ಆತನ ಹೆಸರು ಯೋಗೇಂದ್ರ ಸಿಂಗ್ ಯಾದವ್,ಇಂಡಿಯನ್ ಆರ್ಮಿಯ 18 ಬ್ರಿಗೇಡಿಯರ್ ಟೀಮಿನವನು.

ಭಾರತೀಯ ಯೋಧನ ಎದೆಯ ಮೇಲೆ AK – 47 ರೈಫಲ್ಲಿನ ನಳಿಕೆಯಿಟ್ಟ ಪಾಕಿಸ್ತಾನೀ ಸೈನಿಕ ಟ್ರಿಗರ್ ಒತ್ತಿಯೇ ಬಿಟ್ಟನು! ಧನ್ ಧನ್ ಎಂದು ಎರಡು ಸಲ ಹೂಂಕರಿಸಿತು ರೈಫಲ್! ಕೂಡಲೇ ಹತ್ತೊಂಬತ್ತು ವರ್ಷದ ಆ ಭಾರತೀಯ ಸೈನಿಕನ ದೇಹ ಎರಡು ಸಲ ನೆಲದಿಂದ ಅರ್ಧ ಅಡಿ ಮೇಲಕ್ಕೆ ಕುಮುಟೆಗರಿ ಬಿದ್ದಿತು !

ಜೀವ ಹೋಯಿತಾ?!!!!

ಆಗ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು,ದ್ರಾಸ್ ಸೆಕ್ಟಾರಿನ ತೋಲೋಲಿಂಗ್ ಬೆಟ್ಟದ ಕಣಿವೆಯಲ್ಲಿ ಯುದ್ಧ ಜಾರಿಯಲ್ಲಿತ್ತು ಹಾಗೂ ಸದ್ಯದ ಮಾಹಿತಿಯಂತೆ ಪಕ್ಕದಲ್ಲಿಯೇ ಇದ್ದ ಟೈಗರ್ ಹಿಲ್ ಮೇಲಿನಿಂದಲೂ ಪಾಕಿಸ್ತಾನವು ಆಕ್ರಮಣ ಮಾಡಬಹುದು ಎಂಬ ಊಹೆ ಭಾರತೀಯ ಕಮಾಂಡರಿಗೆ ಹೊಳೆಯಿತು.

ಕೂಡಲೇ ಟೈಗರ್ ಹಿಲ್ ಟಾಪ್ ಕಂಟ್ರೋಲಿಗೆ ತೆಗೆದುಕೊಳ್ಳಬೇಕೆಂದು 18ಗ್ರನೇಡಿಯರ್ ಟೀಮನ್ನು ಟೈಗರ್ ಹಿಲ್ ಹತ್ತಲು ಆದೇಶ ನೀಡಲಾಯಿತು,ಈ ಯೋಗೇಂದ್ರ ಯಾದವ್ ಇದ್ದ 18 ಗ್ರನೇಡಿಯರ್ ಟೀಮಿಗೆಯೇ ಈ ಕಸುಬನ್ನು ಏಕೆ ಹೊರಿಸಲಾಯ್ತು ಎಂದರೆ,ಮೂರು ದಿನ ಊಟವಿಲ್ಲದಿದ್ದರೂ ಕೂಡ ಮೊದಲ ದಿನದ್ದಲ್ಲಿದ್ದಂತಹದ್ದೇ ತಾಕತ್ತು ಹೊಮ್ಮಿಸುತ್ತಿದ್ದ ಯೂತ್ ಆರ್ಮೀ ಟೀಮ್ ಅದು ಹಾಗಾಗಿ.

ಪೂರಾ ಕತ್ತಲಾಗಿತ್ತು,ಇದೇ ಸರಿಯಾದ ಸಮಯವೆಂದು,ಇಡೀ ಟೀಮ್ ಟೈಗರ್ ಹಿಲ್ ಹತ್ತಲು ಶುರುವಾಯ್ತು,ಅರ್ಧ ಹತ್ತಿದ ಮೇಲೆ ದಪ್ಪನಾದ ಬಂಡೆಯೊಂದು ಅಡ್ಡ ಬಂದಿತು ಎಡ,ಬಲಕ್ಕೆ ತುಸು ಆಳವಾದ ಕಣಿವೆ ಇತ್ತು ಹಾಗಾಗಿ ಸೈನಿಕನ ಮೇಲೊಬ್ಬ ಸೈನಿಕ ಹತ್ತಿ ಬಂಡೆಯ ಮೇಲೆ ಸಾಗಿ ಹಗ್ಗ ಕಟ್ಟಿ ಅದನ್ನು ಹಿಡಿದು ಮೇಲಕ್ಕೆ ಹತ್ತಿದರೆ ಟೈಗರ್ ಹಿಲ್ ನ ತುದಿ ಕಾಣುವಂತಿತ್ತು,ಮೆಲ್ಲನೆ ಒಬ್ಬೊಬ್ಬರೇ ಹತ್ತುತ್ತಿದ್ದರು ಕೂಡಲೇ ಭರ್ಜರಿ ಫೈರಿಂಗ್ ಈ ಸೈನಿಕರ ಮೇಲೆ ಶುರುವಾಯ್ತು,ಭಾರತೀಯ ಸೈನಿಕರಿಗೆ ಫೈರಿಂಗ್ ಯಾವ ಬದಿಯಿಂದ ಆಗುತ್ತಿದೆ ಎಂದು ಗಮನಿಸುವ ಮುನ್ನವೇ ಇಂಡಿಯನ್ ಆರ್ಮಿಯ ಹತ್ತು ದೇಹಗಳು ಬುಲೆಟ್ ಹೊಡೆತಕ್ಕೆ ಹಾಗೆಯೇ ಬದಿಗೆ ಒಪ್ಪಾಗಿಬಿಟ್ಟವು.

ಮಿಕ್ಕವರೆಲ್ಲಾ ಚಿಕ್ಕ ಪುಟ್ಟ ಬಂಡೆಗಲ್ಲುಗಳ ನಡುವೆ ಅಡಗಿ ಕೂತದ್ದಾಯ್ತು,ಅದೂ ಕೂಡ ಬರೊಬ್ಬರಿ ಆರು ಗಂಟೆಗಳು ಏಕೆಂದರೆ ಬಂಡೆಯಿಂದ ತಲೆ ಮುಂದೆ ಹಾಕಿದರೂ ಸಾವು,ತಲೆ ಹಿಂದೆ ಹಾಕಿದರೂ ಸಾವು ಎಂಬಂತಹಾ ಅಪ್ಪಟ ವಿಕ್ಷಿಬ್ಧ ಪರಿಸ್ಥಿತಿಯದು.

ಪಾಕಿಸ್ತಾನದ ಫೈರಿಂಗ್ ರೇಂಜ್ ಬಹಳೇ ಹತ್ತಿರವಿತ್ತು, ನಿಮಗೆ ಗೊತ್ತಿರಲಿಕ್ಕಿಲ್ಲ ಒಂದು ರೈಫಲ್ಲಿನ ಫೈರಿಂಗ್ ರೇಂಜ್ ಏನಿರುತ್ತದಲ್ಲಾ,ಅದರ ನಿಗದಿತ ದೂರದ ಅಳತೆಯನ್ನು ಟ್ರೈನಿಂಗ್ ಸಮಯದಲ್ಲಿ ಕಲಿಸಿರುತ್ತಾರೆ ಹಾಗಾಗಿ..’ಯಾವುದೇ ಸೈನಿಕನ ರೈಫಲ್ ಕೂಡ ಫೈರಿಂಗ್ ರೇಂಜಿನ ಒಳಗೆ ಸಿಕ್ಕ ವೈರಿಯನ್ನು ಎರಡನೇ ಬುಲೆಟ್ಟಿಗೆ ಆಸ್ಪದವನ್ನೇ ಕೊಡದಂತೆ ಹೊಡೆದು ಹಾಕುವ ಕುಶಲನಿಖರತೆಯನ್ನು ಹೊಂದಿರುತ್ತಾರೆ’ ಸೋ ದೇರೀಸ್ ನೋ ಛಾಯ್ಸ್ ‘ನಾವೀಗ ಫೈರಿಂಗ್ ರೇಂಜಿನ ಒಳಗಿದ್ದೇವೆ,ಪಾಕಿಸ್ತಾನದ ವೈರಿ ಮೇಲಿದ್ದಾನೆ ಹಾಗಾಗಿ ಮರು ಆಕ್ರಮಣ ಭಲೇ ಕಷ್ಟದ್ದು’ ಎಂದು ಮಿಕ್ಕ 18ಗ್ರನೇಡಿಯರ್ ಟೀಮಿಗೆ ಸಂಪೂರ್ಣವಾಗಿ ಅರ್ಥವಾಗಿಹೋಯ್ತು.

ಬೆಳಕು ನಿಚ್ಚಳವಾಗಿ ಮೂಡಿದ್ದರೂ ಕೂಡ ಪಾಕಿಸ್ತಾನದ ಫೈರಿಂಗ್ ಜಾರಿಯಲ್ಲಿತ್ತು,ಟೈಗರ್ ಹಿಲ್ ನ ಮೇಲಿದ್ದವರು ಐವತ್ತು,ಅರವತ್ತು ಜನರಾದರೆ ಭಾರತೀಯ ಸೈನಿಕರಿದ್ದದ್ದು ಕೇವಲ ಹನ್ನೆರಡೇ ಸೈನಿಕರು.

‘ನಾವೀಗ ಫೈರಿಂಗ್ ಫುಲ್ ಸ್ಟಾಪ್ ಮಾಡಿ ಆಕಡೆ ಈ ಕಡೆ ಹರಡಿಕೊಂಡು , ಅಡಗಿಬಿಡೋಣ ಆಗ ನಮ್ಮ ಮದ್ದು ಗುಂಡುಗಳು ಖಾಲಿಯಾದವೆಂದು ಪಾಕಿಗಳು ಹತ್ತಿರ ಬರುತ್ತಾರೆ ಆಗ ಎಲ್ಲರೂ ಏಕಕಾಲಕ್ಕೆ ಫೈರಿಂಗ್ ಓಪನ್ ಮಾಡಿಬಿಡುವ’ಎಂದ ಯೋಗೀಂದ್ರ ಸಿಂಗ್ ಯಾದವಿಗೂ ಕೂಡ ಅರಿವಿತ್ತು ಇದೇ ನಮ್ಮ ಸಾವಿನ ಅಂತಿಮ ಫೈರಿಂಗ್ ಎಂದು,ಏಕೆಂದರೆ ಅದೊಂದೇ ರೌಂಡ್ ಫೈರಿಂಗಿಗೆ ಸಾಕಾಗುವಷ್ಟು ಮಾತ್ರ ಬುಲೆಟ್ಟುಗಳು ಇದ್ದವಷ್ಟೇ ಅದಾದ ಮೇಲೆ ಬೊಗಸೆ ಪೂರಾ ಖಾಲಿ, ಆಯುಧರಹಿತ ಸೈನಿಕ ಎಂದರೆ ಅದೇ ತಾನೆ ಆಯುಧಪೂಜೆ ಮಾಡಿದ ಟ್ಯಾಂಕರ್ ಕೆಳಗಿಟ್ಟ ನಿಂಬೇಹಣ್ಣಿಗೆ ಸಮಾನ’ ಎಂಬ ಜೋಕ್ ಆರ್ಮಿಯಲ್ಲಿದ್ದದ್ದು ಅಲ್ಲಿದ್ದ ಎಲ್ಲರಿಗೂ ಗೊತ್ತಿತ್ತು.

ಎಲ್ಲರೂ ಸತ್ತವರಂತೆ ನಟಿಸುತ್ತಾ ಹರಡಿ ಬಿದ್ದರು,ಮೇಲಿದ್ದ ಹಲವು ಪಾಕಿಸ್ತಾನಿಗಳು ‘ಇವರೆಲ್ಲಾ ಸತ್ತುಹೋದರು ಅಥವಾ ಬುಲೆಟ್ ಮುಗಿದಿರಬೇಕು’ ಎಂದು ಯೋಚಿಸಿ ಹತ್ತಿರ ಬಂದದ್ದೇ ತಡ ದಶದಿಕ್ಕುಗಳಿಂದಲೂ ಏಕಕಾಲಕ್ಕೆ ಫೈರಿಂಗ್ ಕಿವಿಗಡಚಿಕ್ಕುವಂತೆ ಶುರುಮಾಡಲಾಯ್ತು,ಹತ್ತಿರಕ್ಕೆ ಬರುತ್ತಿದ್ದ ಪಾಕಿಸ್ತಾನದ ಒಂದು ಜೀವವೂ ಅನ್ನ ತಿನ್ನಲು ಉಳಿಯದಂತೆ ಎಗರಿಬಿದ್ದು ಸತ್ತವು ಅದೇ ಸಮಯಕ್ಕೆ ಕೆಲವು ಲೈಟ್ ಮಷೀನ್ ಗನ್ನುಗಳು ‘ಟೊರ್ರರ್ರರ್ರರ್ರರ್’ಎಂದು ಮ್ಯಾಗಜೀನ್ ಖಾಲಿಯಾದ ಸಂದೇಶ ನೀಡಿದವು.

ಅದೇ ಸಮಯಕ್ಕೆ ಐದು ಜನ ಭಾರತೀಯ ಸೈನಿಕರ ದೇಹಕ್ಕೆ ಯಕ್ಕಾಂಚಿಕ್ಕೀ ಬುಲೆಟ್ಟುಗಳು ತೂರಿಬಿಟ್ಟದ್ದವು ಅದರಲ್ಲಿಯೂ ಒಬ್ಬ ಸೈನಿಕ ‘ಯೋಗೇಂದ್ರ ಆ ರೈಫಲ್ ನನ್ನ ಕಡೆ ಎಸೆದುಬಿಡು’ ಎಂದು ಕೂಗಿದ್ದು ಕೇಳಿಸಿತು, ಆತ ಕೈ ತೋರಿಸಿದ,ಅಲ್ಲಿ ಬಿದ್ದಿದ್ದ ಆ ಅಡ್ವಾನ್ಸ್ಡ್ ಮೀಷನ್ ರೈಫಲ್ ನವೀನ ಮಾದರಿಯದು ಅದನ್ನು ಹ್ಯಾಂಡಲ್ ಮಾಡುವವನು ನಮ್ಮ ಟೀಮಿನಲ್ಲಿ ಅವನ ಹೊರತಾಗಿ ಬೇರಾರೂ ಇರಲಿಲ್ಲ ಹಾಗಾಗಿ ಅವನು ಏನಿಲ್ಲವೆಂದರೂ ಇಪ್ಪತ್ತು ಬುಲೆಟ್ಟುಗಳಿಂದ ದೇಹ ಜರ್ಜರಿತವಾಗಿದ್ದರೂ, ಇನ್ನು ಹತ್ತಿಪ್ಪತ್ತು ಸೆಕೆಂಡಿನಲ್ಲಿ ನನ್ನ ಜೀವ ಹೋಗುತ್ತದೆ ಎಂದು ತಿಳಿದಿದ್ದರೂ ಕೂಡ ಮಿಕ್ಕ ಇಲ್ಲಿರುವವರಲ್ಲಿ ಆ ರೈಫಲನ್ನು ಹ್ಯಾಂಡಲ್ ಮಾಡುವವರು ಯಾರೂ ಇಲ್ಲದ ಕಾರಣ, ನಾನೇ ಹ್ಯಾಂಡಲ್ ಮಾಡುತ್ತೇನೆ ಎಂದು ಕೂಗಿದಾಗ ‘ಸಾವಿನ ಅಂತಿಮ ಕ್ಷಣದಲ್ಲಿಯೂ ಕೂಡ ದೇಶಕ್ಕಾಗಿ ಈ ಜೀವ ಅದೆಷ್ಟು ಪರಿತಪಿಸುತ್ತಿದೆ’ ಎಂದು ಯೋಗೀಂದ್ರ ಯಾದವ್ ಕಣ್ಣಿನಲ್ಲಿ ತೆಳ್ಳನೆಯ ಅಲೆಗಳು ಉಮ್ಮಳಿಸಿದವು.

ಯೋಗೇಂದ್ರ ಯಾದವ್ ಆ ಅಡ್ವಾನ್ಸ್ಡ್ ರೈಫಲ್ ಮೇಲೆ ಕೈ ಹಾಕಲು ಬಗ್ಗಿದ್ದೇ ತಡ ,ತಾನು ಅಡಗಿ ಕೂತಿದ್ದ ಬಂಡೆಯ ಮೇಲೆಯೇ ಪಾಕಿಸ್ತಾನೀ ಸೈನಿಕನೊಬ್ಬ ಗ್ರನೈಡ್ ಸೇಫ್ಟಿ ಪಿನ್ ಬಿಚ್ಚಿ ಯೋಗೀಂದ್ರ ಯಾದವ್ ಮೇಲೆ ಹಾಕಿಯೇ ಬಿಟ್ಟನು!

ನಾವುಗಳು ಈ ಸೀನ್ ನೋಡಿ ಹೆದರಬೇಕಷ್ಟೇ,ಪಾಕಿ ಕೈಯಿಂದ ಗ್ರವೇಡ್ ಬೀಳುವ ಸಮಯಕ್ಕೆ ಪಿನ್ ತೆಗೆದಿರಬೇಕಲ್ಲವಾ ಹಾಗಾಗಿ ಇನ್ನೂ ಐದು ಸೆಕೆಂಡಿನಷ್ಟು ಬಹು ದೊಡ್ಡ ಸಮಯವಿದೆ…..(ಎಂಬುದು ಸೈನಿಕರಿಗೆ ಮಾಮೂಲಿ ವಿಚಾರ) ಎಂದು ಬರ್ರನೆ ಎಡಕ್ಕೆ ಎಗರಿದ ಯೋಗೀಂದ್ರ ಯಾದವ್ ಗನ್ ಬಳಸಿ ಆ ಪಾಕಿಯನ್ನು ಸಾಯಿಸಿದ್ದೂ ಆಯ್ತು.

ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಂದು ಗ್ರನೇಡ್ ಬಂದು ಯೋಗೀಂದ್ರ ಯಾದವ್ ಮುಂದೆಯೇ ಬಿತ್ತು…ಯೋಚಿಸುವುದರೊಳಗೆ ದೊಡ್ಡ ಬ್ಲಾಸ್ಟ್ ಗ್ರನೇಡಿನ ಲೋಹದ ಚೂರು ಯೋಗೀಂದ್ರ ಯಾದವನ ಅರ್ಧ ಮೂಗಿನ್ನು ಕತ್ತರಿಸಿ ಕೆನ್ನೆಯನ್ನು ನೀಟಾಗಿ ಸೀಳಿ ಹಾಕಿತು…ಅದೂ ಸಾಲದೆಂದು,ಅದೇ ಸಮಯಕ್ಕೆ ಕಾಲಿಗೆ ಆರು ಬುಲೆಟ್ಟುಗಳು ತೂರಿದವು…….ಗ್ರನೇಡ್ ಮುಖ,ಮೂಗು ಕೊಯ್ದ ಹೊಡೆತಕ್ಕೆ ಜ್ಞಾನ ತಪ್ಪುವಂತಾಗುತ್ತಿತ್ತಲ್ಲಾ ಆ ನೋವಿಗೆ ಅಳಬೇಕಾ ಅಥವಾ ಮಶೀನ್ ಗನ್ನಿನ ಷೋಗೆ ಸಿಕ್ಕು ಏಕಕಾಲಕ್ಕೆ ಆರು ಬುಲೆಟ್ಟುಗಳು ಕಾಲಿಗೆ ತೊಡೆಗೆ ತೂರಿದ ನೋವಿಗೆ ಅಳಬೇಕಾ ಎಂದು ಯೋಚಿಸುವ ಸಮಯ ಇದಲ್ಲವೇ ಅಲ್ಲ ಎಂದು ಯೋಚಿಸಿದನು.

ಪಾಕಿಸ್ತಾನಿ ಸೈನಿಕರು ಟೈಗರ್ ಹಿಲ್ ಕಡೆಯಿಂದ ಆಕ್ರಮಣ ಮಾಡುವ ಸಾದ್ಯತೆ ಇದೆಯಾ ಎಂದು ಗಮನಿಸಲಿಕ್ಕಷ್ಟೇ ಮೇಲಕ್ಕೆ ಹತ್ತಿದ್ದ ನವಯುವಕರ ಟೀಮ್ ಅದು ಯೋಗೀಂದ್ರ ಯಾದವ್ ಹೊರತಾಗಿ ಮತ್ತೆಲ್ಲರೂ ಸತ್ತದಾಗಿತ್ತು.

ಪಾಕಿಸ್ತಾನಿಗಳಿಗೆ ಇವರೆಲ್ಲರೂ ಸತ್ತದ್ದು ಗಮನಕ್ಕೆ ಬಂತು ಹಾಗಾಗಿ ಟೈಗರ್ ಹಿಲ್ ತುದಿಯಿಂದ ಮಿಕ್ಕ ಪಾಕಿಗಳು ಕೆಳಗೆ ಬರಲೇ ಇಲ್ಲ,ಆರು ಜನ ಪಾಕ್ ಸೈನಿಕರು ಮಾತ್ರ ಭಾರತೀಯರು ಸತ್ತದ್ದು ಖಾತ್ರಿ ಮಾಡಿಕೊಳ್ಳಲಿಕ್ಕೆ ಹತ್ತಿರ ಬಂದು ಅದಾಗಲೇ ಸತ್ತಿದ್ದ ಪ್ರತಿಯೊಬ್ಬ ಭಾರತೀಯ ಸೈನಿಕನ ಎದೆಯ ಮೇಲೆ AK 47ರೈಫಲ್ಲಿನಿಂದ ಫೈರ್ ಮಾಡುತ್ತಾ ಸಾಗುತ್ತಿರುವಾಗ ಅಲ್ಲಿಯೇ ಬಿದ್ದಿದ್ದ ಯೋಗೀಂದ್ರ ಯಾದವ್ ನ ಮನದ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಯೋಚಿಸಿನೋಡಿ ! ಪಕ್ಕದಲ್ಲಿಯೇ ಪಾಕಿಸ್ತಾದವನ ಫುಲ್ಲಿ ಲೋಡೆಡ್ ರೈಫಲ್ ಮಿರುಗುಡುತ್ತಾ ಬಿದ್ದಿತ್ತು ಆದರೆ ಅದು ಕೈಯ್ಯಳತೆಯಲ್ಲಿಯೇ ಇದ್ದರೂ ಕೂಡ ಯೋಗೀಂದ್ರ ಯಾದವನ ಕೈ ಅದನ್ನು ಹಿಡಿಯಲು ಶಕ್ತಿ ಕುಂದಿಸಿಯಾಗಿತ್ತು.

