ರಾಮನವಮಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಮನೆ ಮಹಡಿ ಇಂದ ಕಲ್ಲುತೂರಿದ ಆರೋಪ ಯುವತಿ ಮನೆ ಧ್ವಂಸ

ಮಧ್ಯಪ್ರದೇಶ; ರಾಮನವಮಿ‌ ಮೆರವಣಿಗೆ ವೇಳೆ ಯುವತಿಯೋರ್ವಳು ಕಲ್ಲು ಎಸೆದಿರುವ ಆರೋಪ ಕೇಳಿ ಬಂದಿದೆ.

ವೀಡಿಯೋ ದೃಶ್ಯಾವಳಿ ಆಧರಿಸಿ ಪೊಲೀಸರು ಆ ಪ್ರದೇಶದಲ್ಲಿದ್ದ ಮನೆಗಳನ್ನು ಕೆಡುವುತ್ತಿರುವ ಆಘಾತಕಾರಿ ಸಂಗತಿ‌ ಬಯಲಾಗಿದೆ.

ಏಲ್ಲೆಲ್ಲಿ ಕಲ್ಲುಗಳನ್ನು ಎಸೆಯಲಾಗಿದೆಯೋ ಆ ಮನೆಗಳನ್ನು ಕೆಡವಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಫೋಟೋದಲ್ಲಿ ಕಾಣುವ ಯುವತಿಯ ಹೆಸರು ಸಬಾ ಎನ್ನಲಾಗಿದೆ. ಈಕೆ ಮದನಿ ಚೌಕ್‌ನಲ್ಲಿರುವ ತನ್ನ ಮನೆಯಿಂದ ಕಲ್ಲು ಎಸೆಯುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಈ ಪ್ರದೇಶದಲ್ಲಿ ನಾಸಿರ್, ಅಸ್ಗರ್ ಮತ್ತು ಬಾಬರ್ ಮೂವರು ವ್ಯಕ್ತಿಗಳ‌ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *