ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಜಾರಿಗೆ ತಂದಿದೆ. ನಾಲ್ಕರ ಪೈಕಿ ಶಕ್ತಿ ಯೋಜನೆಯ ಲಾಭ ರಾಜ್ಯದ ಮಹಿಳೆಯರಿಗೆ ಸಿಗುತ್ತಿದೆ.
ಗೃಹಜ್ಯೋತಿಯ ಅರ್ಜಿ ಸಲ್ಲಿಕೆ ದಿನಾಂಕ ಮುಕ್ತಾಯವಾಗಿದೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ಪಡೆಯಲು ಅರ್ಹ ಮಹಿಳಾ ಫಲಾನುವಿಗಳು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.
ಇದೀಗ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಫಲಾನುಭವಿಗೆ ಮತ್ತಷ್ಟು ಅನುಕೂಲ ಘೋಷಣೆ ಮಾಡಿದೆ. ಒಂದಲ್ಲ ಕಳೆದ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಅದನ್ನ ಮನ್ನಾ ಮಾಡಲು ಇಂಧನ ಇಲಾಖೆ ಮುಂದಾಗಿದೆ.
ಗೃಹಜ್ಯೋತಿ ಯೋಜನೆ ಫಲಾನುಭವಿ ಆಗಲು ಬಾಕಿ ಬಿಲ್ ಇರಬಾರದಿತ್ತು. ಜೂನ್ ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಿತ್ತು.ಇದೀಗ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಯೋಜನೆ ಉಚಿತ ವಿದ್ಯುತ್ ನೀಡುವದಾಗಿ ಇಂಧನ ಇಲಾಖೆ ಸ್ಪಷ್ಟಪಡಿಸಿದೆ..
ಒಟ್ಟು ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯ 2.14 ಕೋಟಿ ಫಲಾನುಭವಿಗಳ ಗುರುತು ಮಾಡಲಾಗಿದೆ. ಇದರಲ್ಲಿ 1.40 ಕೋಟಿ ಫಲಾನುಭವಿಗಳ ನೋಂದಣಿ ಮಾಡಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಆಗಸ್ಟ್ 5ರಂದು ಗೃಹಜ್ಯೋತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.