ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ: ಲೀಟರ್ ದರ ಚೆಕ್ ಮಾಡಿ..

ಕಳೆದ ನಾಲ್ಕು ಸಂದರ್ಭದಲ್ಲಿ ತೈಲ ಬೆಲೆಯನ್ನು ಲೀಟರ್‌ಗೆ 80 ಪೈಸೆಯಷ್ಟು ಏರಿಸಲಾಗಿದೆ. ಇದು 2017ರ ನಂತರ ದಾಖಲಾದ ಅತಿ ಹೆಚ್ಚಿನ ಇಂಧನ ದರ ಏರಿಕೆಯೆಂದು ಪರಿಗಣಿಸಲಾಗಿದೆ. ಪಂಚರಾಜ್ಯಗಳ ಚುನಾವಣೆಯ ಸಂದರ್ಭದ ನಾಲ್ಕೂವರೆ ತಿಂಗಳಿಗೂ ಹೆಚ್ಚು ಅವಧಿಯಲ್ಲಿ ತೈಲ ದರ ಹೆಚ್ಚೂ ಕಡಿಮೆ ಸ್ಥಿರವಾಗಿಯೇ ಇತ್ತು. ಇದೇ ಸಂದರ್ಭದಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 30 ಡಾಲರ್‌ ಏರಿಕೆಯಾಗಿತ್ತು ಅನ್ನೋದು ಗಮನಾರ್ಹ.

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ಕಳೆದ ಆರು ದಿನಗಳ ಅವಧಿಯಲ್ಲಿ ಐದನೇ ಬಾರಿಗೆ ತೈಲ ಬೆಲೆ ಏರಿಸಿವೆ. ಈ ಮೂಲಕ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಕ್ರಮವಾಗಿ 50 ಮತ್ತು 55 ಪೈಸೆಯಷ್ಟು ತುಟ್ಟಿಯಾಗಿವೆ. ಇದೇ ವೇಳೆ, ಒಂದು ವಾರದ ಬೆಳವಣಿಗೆಯನ್ನು ನೋಡುವುದಾದರೆ, ಪೆಟ್ರೋಲ್‌ ಮತ್ತು ಡೀಸೆಲ್ ಬೆೆಲೆಗಳು ಕ್ರಮವಾಗಿ ₹3.70 ಹಾಗು ₹3.75 ಯಷ್ಟು ಹೆಚ್ಚಳವಾಗಿದ್ದನ್ನು ಗಮನಿಸಬಹುದು.

ದೆಹಲಿಯಲ್ಲಿ ಸದ್ಯ ಲೀ ಪೆಟ್ರೋಲ್‌ ಬೆಲೆ ₹99.11 ಇದೆ. ಅದೇ ರೀತಿ ಡೀಸೆಲ್‌ ಬೆಲೆ ₹90.42 ಆಗಿದೆ. ಬೆಂಗಳೂರಿನಲ್ಲಿ ಲೀ ಪೆಟ್ರೋಲ್‌ ಬೆಲೆ ₹100.58 ಇದ್ದು, ಡೀಸೆಲ್‌ ₹100.14 ಬೆಲೆ ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ ಲೀ.ಗೆ ₹113.88 ಇದ್ದರೆ, ಡೀಸೆಲ್ ₹98.13 ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಉಭಯ ತೈಲಗಳಲ್ಲಿ ಕ್ರಮವಾಗಿ 53 ಪೈಸೆ ಮತ್ತು 58 ಪೈಸೆ ಹೆಚ್ಚಳವಾಗಿದೆ.

ಸ್ಥಳೀಯ ತೆರಿಗೆ ವ್ಯವಸ್ಥೆಯನ್ನಾಧರಿಸಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಗಳು ವ್ಯತ್ಯಯವಾಗುತ್ತವೆ. ಕಳೆದ ನಾಲ್ಕು ಸಂದರ್ಭದಲ್ಲಿ ತೈಲ ಬೆಲೆಯನ್ನು ಲೀಟರ್‌ಗೆ 80 ಪೈಸೆಯಷ್ಟು ಏರಿಸಲಾಗಿತ್ತು. ಇದು 2017ರ ನಂತರ ದಾಖಲಾದ ಅತಿ ಹೆಚ್ಚಿನ ಇಂಧನ ದರ ಏರಿಕೆಯೆಂದು ಪರಿಗಣಿಸಲಾಗಿದೆ. ಪಂಚರಾಜ್ಯಗಳ ಚುನಾವಣೆಯ ಸಂದರ್ಭದ ನಾಲ್ಕೂವರೆ ತಿಂಗಳಿಗೂ ಹೆಚ್ಚು ಅವಧಿಯಲ್ಲಿ ತೈಲ ದರ ಹೆಚ್ಚೂ ಕಡಿಮೆ ಸ್ಥಿರವಾಗಿಯೇ ಇತ್ತು. ಇದೇ ಸಂದರ್ಭದಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 30 ಡಾಲರ್‌ ಏರಿಕೆಯಾಗಿದೆ.

 

Leave a Reply

Your email address will not be published. Required fields are marked *