ಯೋಗೀಂದ್ರ ಯಾದವ್ ಹತ್ತಿರಬಂದ ಪಾಕಿಯು ರೈಫಲ್ಲಿನಿಂದ ಎಡ ತೋಳು,ಭುಜಕ್ಕೆ ಎರಡು ಫೈರಿಂಗ್ ಕೊಟ್ಟನು…ಉಹ್ಞೂಂ….ಮುಖದಲ್ಲಿ ನೋವು,ಕಣ್ಣಿನಲ್ಲಿ ಹನಿಯೂ ಕೂಡ ಜೀನುಗದಂತಿರಿಸಿಕೊಂಡನು ಯೋಗೀಂದ್ರ ಯಾದವ್……ನಂತರ ಎದೆಯ ಮೇಲೆ AK – 47 ರೈಫಲ್ಲಿನ ನಳಿಕೆಯಿಟ್ಟ ಪಾಕಿಸ್ತಾನೀ ಸೈನಿಕ ಟ್ರಿಗರ್ ಒತ್ತಿಯೇ ಬಿಟ್ಟನು! ಧನ್ ಧನ್ ಎಂದು ಎರಡು ಸಲ ಹೂಂಕರಿಸಿತು ರೈಫಲ್!

ಯೋಗೀಂದ್ರ ಯಾದವ್ ಗೆ ದೇವರು ಅನುಕೂಲ ಕೊಟ್ಟಂತಿತ್ತು ಎದೆಯ ಜೇಬಿನಲ್ಲಿದ್ದ ಎರಡು ಐದು ರೂಪಾಯಿ ಕಾಯಿನ್ನಿಗೆ ಬುಲೆಟ್ ಜಡಿದಿತ್ತು…”ದುಡ್ಡಿಂದ ಬದುಕೋಕಾಗುತ್ತೇನ್ರೀ…ಎಂಬ ಡೈಲಾಗ್ ಇರಬಹುದು ನಿಜ ಆದರೆ ಆ ಎರಡು ನಾಣ್ಯಗಳು,ಎದೆಯ ಮೇಲೇ ಕೂತು ಮುತ್ತು ಕೊಟ್ಟ AK 47ಬುಲೆಟ್ಟನ್ನು ಸಮರ್ಥವಾಗಿ ಎದುರಿಸಿದ್ದವು.

ಸತ್ತೇ ಹೋದೆ ಎಂದುಕೊಂಡಿದ್ದ ಯೋಗೀಂದ್ರ ಯಾದವ್ ದೇಹದಲ್ಲಿ ನವಚೈತನ್ಯ ಮೂಡಿತು,ನನ್ನಿಂದ ಈ ದೇಶಕ್ಕೆ ಇನ್ನೂ ಕೊಡುಗೆ ಕೊಡಬೇಕಾದದ್ದಿದೆ ಹಾಗಾಗಿ ನಾನಿನ್ನೂ ಸತ್ತಿಲ್ಸ ಎಂದು ಯೋಚಿಸಿದವನೇ ಬೆಲ್ಟಿನಲ್ಲಿ ನೇತಾಡುತ್ತಿದ್ದ ಗ್ರನೈಡ್ ಕಿತ್ತವನೇ ಅದೇ ತಾನೇ ಎದೆಯ ಮೇಲೆ ಫೈರ್ ಮಾಡಿ ಹಿಂದಿರುಗುತ್ತಿದ್ದ ಪಾಕಿಯ ಕಡೆ ತೂರಿಬಿಟ್ಟನು ! ಪಾಕಿ ಅದಾಗಲೇ ಬೆನ್ನು ತೋರಿಸಿ ಹೋಗುತ್ತಿರುವುದು ಕಾಣುತ್ತಿದ್ದದ್ದರಿಂದ ಯೋಗೀಂದ್ರ ಯಾದವ್ ಎಸೆದ್ ಗ್ರನೇಡ್ ಪಾಕಿಯ ತಲೆಯನ್ನೇ ಛಡೀಲನೇ ಸಿಡಿಸಿಬಿಟ್ಟಿದ್ದರಿಂದ ತಲೆಯಿಲ್ಲದ ಪಾಕಿಸ್ತಾನದವನ ದೇಹ ಯೋಗೀಂದ್ರ ಯಾದವ ಮೇಲೆಯೇ ಬಿದ್ದಿತು.

