ರೀ ರಿಲೀಸ್​ ಆಯ್ತು ‘ಜೇಮ್ಸ್​’

‘ಜೇಮ್ಸ್’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು ‘ಜೇಮ್ಸ್’ ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ.ಇದೀಗ ಇಂದು ಮತ್ತೆ ಚಿತ್ರ ರೀ ರಿಲೀಸ್ ಆಗಿದೆ.

ಜೇಮ್ಸ್​​ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಧ್ವನಿ ಇಲ್ಲ. ಅಪ್ಪು ಅಕಾಲಿಕ ನಿಧನದಿಂದ ಈ ಚಿತ್ರಕ್ಕೆ ಅವರು ಡಬ್ ಮಾಡಲು ಸಾಧ್ಯವಾಗಲಿಲ್ಲ. ಶಿವರಾಜ್​ ಕುಮಾರ್​, ಪುನೀತ್​ ರಾಜ್​ಕುಮಾರ್​ ಅವರಿಗೆ ಧ್ವನಿ ನೀಡಿದ್ದರು. ‘ಜೇಮ್ಸ್’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು ‘ಜೇಮ್ಸ್’ ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ.ಇದೀಗ ಇಂದು ಮತ್ತೆ ಚಿತ್ರ ರೀ ರಿಲೀಸ್ ಆಗಿದೆ. ಅದು ಪುನೀತ್​ ರಾಜ್​ಕುಮಾರ್​ ಅವರ ಧ್ವನಿ ಜೊತೆಗೆ ರಿಲೀಸ್​ ಆಗಿದೆ. ಅಭಿಮಾನಿಗಳು ಇಂದು ಕೂಡ ಜೇಮ್ಸ್​ ಸಿನಿಮಾಗೆ ಭರ್ಜರಿ ವೆಲ್​ಕಮ್​ ನೀಡಿದ್ದಾರೆ.

ಮಾರ್ಚ್ 17ರಂದು ರಿಲೀಸ್​ ಆಗಿದ್ದ ಜೇಮ್ಸ್​ ಸಿನಿಮಾವನ್ನು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಅಪ್ಪು ಧ್ವನಿಯಲ್ಲಿ ಮತ್ತೆ ರೀ ರಿಲೀಸ್​ ಆಗುತ್ತಿರುವ ವಿಚಾರ ಕೇಳಿ ಮತ್ತಷ್ಟು ಖುಷಿ ಪಟ್ಟಿದ್ದರು. ಇಂದೂ ಕೂಡ ಹಬ್ಬದಂತೆ ಜೇಮ್ಸ್​ ಸಿನಿಮಾವನ್ನು ಬರಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ರಾಜರತ್ನ ಧ್ವನಿ ಕೇಳಿ ಅಪ್ಪು ಅಭಿಮಾನಿಗಳು ಭಾವುಕರಾದರು. ಕೆಲ ಅಭಿಮಾನಿಗಳು ಅಪ್ಪು ಧ್ವನಿ ಕೇಳುತ್ತಿದ್ದಂತೆ ಚಿತ್ರಮಂದಿರದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಚೇತನ್‌ ಕುಮಾರ್‌ ನಿರ್ದೇಶನದ ಪುನೀತ್‌ ನಟನೆಯ ಕಡೆಯ ಚಿತ್ರವನ್ನು ಜೇಮ್ಸ್ ಜಾತ್ರೆಯಾಗಿ ಮಾಡಿದ್ರು. ಈ ಮೂಲಕ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿದ್ರು ಅಭಿಮಾನಿ ದೇವರುಗಳು. ಜೇಮ್ಸ್ ಚಿತ್ರ ನೋಡಿ ಇಷ್ಟಪಟ್ಟಿದ್ದ ಫ್ಯಾನ್ಸ್​​ಗೆ ಅಪ್ಪು ಧ್ವನಿ ಇರಬೇಕಿತ್ತು ಎಂಬ ಕೊರಗಿತ್ತು. ಇದೀಗ ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ ಎಂಟ್ರಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *