ಬೆಂಗಳೂರಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ.

ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ್ ವೃತ್ತದ ಬಳಿ ನಡೆದಿದೆ.

ಪ್ರಕೃತಿ ಆತ್ಮಹತ್ಯೆಗೆ ಶರಣಾದ ಯುವತಿಯ ಹೆಸರು ಎನ್ನಲಾಗಿದೆ. ಐಪಾಯಿಂಟ್ ತ್ರೀ ಬಹುಮಹಡಿ ಕಟ್ಟಡದಿಂದ ಬಿದ್ದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 10ನೇ ಮಹಡಿಯಿಂದ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಪಾರ್ಕ್ ಮಾಡಿದ್ದ ಕಾರು ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ಬಳಿ ಇದ್ದ 300 ರೂಪಾಯಿ ಹಣ, ರೆಡ್ಮಿ ಮೊಬೈಲ್ ಸಿಕ್ಕಿದೆ. ಆದರೆ ಮೊಬೈಲ್ ಹೊಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್ಮೆಂಟ್ ನಿವಾಸಿ ಅಲ್ಲ ಎನ್ನುವುದು ಮೋಲ್ನೋಟಕ್ಕೆ ಖಾತ್ರಿಯಾಗಿದೆ. ಹೊರಗಡೆಯಿಂದ ಫೋನ್‌ನಲ್ಲಿ ಮಾತನಾಡಿಕೊಂಡು ಬಂದಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾರೆ. ಯುವತಿ ಬಿದ್ದ ಅಪಾರ್ಟ್ಮೆಂಟ್ ಮುಂಭಾಗದ ಅಪಾರ್ಟ್ಮೆಂಟ್ ಒಳಗಡೆ ಹೋಗಲು ಯತ್ನಿಸಿದ್ದಳು. ಅದು ಸಾಧ್ಯವಾಗದ ಕಾರಣ ಮತ್ತೊಂದು ಅಪಾರ್ಟ್ಮೆಂಟ್‌ಗೆ ಬಂದಿರುವ ಶಂಕೆ ವ್ಯಕ್ತವಾಗಿದೆ

Leave a Reply

Your email address will not be published. Required fields are marked *