯೋಜಿಸಲಾಗಿದೆ.

ವಾಕ್-ಇನ್ ಇಂಟವ್ರ್ಯೂವ್ ನಲ್ಲಿ ಬೆಂಗಳೂರಿನ ಸ್ಪಂದನ ಬ್ರೈಟ್ ಫ್ಯೂಚರ್ ಇನ್ನೋವೇಷನ್ ಖಾಸಗಿ ಕಂಪನಿಯು ಭಾಗವಹಿಸುತ್ತಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.

 

ಆಸಕ್ತ ಅಭ್ಯರ್ಥಿಗಳು ಏ.26 ರ ಬೆಳಗ್ಗೆ 10.00 ಗಂಟೆಗೆ ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್ ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡು ವಾಕ್-ಇನ್ ಇಂಟವ್ರ್ಯೂವ್ ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 08192-259446, 6361550016, 7406323294 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *