ವಾಟ್ಸಪಲ್ಲಿ ನೀವು ಮಾಡೋ ಚಾಟ್ ಹೈಡ್ ಮಾಡಬೇಕಾ ಇಲ್ಲಿದೆ ನೋಡಿ ಟ್ರಿಕ್.

ಇಂದು ವಿಶ್ವದ ಮೂಲೆಮೂಲೆಯಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅನ್ನು ಬಳಸುತ್ತಿದ್ದು ಕೋಟಿ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಅನುಕೂಲ ಆಗುವಂತಹ ಫೀಚರ್​ಗಳನ್ನು ಮೆಟಾ (Meta) ಒಡೆತನದ ಈ ಪ್ರಸಿದ್ಧ ಆ್ಯಪ್ ನೀಡುತ್ತಿರುವುದು. ಆಂಡ್ರಾಯ್ಡ್, ಐಒಎಸ್ ಹಾಗೂ ವೆಬ್ ಆವೃತ್ತಿಗೆ ನೂತನ ಆಯ್ಕೆಗಳನ್ನು ನೀಡುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಈಗಾಗಲೇ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ.  ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಅನೇಕ ಆಯ್ಕೆಗಳನ್ನು ನೀಡಿದೆ. ಆದರೆ, ಕೆಲವೊಂದು ತೀರಾ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ (Hide) ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಆದರೆ ಕೆಲ ಟ್ರಿಕ್​ಗಳ ಮೂಲಕ ನಿಮ್ಮ ಪರ್ಸನಲ್ ಚಾಟ್ ಮರೆ ಮಾಡಬಹುದು.

ವಾಟ್ಸ್​ಆ್ಯಪ್​ನಲ್ಲಿ ಆರ್ಕೈವ್ಡ್ ಎಂಬ ಆಯ್ಕೆ ಇದೆ. ಈ ರೀತಿ ಆರ್ಕೈವ್ ಮಾಡಿದ ಚಾಟ್​​ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್​ನಲ್ಲಿಯೇ ಇರುತ್ತವೆ. ಆದರೆ ಚಾಟ್ ಲಿಸ್ಟ್​​ನಲ್ಲಿ ಇವು ಕಾಣಿಸುವುದಿಲ್ಲ. ಈ ಆಯ್ಕೆಯ ನೆರವಿನಿಂದ ಬಳಕೆದಾರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಕೂಡ ಮರೆಮಾಡಬಹುದು.

ಮೊಬೈಲ್ ಸ್ವಿಚ್ ಆಫ್ ಆಗಿದ್ದರು ಇನ್ನು ಮುಂದೆ ವಾಟ್ಸ್ ಆ್ಯಪ್ ಉಪಯೋಗಿಸಬಹುದು ಹೇಗೆ ಗೊತ್ತಾ..?

ಆರ್ಕೈವ್ಡ್ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್​ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

Leave a Reply

Your email address will not be published. Required fields are marked *