ಕಲ್ಲು ಬಿಸಾಡುವವರಿಗಾಗಿ ಸ್ವಲ್ಪ ವಿಚಾರ….

 

ನಮ್ಮ ಧರ್ಮ ಯಾವತ್ತಿಗೂ ಕಲ್ಲನ್ನು ಇನ್ನೊಬ್ಬರ ತಲೆಯ ಮೇಲೆ ಬಿಸಾಡು ಅಂತ ಹೇಳಿಕೊಟ್ಟಿಲ್ಲ..

ಇಂಜಿನಿಯರ್ ಗಳೇ ಇಲ್ಲದ ಕಾಲಘಟ್ಟದಲ್ಲಿ ಕಲ್ಲನ್ನು ಸಮುದ್ರಕ್ಕೆ ಹಾಕಿ ಭರತವರ್ಷದಿಂದ ಲಂಕೆಗೆ ಸೇತುವೆ ನಿರ್ಮಿಸಿ ಸೀತಾಮಾತೆಯನ್ನು ಜನ್ಮಭೂಮಿಗೆ ಮರಳಿ ಕರೆತಂದ ಸಂಸ್ಕಾರ ನಮ್ಮದು.

ಒಂದೇ ಕಲ್ಲನ್ನು ಕೆತ್ತಿ ಜಗತ್ತಿನ ಬೃಹತ್ ಏಕಶಿಲಾ ವಿಗ್ರಹವಾದ ಶ್ರವಣ ಬೆಳಗೊಳದ ಗೋಮಟೆಶ್ವರ ವಿಗ್ರಹ ಕೆತ್ತಿದ ಭವ್ಯ ಇತಿಹಾಸ ನಮ್ಮದು.

ಸಾವಿರ ಕಲ್ಲಿನ ಕಂಬಗಳನ್ನು ನಿಲ್ಲಿಸಿ ಮೂಡುಬಿದಿರೆಯಲ್ಲಿ ತ್ರಿಭುವನ ತಿಲಕ ಚೂಡಾಮಣಿ ಬಸದಿಯನ್ನು ಸಂಪೂರ್ಣ ಕಲ್ಲಿನಲ್ಲೇ ಕಟ್ಟಿದವರು ನಮ್ಮ ಹಿರಿಯರು.

ಒಂದೇ ಕಲ್ಲನ್ನು ಕೊರೆದು ಎಲ್ಲೋರದ ಏಕಶಿಲಾ ಕೈಲಾಸ ದೇವಾಲಯವನ್ನು ಕಟ್ಟಿದ ಸಂಸ್ಕಾರ ನಮ್ಮ ಧರ್ಮದ್ದು.

ಜಗತ್ತಿನ ಜನ ಕಲ್ಲನ್ನು ಕಲ್ಲಿಗೆ ಕುಟ್ಟಿ ಬೆಂಕಿ ತಯಾರಿಸುತ್ತಿದ್ದ ಸಮಯದಲ್ಲಿ ಅಮೃತ ಶಿಲೆ, ಕೃಷ್ಣ ಶಿಲೆಯಲ್ಲಿಯನ್ನು ಕೆತ್ತಿ ಲಕ್ಷಾಂತರ ದೇವಾಲಯವನ್ನು ನಿರ್ಮಾಣ ಮಾಡಿದವರು ನಾವು.

ಜಗತ್ತಿನ ಜನ 2D ಬಗ್ಗೆ ಯೋಚನೆ ಮಾಡುತಿದ್ದ ಸಮಯದಲ್ಲಿ ಬೇಲೂರು ಹಳೇಬೀಡು ಪಟ್ಟದಕಲ್ಲು ಐಹೊಳೆಯಂತ ಸ್ಥಳದಲ್ಲಿ ಕಲ್ಲಿನಲ್ಲಿ 3D ವಿಗ್ರಹಳನ್ನು ಶಿಲಾಬಾಲಿಕೆಯರನ್ನು ಕೆತ್ತಿದ ಇತಿಹಾಸ ಈ ಭೂಮಿಯದ್ದು.

ವಿಶ್ವದ ಬಹುತೇಕ ಜನರು ಸೊಪ್ಪು ಕಟ್ಟಿಕೊಂಡು ಗುಹೆಯಲ್ಲಿ ವಾಸ ಮಾಡುತ್ತಿದ್ದ ಸಮಯದಲ್ಲಿ ಎಲ್ಲೋರಾ, ಬಾದಾಮಿಯಲ್ಲಿ ಕಲ್ಲಿನಲ್ಲಿ ಗುಹೆಯನ್ನು ಕೊರೆದು ನೂರಾರು ದೇವಾಲಯ ಬಸದಿಗಳನ್ನು ನಿರ್ಮಿಸಿದ ಇತಿಹಾಸ ಈ ಭಾರತದ್ದು.

ಚಕ್ರದ ಬಗ್ಗೆ ತಿಳಿಯದ ಜನರಿದ್ದ ಸಮಯದಲ್ಲಿ ಹಂಪಿಯಲ್ಲಿ ಕಲ್ಲಿನಲ್ಲಿ ಏಕಶಿಲಾ ಬೃಹದ್ ರಥವನ್ನು ಕೆತ್ತಿದವರು ಭಾರತೀಯರು.

ದೇವರ ಬಗ್ಗೆ ಕಲ್ಪನೆಯೇ ಇಲ್ಲದ ಜನರಿದ್ದ ಸಮಯದಲ್ಲಿ ಶಿವ, ವಿಷ್ಣು, ದೇವಿಯ ವಿವಿಧ ಅವತಾರದ ಕಲ್ಲಿನ ವಿಗ್ರಹಗಳನ್ನು ಕೆತ್ತಿ ದೇವರು ಅಂದ್ರೆ ಹೀಗಿರುತ್ತಾರೆ ಅಂತ ಜಗತ್ತಿನ ಜನಕ್ಕೆ ಕಲ್ಪನೆ ಕೊಟ್ಟವರು ನಾವು.

ವರ್ಷದಲ್ಲಿ ಒಂದು ದಿನ ದೇವಸ್ಥಾನದ ಭವ್ಯ ಗೋಪುರದ ಕಿಟಕಿಗಳ ಮೂಲಕ ಸೂರ್ಯ ರಶ್ಮಿ ಹಾದು ಹೋಗುವಂತೆ ಲೆಕ್ಕಾಚಾರ ಮಾಡಿ ಕಲ್ಲಿನಲ್ಲಿ ಕೇರಳದ ಅನಂತಪದ್ಮನಾಭ ದೇವಸ್ಥಾನದ ಗೋಪುರ ನಿರ್ಮಿಸಿದ ಇತಿಹಾಸ ಈ ಭೂಮಿಯದ್ದು.

ನೂರಾರು ಕಂಬಗಳಿರುವ ದೇವಸ್ಥಾನದಲ್ಲಿ ಒಂದು ಕಂಬದ ನೆರಳು ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಇಡೀ ದಿನ ಬಿಳುತ್ತೆ . ಆದ್ರೆ ಇವತ್ತಿಗೂ ಅದು ಯಾವ ಕಂಬದ ನೆರಳು ಎಂದು ಪತ್ತೆ ಹಚ್ಚಲು ಯಾವ ವಿಜ್ಞಾನಿಗಳಿಂದ ಕೂಡ ಆಗಿಲ್ಲ ಅನ್ನೋದೇ ಆಶ್ಚರ್ಯ. ಅಂತಹ ಅತ್ಯಂತ ವಿಶೇಷ ಚಾಯ ಸೋಮೇಶ್ವರ ದೇವಸ್ಥಾನವನ್ನು ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಕಟ್ಟಿದ ಇತಿಹಾಸ ನಮ್ಮದು..

ಭಾರ ಎತ್ತುವ ಯಾವುದೇ ಬೃಹತ್ ಸೌಲಭ್ಯಗಳು ಇಲ್ಲದ 10ನೇ ಶತಮಾನದ ಸಮಯದಲ್ಲಿ 216 ಎತ್ತರದ ಗೋಪುರದ ಮೇಲೆ 17 ಅಡಿ ಎತ್ತರದ ಸಾವಿರಾರು ಟನ್ ಇರುವ ಕಲ್ಲಿನ ಭಾರಿ ಮುಕುಟವನ್ನು ಮೇಲೆಏರಿಸಿ ವಿಶೇಷವಾಗಿ ತಂಜಾವೂರು ಬೃಹದೀಶ್ವರ ದೇವಾಲಯ ಕಟ್ಟಿದ ಇತಿಹಾಸ ನಮ್ಮದು.

ಜಗತ್ತಿನ ಜನ ವಾದ್ಯಗಳಲ್ಲಿ ಸಂಗೀತ ನುಡಿಸುತ್ತಿದ್ದ ಆ ಸಮಯದಲ್ಲಿ ಕಲ್ಲನ್ನು ಬಡಿದರೆ ಸಪ್ತಸ್ವರಗಳು ಮಾರ್ದ್ವಿನಿಸುವಂತೆ ಕಂಬಗಳನ್ನು ಕೆತ್ತಿ ಹಂಪಿಯಲ್ಲಿ ದೇವಾಲಯ ನಿರ್ಮಿಸಿದ ಇತಿಹಾಸ ನಮ್ಮದು…

ಬೃಹತ್ ಬಂಡೆಗಳಿಂದ ರಾಯ ಘಡ, ಪುರದಂರ ಘಡ, ಸಿಂಹಘಡ, ಪ್ರತಾಪಘಡ, ತೋರಣದುರ್ಗ, ಚಿತ್ರದುರ್ಗ ಮುಂತಾದ ಕೋಟೆ ನಿರ್ಮಿಸಿದ ಇತಿಹಾಸ ನಮ್ಮದು.

ಧರ್ಮ ಉಳಿಸಲು ಕಲ್ಲನ್ನು ಇನ್ನೊಬ್ಬರ ತಲೆಗೆ ಬಿಸಾಡು ಅಂತ ನಮ್ಮ ಧರ್ಮ, ಹಿರಿಯರು, ಗುರುಗಳು ಯಾವತ್ತಿಗೂ ಕಳಿಸಿಕೊಟ್ಟಿಲ್ಲ. ಆವರೆಲ್ಲ ಸಾಧ್ಯ ಆದರೆ ನಿರ್ಮಿಸು ನಿರ್ನಾಮ ಅಂತೂ ಖಂಡಿತ ಮಾಡಬೇಡ ಅಂತ ಚೆನ್ನಾಗಿ ಹೇಳಿಕೊಟ್ಟಿದ್ದಾರೆ…..

 

Leave a Reply

Your email address will not be published. Required fields are marked *