ಕೂಡಲೇ ಪಕ್ಕದಲ್ಲಿಯೇ ಬಿದ್ದಿದ್ದ ರೈಫಲ್ ಹಿಡಿದವನೇ ಮ್ಯಾಗಜೀನ್ ಖಾಲಿಯಾಗುವವವರೆಗೂ ಒಂದೇ ಕೈಯಲ್ಲಿ ಗುರಿ ಹಿಡಿಯಲಾಗದೇ ಧನಧನಿಸಿಬಿಟ್ಟನು.

ಸತ್ತವರ ಖಾತರಿಗಾಗಿ ಬಂದಿದ್ದ ಎಲ್ಲಾ ಪಾಕಿಸ್ತಾನಿಗಳೂ ಕೂಡ ಯೋಗೀಂದ್ರನ ಅನ್ ಏಯ್ಮ್ಡ್ ಫೈರಿಂಗಿಗೆ ಬಲಿಯಾಗಿ ಹೋದರು.

ಅಷ್ಟು ಸಾಕಿತ್ತು,ಟೈಗರ್ ಹಿಲ್ ಮೇಲಿನವರು ನನ್ನ ಹಿಡಿಯಲು ಬರುವಷ್ಟರಲ್ಲಿ ನಾನು ಉರುಳಿ ಬಿದ್ದಾದರೂ ಸರಿ ಕೆಳಗಿನವರಿಗೆ ಇಲ್ಲಿನ ಮಾಹಿತಿ ಕೊಡಬೇಕು ಎಂದು ತಟ್ಟಾಡಿಕೊಂಡು ದೌಡಾಯಿಸಿದನು ಯೋಗೀಂದ್ರ ಯಾದವ್.

ಇನ್ನು ಅರ್ಧ ಸಾವನ್ನಪ್ಪಿದ ದೇಹ ಇಟ್ಟುಕೊಂಡು ಇಲ್ಲಿ ಹೊಡೆದಾಡಲಾಗದು,ಎಂದು ಕೆಳಗೆ ಬೀಳುತ್ತಾ ಮುರಿದ ಎಡಗೈಯನ್ನು ಕತ್ತರಿಸಿ ಹಾಕಿ ಓಡಲೂ ಕೂಡ ಪ್ರಯತ್ನಿಸಿದನು ಆದರೆ ಕೈಯಲ್ಲಿದ್ದ ಚಾಕು ಎಡ ಭುಜದ ನರಗಳನ್ನು ಕತ್ತರಿಸುವಷ್ಟು ಚೂಪಿಲ್ಲದ್ದರಿಂದ ಕೈ ಕತ್ತರಿಸಲು ಆಗಲಿಲ್ಲ.

ಈಗಾಗಲೇ ಮೇಲಕ್ಕೆ ಹತ್ತುತ್ತಿರುವ ಟೀಮಿಗೂ ಕೂಡ ನಾನು ಸಂದೇಶ ಕೊಡದೆ ಹೋದರೆ ಅವರೂ ಕೂಡ ಇಲ್ಲಿಯೇ,ನಮ್ಮಂತೆಯೇ ಅನಾಥ ಸಾವನ್ನಪ್ಪುತ್ತಾರೆ ಹಾಗಾಗಿ ನಾ ಕೂಡಲೇ ಕೆಳಗೆ ಸಾಗಬೇಕು ,ನಾನು ನಮ್ಮ ಇಂಡಿಯನ್ ಆರ್ಮಿಯ ಮುಂದೆ ಹೋಗಿ ಒಂದೇ ಒಂದು ಮಾತು ಕೂಡ ಆಡದಂತೆ ಸತ್ತರೂ ಸಾಕು…

