ಅಂತರ್ಜಾತಿ ವಿವಾಹ ದಂಪತಿಗಳಿಗೆ ಪೋಷಕರಿಂದ ಪ್ರಾಣ ಬೆದರಿಕೆ – ಪೊಲೀಸ್ ಮೊರೆ

ಚಿತ್ರದುರ್ಗ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಕಳೆದ ವಾರವಷ್ಟೇ ವಿವಾಹವಾಗಿದ್ದು, ಈ ನವದಂಪತಿಗೆ ಇದೀಗ ಕಂಟಕ ಎದುರಾಗಿದೆ. ಜಾತಿ ಮರೆತು ಸಪ್ತಪದಿ ತುಳಿದ ಪ್ರೇಮಿಗಳಿಗೆ ಯುವತಿಯ ಪೋಷಕರು ವಿಲನ್‍ಗಳಾಗಿದ್ದಾರೆ.

ಕಳೆದವಾರವಷ್ಟೇ ಮದುವೆಯಾದ ಚಿತ್ರದುರ್ಗದ ಪ್ರಕಾಶ್ ಮತ್ತು ಸಂಧ್ಯಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೌದು, ಕಳೆದ 2 ವರ್ಷಗಳಿಂದ ಪ್ರೀತಿಸಿ ಮೊನ್ನೆಯಷ್ಟೇ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದ ಪ್ರಕಾಶ್ ಹಾಗೂ ಸಂಧ್ಯಾಗೆ ಇದೀಗ ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಕೊಲೆ ಬೆದರಿಕೆಯಾಕಿದ್ದಾರೆ.

ಚಿತ್ರದುರ್ಗ ತಾಲೂಕಿನ ಸಜ್ಜನಕೆರೆಗ್ರಾಮದ ಪ್ರಕಾಶ್, ಖಾಸಗಿ ಬಸ್ ಚಾಲಕರಾಗಿದ್ದು, ಬಸ್‍ನಲ್ಲಿ ಪಾವಗಡಕ್ಕೆ ತೆರೆಳುತ್ತಿದ್ದರು. ಆಗ ಬಸ್‍ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾಗೆ ಪ್ರಕಾಶ್ ಪರಿಚಯವಾಗಿ ಇಬ್ಬರು ಪರಸ್ಪರ ಮೆಚ್ಚಿಕೊಂಡು ಪ್ರೀತಿಸುತ್ತಿದ್ದರು. ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.

ಹೆಂಡತಿ ಹೋಲಿಕೆ ಇರುವ ‘ನೀಲಿ ಚಿತ್ರ’ ನೋಡಿದ ಗಂಡ: ಆಕೆ ತನ್ನ ಹೆಂಡತಿಯೇ ಎಂದು ಇರಿದು ಕೊಂದ!

ಹೀಗಾಗಿ ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು, ಪಾವಗಡದಿಂದ ಚಿತ್ರದುರ್ಗಕ್ಕೆ ಧಾವಿಸಿ, ಈ ನವದಂಪತಿಗಳಿಗೆ ಕೊಲೆಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಪ್ರಕಾಶ್ ಹಾಗೂ ಸಂಧ್ಯಾ ನಮಗೆ ಸೂಕ್ತ ರಕ್ಷಣೆ ಬೇಕು ಅಂತ ಚಿತ್ರದುರ್ಗ ಎಸ್‍ಪಿ ಮೊರೆ ಹೋಗಿದ್ದಾರೆ.

Praksh Raj: ನಾನು ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆ!

Leave a Reply

Your email address will not be published. Required fields are marked *