ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಟಕ್ಕರ್ ಕೊಟ್ಟಿದ್ದ ಅಟಲ್ ಜೀ

ನರಸಿಂಹರಾವ್ ಅವರು ಭಾರತದ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಿಶ್ವಸಂಸ್ಥೆಯ ಸಭೆಗೆ ಭಾರತದ ಪ್ರತಿನಿಧಿಯಾಗಿ ಕಳುಹಿಸಲಾಯಿತು.

ಅಗ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿತ್ತು.ಭಾರತದ ಪ್ರತಿನಿಧಿ ವಾಜಪೇಯಿ ತಮ್ಮ ಭಾಷಣ ಆರಂಭಿಸಿದರು.

ಒಂದು ಸಣ್ಣ ಕಥೆಯನ್ನು ಹೇಳಲು ಬಯಸುತ್ತೇನೆ…ಎಂದು ಪ್ರಾರಂಭಿಸಿದ ಅವರು…

ಬಹಳ ಹಿಂದೆಯೇ ಋಷಿ(ಸಂತ) ಕಾಶಿಭ್ ಎಂಬಾತನಿಂದಾಗಿ ಈಗಿನ ಕಾಶ್ಮೀರ ಎಂಬ ಹೆಸರು ಬಂದಿದೆ. ಆತ ಆಗ ಅಲ್ಲಿದ್ದ ದಟ್ಟವಾದ ಕಾಡಿನ ಮೂಲಕ ಹೋಗುತ್ತಿದ್ದ ಮತ್ತು ಸುಂದರವಾದ ಸರೋವರವನ್ನು ನೋಡಿದ. ಸರೋವರದಲ್ಲಿ ಸ್ನಾನ ಮಾಡಲು ನಿರ್ಧರಿಸಿದ ಅವನು ತನ್ನ ದೇಹದಿಂದ ಎಲ್ಲಾ ಬಟ್ಟೆಗಳನ್ನು ತೆಗೆದು ಮೊದಲು ಪಕ್ಕಕ್ಕೆ ಇಟ್ಟನು. ಸ್ನಾನಕ್ಕೆದ್ದು ಸರೋವರಕ್ಕೆ ಇಳಿದ ರಿಷಿ ಕಷಭರು ಸ್ನಾನ ಮುಗಿಸಿ ವಾಪಸು ಬರುವಾಗ ಕೆಲ ಪಾಕಿಸ್ತಾನಿಗಳು ತಮ್ಮ ಉಡುಪನ್ನು ಕದ್ದಿರುವುದನ್ನು ಕಂಡು……..

ವಾಜಪೇಯಿ ಈ ರೀತಿ ಹೇಳುತ್ತಿದ್ದಾಗ ಪಾಕಿಸ್ತಾನದ ಪ್ರತಿನಿಧಿ ವಾಜಪೇಯಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ರಿಷಿ ಕಶ್ಯಭ್ ಅವಧಿಯಲ್ಲಿ ಪಾಕಿಸ್ತಾನ ಅಸ್ತಿತ್ವದಲ್ಲಿಲ್ಲದ ಕಾರಣ ಅವರು ಸುಳ್ಳು ಹೇಳುತ್ತಿದ್ದಾರೆ ಮತ್ತು ಪಾಕಿಸ್ತಾನಿಗಳು ರಿಷಿ ಕಶ್ಯಭರ ಬಟ್ಟೆಗಳನ್ನು ಕದ್ದಿರಬಹುದಾದ ಸಾಧ್ಯತೆ ಎಲ್ಲಿದೆ….? ಎಂದು ಅವರು ಕೂಗಿ ಹುಯಿಲೆಬ್ಬಸಿದರು.

ತಕ್ಷಣವೇ ವಾಜಪೇಯಿಯವರು ನಗುತ್ತಾ ಹೇಳಿದರು, ನಾನು ವಿಶ್ವಸಂಸ್ಥೆಗೆ (UNO) ತಿಳಿಸಲು ಬಯಸಿದ ವಿಷಯ ಇಲ್ಲಿ ಈಗ ಅವರಿಂದಲೇ (ಪಾಕಿಸ್ತಾನ) ಪ್ರಸ್ತಾಪ ಅಗಿದೆ….ಧನ್ಯವಾದ.ಈಗ ಚರ್ಚೆಯ ವಿಷಯಕ್ಕೆ ಬರೋಣ ಎಂದ ಅವರು ಅಂದು ಅಸ್ತಿತ್ವದಲ್ಲೇ ಇರದಿದ್ದ ಪಾಕಿಸ್ತಾನ ಇಂದು ಕಾಶ್ಮೀರ ತಮಗೆ ಸೇರಿದ್ದು ಎಂದು ಹೇಳುತ್ತಿದೆ ಎಂದು ಪಾಕಿಸ್ತಾನದ ಬಾಯಿ ಮುಚ್ಚಿಸಿದ್ದರು…!

 

ತಕ್ಷಣವೇ ವಿಶ್ವಸಂಸ್ಥೆಯ ಹಾಲ್‌ನಲ್ಲಿ ಚಪ್ಪಾಳೆ ಮೊಳಗಿತು…

Leave a Reply

Your email address will not be published. Required fields are marked *