“ಅಷ್ಟರಲ್ಲಿಯೇ ಅರ್ಥ ಮಾಡಿಕೊಂಡು ರಣ ಹುಚ್ಚರಂತೆ ನುಗ್ಗುವ ನನ್ನ ಸೈನಿಕರಿಗೆ ನೀವು ಅರ್ಧ ಗಂಟೆಯ ಊಟವೂ ಅಲ್ಲ,ನಮ್ಮ ಕಮಾಂಡರಿಗೇನಾದರೂ ರೇಗಿ ಇಂಡಿಯನ್ ಏರ್ ಫೋರ್ಸ್ ಎಂದು ಬೊಬ್ಬಿರಿದನೋ ಮುಗಿಯಿತು ಕಥೆ ಮೂರು ನಿಮಿಷದ ಗೋಡೆಸುಸ್ಸು ಮಾಡಲೂ ಕೂಡ ಸಮಯ ಸಿಗದಂತೆ ನಿಮ್ಮ ದೇಹವನ್ನು ಇಟ್ಟಾಡಿಸಿ ಹೊಡೆಯುತ್ತಾರೆ”

ಎಂದು ತಪುಕ್ಕನೆ ಟೈಗರ್ ಹಿಲ್ ತುದಿಯ ಕಡೆ ನೋಡುತ್ತಾ,ಉಗಿಯುತ್ತಾ ಕಣಿವೆ ಬಿದ್ದು ದೇಹದ ಸಮಸ್ತ ಭಾಗದಿಂದಲೂ ರಕ್ತ ಕಾರಿಕೊಂಡು ಹೋಗಿ ಇಂಡಿಯನ್ ಆರ್ಮಿಯ ಬೇಸ್ ಕ್ಯಾಂಪ್ ಮುಂದೆ ಬಿದ್ದಾಗ ಯೋಗೀಂದ್ರ ಯಾದವ್ ಮುಖದಲ್ಲಿ ಮೇಲಿದ್ದವರನ್ನೆಲ್ಲಾ ಇನ್ನಿಲ್ಲದಂತೆ ಸೆದೆಬಡಿದ ಮಹೋನ್ನತ ಅಟ್ಟಾಹಾಸ ತುಂಬುಗರೆದಿತ್ತು.

ಯೋಗಿಂದ್ರ ಯಾದವ್ ನ ಸಿಟ್ಟನ್ನು ಗಮನಿಸಿದ ಇಂಡಿಯನ್ ಆರ್ಮಿ ಮರುತ್ತರಕ್ಕಾಗಿ ಸೈನಿಕರನ್ನು ಆಯ್ದುಕೊಳ್ಳಲಿಲ್ಲ ,ಯೋಗೀಂದ್ರ ಯಾದವ್ ಊಹೆಯಂತೆ ಇಂಡಿಯನ್ ಏರ್ ಫೋರ್ಸ್ ನ ಮೀರಜ್ -2000 ಹೆಸರಿನ ಐದು ಯುದ್ಧ ವಿಮಾನಗಳನ್ನು ಕಣಕ್ಕಿಳಿಸಿತು ಅವು ಟೈಗರ್ ಹಿಲ್ ಸೋಸಲಿಕ್ಕೆ ಹೊರಟವು, ಕೆಳಗೆ ಓಡಿದ ಒಬ್ಬ ಏನು ಮಾಡಿದ ಎಂದು ಅರ್ಥವಾಗುವುದರೊಳಗೆ,ಮರುದಿನ ಮದ್ಯಾಹ್ನದೊಳಗೆ ಟೈಗರ್ ಹಿಲ್ ಮೇಲಿದ್ದ ಎಲ್ಲಾ ಪಾಕಿಸ್ತಾನಿಗಳನ್ನೂ ಕೂಡ ಸಿಗಿದು ತೋರಣ ಕಟ್ಟಲಾಗಿತ್ತು.

ಇದಿಷ್ಟೂ ಗಮನಿಸಿ ಯೋಗೀಂದ್ರ ಯಾದವ್ ಗೆ ಪರಮವೀರ ಚಕ್ರ ಪ್ರಶಸ್ತಿ ಕೊಡಲಾಯ್ತು ಜೊತೆಗೆ ‘ಗ್ರನೇಡಿಯರ್ ಯೋಗೀಂದ್ರ ಸಿಂಗ್ ಯಾದವ್’ ಎಂಬ ಉತ್ತಮ ಪೋಸ್ಟ್ ಕೂಡ.

Leave a Reply

Your email address will not be published. Required fields are marked *