ಮುಸ್ಲಿಂ ಯುವಕ, ಯುವತಿಯರನ್ನು ಬಚಾವ್ ಮಾಡಲು ಪ್ರಕರಣ ಮುಚ್ಚಿಡಲಾಗ್ತಿದ್ಯಾ – ಮುತಾಲಿಕ್ ಪ್ರಶ್ನೆ

ಧಾರವಾಡ: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಉಡುಪಿ ಖಾಸಗಿ ಕಾಲೇಜಿನ (College) ವೀಡಿಯೋ ವಿವಾದದ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತೀಕ್ಷ್ಣ ಪ್ರತಿಕ್ರಿಯೆ ನೀಡಿ ಮುಸ್ಲಿಂ ಯುವಕ, ಯುವತಿಯರನ್ನು ಬಚಾವ್ ಮಾಡಲು ಪ್ರಕರಣ ಮುಚ್ಚಡಲಾಗ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.

ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 20 ರಂದು ಉಡುಪಿಯಲ್ಲಿ (Udupi) ಅತ್ಯಂತ ಹೇಯ ಕೃತ್ಯ ನಡೆದಿದೆ. ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಬೇಕಿತ್ತು. ಒಂದು ವಾರದ ನಂತರ ಈ ಬಗ್ಗೆ ದೂರು ದಾಖಲು ಮಾಡಲಾಗುತ್ತಿದೆ. ಗೃಹ ಸಚಿವರು ಇದನ್ನು ಸಣ್ಣ ವಿಷಯ ಎಂದು ಹೇಳುತ್ತಾರೆ. ಅವರ ಈ ಹೇಳಿಕೆ ನೋಡಿದರೆ ಉಡುಪಿ ಎಸ್‍ಪಿಯವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂಬ ಅರ್ಥದಲ್ಲಿ ಹೇಳಿದಂತಿದೆ ಎಂದು ಕಿಡಿಕಾರಿದ್ದಾರೆ.

ಗೃಹ ಸಚಿವರೇ ನಿಮ್ಮ ಮಗಳೇ ಆ ಕಾಲೇಜಿನಲ್ಲಿ ಓದುತ್ತಿದ್ದಿದ್ದರೆ ಈ ರೀತಿ ಹಗುರವಾಗಿ ಮಾತಾಡುತ್ತಿದ್ದಿರಾ? ಇದು ಕೇವಲ ವಿಡಿಯೋ ಎಂದಲ್ಲ, ಇದರ ಹಿಂದೆ ದೊಡ್ಡ ಜಾಲ ಇರಬಹುದು. ಮುಸ್ಲಿಂ ಯುವಕರಿಗೆ ಇದನ್ನು ಕಳುಹಿಸುತ್ತಿರಬಹುದು. ಅಲ್ಲದೇ ಇದು ಕೇರಳ ಅಫ್ಘಾನಿಸ್ತಾನ, ಅರಬ್ ರಾಷ್ಟ್ರಗಳಿಗೂ ಫೆÇೀಟೋ ಕಳಿಸುವ ಜಾಲ ಇರಬಹುದು ಈ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದು ಸಣ್ಣ ವಿಷಯ ಎಂದು ಹೇಳುವ ಗೃಹ ಸಚಿವರಿಗೆ ಶೋಭೆ ತರುವಂತದ್ದಲ್ಲ. ಮುಸ್ಲಿಂ ಯುವಕ ಹಾಗೂ ಯುವತಿಯರು ಎಂದು ಬಚಾವ್ ಮಾಡಲು ಈ ರೀತಿ ಮುಚ್ಚಿಡುವ ಕೆಲಸ ನಡೆದಿದೆಯಾ? ಆ ಕಾಲೇಜ್‍ನ ಪ್ರಾಂಶುಪಾಲರು ಇದುವರೆಗೂ ಏಕೆ ದೂರು ಕೊಟ್ಟಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರೂ ಬಣ್ಣ ಬದಲಾಯಿಸುತ್ತಿದ್ದಾರೆ. ಅಧಿಕಾರದಲ್ಲಿರುವವರ ಪ್ರಕಾರ ನಡೆದುಕೊಳ್ಳು ತಂತ್ರ ನಡೆದಿದೆ. ಪೊಲೀಸ್ ಇಲಾಖೆಗೆ ನಾಚಿಕೆಯಾಗಬೇಕು. ನ್ಯಾಯ ನ್ಯಾಯಾನೇ, ಕಾಯ್ದೆ ಕಾಯ್ದೆನೇ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಬಿಜೆಪಿ ಬಂದಾಗ ಒಂದು ಕಾಂಗ್ರೆಸ್ ಬಂದಾಗ ಒಂದು ಎಂದು ಬಣ್ಣ ಬದಲಿಸಬಾರದು ಎಂದ ಆಕ್ರೋಶ ಹೊರಹಾಕಿದ್ದಾರೆ.

ಕಾನೂನು ಪ್ರಕಾರ ನಡೆದುಕೊಂಡರೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ. ಈ ರೀತಿ ನಡೆದ ಘಟನೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಇಡೀ ರಾಜ್ಯಾದ್ಯಂತ ಇದರ ಬಗ್ಗೆ ಹೋರಾಟಕ್ಕೆ ಮುಂದಾಗುತ್ತದೆ. ರಾಜಕಾರಣ ಮಾಡಬೇಡಿ ಎಂದು ಹೇಳುವವರಿಗೆ ಇದು ರಾಜಕಾರಣ ಅಲ್ಲ ಎಂದು ಹೇಳುತ್ತೇನೆ. ಇದು ಹೇಯ ಕೃತ್ಯ, ಇದನ್ನು ತಡೆಯಬೇಕು. ಇದರ ಹಿಂದೆ ಯಾರಿದ್ದಾರೆ ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿ ಹಿಜಾಬ್‍ನಲ್ಲಿ ಮುಸ್ಲಿಂ ಮೌಲ್ವಿ ಹಾಗೂ ಪಿಎಐಗೆ ಮುಖಭಂಗ ಆಗಿದೆ. ಹೈಕೋರ್ಟ್ ಆದೇಶ ಅದರ ಸೇಡು ತೀರಿಸಿಕೊಳ್ಳಲು ಈ ದಿನ ಹಿಂದೂ ಹುಡುಗಿಯರ ಈ ಅಶ್ಲೀಲ ಚಿತ್ರಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿರಬಹುದು. ಎಲ್ಲ ಪ್ರಕಾರದ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಯುವಕ ಕೆಲಸಕ್ಕೆ ಗುಡ್ ಬೈ ಹೇಳಿ,ಒಂದೇ ತಿಂಗಳಲ್ಲಿ ಲಕ್ಷಾಧೀಶನಾದ

Leave a Reply

Your email address will not be published. Required fields are marked *