ಗಂಡ ಇರಲಿ, ಅವನೂ ಬರಲಿ.. ಪತಿಗೆ ವಂಚಿಸುವುದರಲ್ಲಿ ಬೆಂಗಳೂರಿಗರೇ ಟಾಪ್

 

ಒಂದು ಓಕೆ, ಎರಡು ಬೇಕೇ ಅಥವಾ ಮೂರು ಸಾಕೇ. ಸಿಲಿಕಾನ್ ಸಿಟಿಯಲ್ಲಿ ವೈವಾಹಿಕ ಬದುಕಿನ ಲೆಕ್ಕಾಚಾರ ಇದೇ ರೀತಿ ಆಗಿ ಬಿಟ್ಟಿದೆಯಂತೆ. ಬೆಂಗಳೂರಿನ ಹುಡುಗಿಯರು ಅಂದ್ರೆ ಮಾರು ದೂರ ಓಡುವಂತಹ ಸಮೀಕ್ಷೆಯೊಂದು ಹೊರ ಬಿದ್ದಿದೆ.

ವೈವಾಹಿಕ ಬದುಕು ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಏಳೇಳು ಜನ್ಮಕ್ಕೂ ನೀನೇ ನನ್ನವಳಾಗಿರಬೇಕು, ನೀನೇ ನನ್ನವನಾಗಿರಬೇಕು ಎನ್ನುತ್ತಿದ್ದ ಜೋಡಿ ಈಗ ಒಂದೇ ಜನ್ಮದಲ್ಲಿ ಏಳು ಸಿಗಲಿ ಅನ್ನೋ ದುರಾಸೆಗೆ ಬಿದ್ದಂತೆ ತೋರುತ್ತಿದೆ. ಸಿಲಿಕಾನ್ ಸಿಟಿಯಷ್ಟೇ ಅಲ್ಲದೇ ಭಾರತದಲ್ಲಿ ಜನರ ಮನಸ್ಥಿತಿಯ ಬಗ್ಗೆ ನಡೆಸಿದ ಸಮೀಕ್ಷೆ ಅಂಶವನ್ನು ನೋಡಿದರೆ ಎಂಥವರೂ ಶಾಕ್ ಆಗುತ್ತಾರೆ.

ಈ ಸ್ಟೋರಿ ಓದುಗರಲ್ಲಿ ಕೊಂಚ ಮುಜುಗರ, ಕೊಂಚ ಬೇಸರ, ಕೊಂಚ ಅಸಮಾಧಾನವನ್ನು ಹುಟ್ಟು ಹಾಕಬಹುದು. ಆದರೆ ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತನ್ನ ಗಂಡನಿಗೆ ಮೋಸ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ಇದೀಗ ಬಟಾಬಯಲಾಗಿದೆ. ಹಾಗಿದ್ದರೆ ಮಹಿಳೆಯರು ತನ್ನ ಗಂಡನ ಹೊರತಾಗಿ ಮತ್ತೊಬ್ಬನೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಕ್ಕೆ ಕಾರಣಗಳಾದರೂ ಏನು…??, ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಅಂಶಗಳು ಏನು…??, ವೈವಾಹಿತ ಬದುಕಿನಲ್ಲಿ ದಂಪತಿಗಳು ತಿದ್ದುಕೊಳ್ಳಬೇಕಾಗಿದ್ದು ಏನು…??

ಎಕ್ಸ್ ಲವ್ವರ್ ಕಡೆಗೆ ಹರಿಯುವ ಚಿತ್ತ!
ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಗಂಡನ ಹೊರತಾಗಿ ಮತ್ತೊಮ್ಮೆ ಪ್ರಿಯತಮನಿಗೆ ಅಂಟಿಕೊಂಡಿರುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗುತ್ತಿದೆ. ಅದಕ್ಕಾಗಿ ಗಂಡನಿಗೆ ಸುಳ್ಳು, ವಂಚನೆ, ಮೋಸದ ಮಾತುಗಳನ್ನು ಆಡುತ್ತಾರೆ. ಅದರಲ್ಲಿ ಬಹುತೇಕ ಮಹಿಳೆಯರು ತಮ್ಮ ಹಳೆಯ ಗೆಳಯನ (ಎಕ್ಸ್ ಲವ್ವರ್) ಕಡೆ ವಾಲುತ್ತಾರೆ. ಈ ವಿಷಯದಲ್ಲಿ ಪುರುಷರು ಸಹ ಏನೂ ನಿಯತ್ತಾಗಿಲ್ಲ. ಎಷ್ಟೇ ಅಂಕಿ-ಅಂಶಗಳನ್ನು ಪರಿಶೀಲಿಸಿದರೂ ಗಂಡನಿಗೆ ಹೆಂಡತಿ ಹಾಗೂ ಹೆಂಡತಿಗೆ ಗಂಡ ಪರಸ್ಪರ ಮೋಸ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಫ್ರೆಂಚ್ ಅಪ್ಲಿಕೇಶನ್ ನಡೆಸಿರುವ ಸಮೀಕ್ಷೆ
ಫ್ರೆಂಚ್ ಮೂಲದ ವಿವಾಹೇತರ ಸಂಬಂಧದ ಡೇಟಿಂಗ್ ಅಪ್ಲಿಕೇಷನ್ ಗ್ಲೀಡೆನ್ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ. ಭಾರತೀಯ ಮಹಿಳೆಯರು ಏಕೆ ಗಂಡನಿಗೆ ವಂಚಿಸಲು ಬಯಸುತ್ತಾರೆ ಎನ್ನುವುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಡೇಟಿಂಗ್ ಅಪ್ಲಿಕೇಷನ್ ಭಾರತದಲ್ಲೇ 5 ಲಕ್ಷಕ್ಕೂ ಹೆಚ್ಚು ಸಬ್ ಸ್ಕೈಬರ್ಸ್ ಅನ್ನು ಹೊಂದಿದೆ. ಇನ್ನೊಂದು ವಿಶೇಷ ಅಂಶವೆಂದರೆ ಇದೇ ಅಪ್ಲಿಕೇಷನ್ ಅನ್ನು ಬಳಸುತ್ತಿರುವ ಶೇ.20ರಷ್ಟು ಭಾರತೀಯ ಪುರುಷರು ಹಾಗೂ ಶೇ.13ರಷ್ಟು ಮಹಿಳೆಯರು ತಮ್ಮ ಸಂಗಾತಿಗೆ ವಂಚಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆನ್ ಲೈನ್ ಮೂಲಕ ವಿವಾಹೇತರ ಸಂಬಂಧದ ನಂಟು
ಗಂಡ-ಹೆಂಡತಿಯ ಹೊರತಾಗಿ ಅನೈತಿಕ ಸಂಬಂಧವನ್ನು ಹೊಂದುವುದಕ್ಕೆ ಬಯಸುವವರ ವಯೋಮಾನದ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳುವಂತಾಗುತ್ತದೆ. ಏಕೆಂದರೆ 34 ರಿಂದ 49 ವರ್ಷದ ಮಹಿಳೆಯರು ಗಂಡನ ಹೊರತಾಗಿ ಮತ್ತೊಬ್ಬ ಪುರುಷರ ಸಂಬಂಧವನ್ನು ಹೊಂದಲು ಹಪಹಪಿಸುತ್ತಾರೆ. ಅದಕ್ಕಾಗಿಯೇ ಆನ್ ಲೈನ್ ಅಪ್ಲಿಕೇಷನ್ ಮೂಲಕ ವಿವಾಹೇತರ ಸಂಪರ್ಕಕ್ಕಾಗಿ ಹಾತೊರೆಯುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದೇ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಇನ್ನೂ ಕೆಲವು ಪ್ರಮುಖ ಅಂಶಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಪರ-ಪುರುಷ, ಪರಸ್ತ್ರಿ ಸ್ನೇಹಕ್ಕೆ ಹಾತೊರೆಯುವುದೇಕೆ ಮನ?

* ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಪತಿ ತಮಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ ಎಂಬ ಕಾರಣಕ್ಕೆ ವಂಚನೆ ಮಾಡುತ್ತಾರಂತೆ. ಅಷ್ಟೇ ಸಂಖ್ಯೆಯ ಮಹಿಳೆಯರು ತಮ್ಮ ಏಕಾಂತದ ಸಮಯವನ್ನು ಕಳೆಯುವ ಸಲುವಾಗಿ ಪತಿಗೆ ವಂಚನೆ ಮಾಡುತ್ತಾರೆ.

* ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.77ರಷ್ಟು ಮಹಿಳೆಯರು ಏಕಾಂತದ ಸಮಯದಿಂದ ರೋಸಿಹೋಗಿರುತ್ತಾರೆ. ಇಲ್ಲವೇ ವಿವಾಹೇತರ ಸಂಬಂಧದಿಂದ ಬದುಕಿನ ಎಕ್ಸೈಟ್ ಮೆಂಟ್ ಹೆಚ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

* ಚೈತನ್ಯವಿಲ್ಲದ ವೈವಾಹಿಕ ಬದುಕಿನಿಂದ ಬೇಸತ್ತು ಪತಿಯೊಂದಿಗೆ ಫ್ಲರ್ಟ್ ಮಾಡುವುದಕ್ಕಾಗಿ ಬಾಹ್ಯ ಸಂಬಂಧವನ್ನು ಹೊಂದಿರುವುದಾಗಿ 10ರಲ್ಲಿ 4 ಮಹಿಳೆಯರು ಹೇಳಿದ್ದಾರೆ.

* ಸರ್ವೆಯ ಫಲಿತಾಂಶದ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾದಲ್ಲಿ ಮಹಿಳೆಯರು ತಮ್ಮ ಪತಿಗೆ ಅತಿಹೆಚ್ಚು ವಂಚನೆ ಮಾಡುತ್ತಾರೆ. ಆದರೆ ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಕಾಣಿಸಿಕೊಳ್ಳುವುದಿಲ್ಲ.

* ಶೇ.57ರಷ್ಟು ಪುರುಷರು, ಶೇ.52ರಷ್ಟು ಮಹಿಳೆಯರು ತಮ್ಮ ಸಂಗಾತಿ ವ್ಯಾಪಾರಕ್ಕಾಗಿ ಊರು ಬಿಟ್ಟು ಹೋದಾಗ ಮೋಸ ಮಾಡುವುದಾಗಿ ಹೇಳಿದ್ದಾರೆ. ಈಗಂತೂ ಬಹುತೇಕ ಮನೆಗಳಲ್ಲಿ ಇಬ್ಬರಲ್ಲಿ ಒಬ್ಬರು ಕೆಲಸಕ್ಕಾಗಿ ಒಂದಿಲ್ಲೊಂದು ನಗರಕ್ಕೆ ಹೋಗುತ್ತಲೇ ಇರುತ್ತಾರೆ. ಅಂಥ ಸಂದರ್ಭದಲ್ಲಿ ಹೊರಗೊಂದು ಅನೈತಿಕ ಸಂಬಂಧವನ್ನು ಹೊಂದುವುದು ವಿಶೇಷ ವಿಷಯವೇನಲ್ಲ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

* ಪತಿಗೆ ವಂಚಿಸುವ ಶೇ.31ರಷ್ಟು ಮಹಿಳೆಯರು ತಾವು ಅಕ್ಕಪಕ್ಕದ ಮನೆಯವರೊಡನೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.