ಮಾಡಳು ಮಲ್ಲಿಕಾರ್ಜುನ್ ಬೆಂಬಲಿತರ ಪಾಲಾದ ಚೆನ್ನಗಿರಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ

ಚನ್ನಗಿರಿ: ಇಲ್ಲಿನ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬೆಂಬಲಿತ ಅಭ್ಯರ್ಥಿಗಳಾದ ಹೊನ್ನೇಬಾಗಿ ಎಸ್.ಮಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಹರೋಸಾಗರ ವೈ.ಚಂದ್ರಮ್ಮ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಸಹಕಾರಿ ಕ್ಷೇತ್ರ ರೈತರ ಬೆನ್ನೆಲುಬು, ತಾಲೂಕು ಮಟ್ಟದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಇಲ್ಲದೆ ಇರುವಂತಹ ಸಮಯದಲ್ಲಿ ರೈತರಿಗೆ ಸಹಕಾರಿ ಬ್ಯಾಂಕುಗಳು ಸಾಲವನ್ನು ನೀಡುವ ಮೂಲಕ ಅರ್ಥಿಕವಾಗಿ ಕೈಹಿಡಿದಿವೆ ಎಂದರು.

ರೈತರು ಪಡೆದಂತಹ ಸಾಲವನ್ನು ಸರಿಯಾದ ಸಮಯದಲ್ಲಿ ಮರು ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಅರ್ಜಿ ಸಲ್ಲಿಸುವವರಿಗೆ ಸಾಲ ಸಿಗುವುದು ಕಷ್ಟವಾಗುತ್ತದೆ. ಶೇ.3ರಷ್ಟು ಕಡಿಮೆ ಬಡ್ಡಿಯಲ್ಲಿ ಯಾವ ಬ್ಯಾಂಕುಗಳೂ ಸಾಲ ನೀಡುವುದಿಲ್ಲ. ಅದನ್ನು ಪಡೆದು ಅರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ರೈತರು ಬ್ಯಾಂಕುಗಳಲ್ಲಿ ಸಾಲ ಪಡೆಯಬೇಕಾದರೆ ಅನೇಕ ಕಸರತ್ತು ಮಾಡಬೇಕಿತ್ತು ಆದ್ದರಿಂದ ಸ್ಥಳೀಯವಾಗಿ ಇರುವಂತಹ ಸಹಕಾರಿ ಬ್ಯಾಂಕುಗಳಿಗೆ ಅವಲಂಬಿತರಾಗಿದ್ದರು. ಈ ಹಿಂದೆ ಸಹಕಾರಿ ಬ್ಯಾಂಕುಗಳ ನಿರ್ದೇಶಕರಾದರೆ ಸಮಾಜದಲ್ಲಿ ಗೌರವ, ಸ್ಥಾನಮಾನಗಳು ಇರುತ್ತಿತ್ತು. ಇಂದು ತಾಲೂಕು ಮಟ್ಟದಲ್ಲಿ ಅನೇಕ ಬ್ಯಾಂಕುಗಳು ಹುಟ್ಟಿಕೊಂಡ ಕಾರಣ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಅಸ್ತಿತ್ವ ಕಳೆದುಕೊಂಡಿವೆ ಎಂದರು.

ರೈತರು ಪಡೆದಂತಹ ಸಾಲವನ್ನು ಸರಿಯಾದ ಸಮಯದಲ್ಲಿ ಮರು ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಅರ್ಜಿ ಸಲ್ಲಿಸುವವರಿಗೆ ಸಾಲ ಸಿಗುವುದು ಕಷ್ಟವಾಗುತ್ತದೆ. ಶೇ.3ರಷ್ಟು ಕಡಿಮೆ ಬಡ್ಡಿಯಲ್ಲಿ ಯಾವ ಬ್ಯಾಂಕುಗಳೂ ಸಾಲ ನೀಡುವುದಿಲ್ಲ. ಅದನ್ನು ಪಡೆದು ಅರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಚ್.ತಿಮ್ಮಪ್ಪ, ನಿರ್ದೇಶಕರಾದ ಬಿ.ಎನ್.ಶೋಭಾ ಉಮೇಶ್‌ಕುಮಾರ್, ಜಿ.ಬಿ.ಹಾಲೇಶಪ್ಪ, ಸಾಕಮ್ಮ, ಮಂಜಪ್ಪ, ಎ.ಜಿ.ಜಗದೀಶ್, ಕೆ.ಎಸ್.ಅಂಬಿಕಾ ಸುರೇಶ್, ಎಚ್.ಅಂಜಿನಪ್ಪ, ಡಿ.ಎಸ್.ರಾಜಪ್ಪ, ಜಿ.ಕೆ.ಜಗದೀಶ್, ಕಾಳಾನಾಯ್ಕ, ಸವಿತಾ ಪ್ರಕಾಶ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗದಳ್ಳಿ ಸ್ವಾಮಿ, ಮಾಜಿ ಅಧ್ಯಕ್ಷ ಉಮೇಶ್‌ಕುಮಾರ್, ಬ್ಯಾಂಕ್ ವ್ಯವಸ್ಥಾಪಕ ಜಿ.ಟಿ.ತಿಪ್ಪೇಸ್ವಾಮಿ ಇದ್ದರು.

Leave a Reply

Your email address will not be published. Required fields are marked *