ಹೆಂಡತಿ ಹೋಲಿಕೆ ಇರುವ ‘ನೀಲಿ ಚಿತ್ರ’ ನೋಡಿದ ಗಂಡ: ಆಕೆ ತನ್ನ ಹೆಂಡತಿಯೇ ಎಂದು ಇರಿದು ಕೊಂದ!

ರಾಮನಗರ: ತನ್ನ ಪತ್ನಿ ಪರ ಪುರುಷನೊಂದಿಗೆ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆಂದು ಅನುಮಾನಗೊಂಡು ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆಟೋರಿಕ್ಷಾ ಚಾಲಕ 40 ವರ್ಷದ ಜಹೀರ್ ಪಾಷಾ, ತನ್ನ 35 ವರ್ಷದ ಪತ್ನಿಯನ್ನು ತನ್ನ ಮಕ್ಕಳ ಎದುರುಗಡೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ‌.

ಕಳೆದ ಹದಿನೈದು ವರ್ಷಗಳ ಹಿಂದೆ ಈತ ವಿವಾಹವಾಗಿದ್ದ. ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗೆ ಕಳೆದ ಎರಡು 2 ತಿಂಗಳ ಹಿಂದೆ ಜಹೀರ್ ಪಾಷಾ ನೀಲಿ ಚಿತ್ರವೊಂದನ್ನು ವೀಕ್ಷಿಸಿದ್ದು, ಅದರಲ್ಲಿ ತನ್ನ ಹೆಂಡತಿ ಹೋಲಿಕೆ ಇದ್ದವಳೆ ಕಂಡುಬಂದಿದ್ದಾಳಂತೆ. ಈಕೆ ನನ್ನ ಹೆಂಡತಿಯೇ ಎಂದು ತಿಳಿದುಕೊಂಡು ತನ್ನ ಅನುಮಾನದ ಕೆಟ್ಟ ಚಟವನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾನೆ. ಇದೇ ಗುಂಗಿನಲ್ಲಿದ್ದ ಈತ ಕುಟುಂಬದ ಸಮಾರಂಭವೊಂದರಲ್ಲೂ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ.

ಇದಲ್ಲದೆ, ಕಳೆದ 20 ದಿನಗಳ ಹಿಂದೆ ಹೆಂಡತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ. ಪರಿಣಾಮ ಆಕೆಗೆ ಚಿಕಿತ್ಸೆ ಕೂಡ ಕೊಡಿಸಲಾಗಿತ್ತು ಎಂದು ಆಕೆಯ ತಂದೆ ಗೌಸ್ ಪಾಷಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೆಲ್ಲದರ ನಡುವೆ ಮತ್ತೆ ಜಗಳ ಶುರುವಾಗಿದ್ದು, ಈ ವೇಳೆ ಜಹೀರ್ ಪಾಷಾ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದನ್ನು ನೋಡಿ ಭಯಭೀತನಾದ ಆತನ ಮಗ ಸಮೀಪದಲ್ಲೇ ಇದ್ದ ಅಜ್ಜನ ಮನೆಗೆ ಹೋಗಿ ಮಾಹಿತಿ ನೀಡಿದ್ದಾನೆಂದು ರಾಮನಗರ ಎಸ್​ಪಿ ಸಂತೋಷ್​​ ಬಾಬು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಆಟೋ ಚಾಲಕನಾಗಿದ್ದ ಜಹೀರ್ ಪಾಷ ತನ್ನ 33 ವರ್ಷದ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಪ್ರತಿನಿತ್ಯ ಜಗಳವಾಡುತ್ತಿದ್ದನಂತೆ. ಈ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕ್ರೂರವಾಗಿ ಕೊಂದಿದ್ದಾನೆ.

Leave a Reply

Your email address will not be published.