ಒಂದಲ್ಲ.. ಎರಡಲ್ಲ.. ಬರೋಬ್ಬರಿ 29 ದಾಖಲೆಗಳನ್ನು ಸೃಷ್ಟಿಸಿದ ‘KGF 2’! ಇಲ್ಲಿದೆ ದಾಖಲೆಗಳ ಪಟ್ಟಿ

‘ರಾಕಿ ಭಾಯ್’ ಯಶ್, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿದೆ. ಸಿನಿಮಾ ರಿಲೀಸ್ ಆಗಿ 4 ದಿನ ಕಳೆದರೂ ಇಂದಿಗೂ ಸಿನಿಮಾ ಹೌಸ್‌ ಫುಲ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲೂ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಲೇ ಇವೆ. ಈವರೆಗೂ ಯಾವ ಸಿನಿಮಾವೂ ಮಾಡಿರದಂತಹ ಹಲವು ದಾಖಲೆಗಳು ‘ಕೆಜಿಎಫ್ 2’ ಪಾಲಾಗಿವೆ. ಅಂಥ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಪ್ರತಿ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತ ಸಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವು ಈವರೆಗೂ ಮಾಡಿರುವ ದಾಖಲೆಗಳು ಒಂದೆರಡಲ್ಲ. ಬಾಲಿವುಡ್‌ನ ಘಟಾನುಘಟಿ ತಾರೆಯರು ಸೃಷ್ಟಿಸಿದ್ದ ದಾಖಲೆಗಳನ್ನು ಹೇಳಹೆಸರಿಲ್ಲದಂತೆ ಹೊಡೆದು ಹಾಕಿದೆ ಕನ್ನಡದ ಈ ಸಿನಿಮಾ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಸ್ಮ್‌ಗೆ ಭರ್ಜರಿ ಕಮಾಯಿ ಆಗುತ್ತಿದೆ.

ಈ ಸಿನಿಮಾವು ತೆರೆಕಂಡ 4 ದಿನಗಳಿಗೆ 546 ಕೋಟಿ ರೂ.ಗಳನ್ನು ಕಲೆ ಹಾಕಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್‌ ಏರಿಕೆ ಕಾಣುತ್ತಿದೆ. ತಮಿಳುನಾಡಿನಲ್ಲಿ ಶೋಗಳು ಹೆಚ್ಚಾಗುತ್ತಿವೆ, ಕಲೆಕ್ಷನ್‌ ಕೂಡ ಜಾಸ್ತಿ ಆಗುತ್ತಿದೆ. ಬಾಲಿವುಡ್‌ನ ಯಾವ ಬಿಗ್ ಸ್ಟಾರ್‌ಗಳು ಮಾಡಿರದಂತಹ ಸಾಧನೆಯನ್ನು ‘ಕೆಜಿಎಫ್ 2’ ಸಿನಿಮಾ ಮಾಡಿದೆ. ಬರೀ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದು ಒಂದಲ್ಲ, ಎರಡಲ್ಲ, ಬರೋಬ್ಬರಿ 29! ಆ 29 ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ..

1. ಹಿಂದಿ ಏರಿಯಾಗಳಲ್ಲಿ ದಾಖಲೆಯ ಓಪನಿಂಗ್

2. ಹಿಂದಿ ಏರಿಯಾಗಳಲ್ಲಿ ವಾರಾಂತ್ಯಕ್ಕೆ ದಾಖಲೆಯ ಗಳಿಕೆ

3. ಬಾಲಿವುಡ್‌ನಲ್ಲಿ ಒಂದೇ ದಿನ ಅತಿಹೆಚ್ಚು ಗಳಿಸಿದ ಸಿನಿಮಾ

4. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 2ನೇ ದಿನ ಅತಿ ಹೆಚ್ಚು ಗಳಿಸಿದ ಸಿನಿಮಾ

5. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭಾನುವಾರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ

6. ಹಿಂದಿ ಬಾಕ್ಸ್ ಆಫೀಸ್ನಲ್ಲಿ ಮೊದಲ ನಾಲ್ಕು ದಿನವೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ

7. ಕರ್ನಾಟಕದಲ್ಲಿ ದಾಖಲೆಯ ಆರಂಭ

8. ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ದಾಖಲೆಯ ಗಳಿಕೆ

9. ಕರ್ನಾಟಕದಲ್ಲಿ 2ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

10. ಕರ್ನಾಟಕದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

11. ಕರ್ನಾಟಕದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

12. ಕರ್ನಾಟಕದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ

13. ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ

14. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾ

15. ತೆಲುಗು ಚಿತ್ರರಂಗದಲ್ಲಿ ಅದ್ದೂರಿ ಓಪನಿಂಗ್ ಪಡೆದ ತೆಲುಗೇತರ ಸಿನಿಮಾ

16. ವಾರಾಂತ್ಯದಲ್ಲಿ ಟಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ

17. ತೆಲುಗು ಚಿತ್ರರಂಗದಲ್ಲಿ 2ನೇ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗೇತರ ಸಿನಿಮಾ

18. ತೆಲುಗು ಚಿತ್ರರಂಗದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ತೆಲುಗೇತರ ಸಿನಿಮಾ

19. ತೆಲುಗು ಚಿತ್ರರಂಗದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ತೆಲುಗೇತರ ಸಿನಿಮಾ

20. ಟಾಲಿವುಡ್ನಲ್ಲಿ ಒಂದೇ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗೇತರ ಸಿನಿಮಾ

21. ತೆಲುಗು ಚಿತ್ರರಂಗದಲ್ಲಿ ಭಾನುವಾರದ ಕಲೆಕ್ಷನ್ನಲ್ಲಿ ತೆಲುಗೇತರ ಸಿನಿಮಾಗಳ ಪೈಕಿ ‘ಕೆಜಿಎಫ್ 2’ ಚಿತ್ರಕ್ಕೆ ಪ್ರಥಮ ಸ್ಥಾನ

22. ಕೇರಳದಲ್ಲೂ ದಾಖಲೆಯ ಓಪನಿಂಗ್ ಪಡೆದುಕೊಂಡ ಸಿನಿಮಾ ಇದು

23. ಕೇರಳದಲ್ಲಿ ವಾರಾಂತ್ಯದಲ್ಲಿ ದಾಖಲೆಯ ಗಳಿಕೆ

24. ಕೇರಳದಲ್ಲಿ 2ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

25. ಕೇರಳದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

26. ಕೇರಳದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

27. ಕೇರಳದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

28. ಕೇರಳದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್ಮಾಡಿದ ಚಿತ್ರ

29. ಭಾರತದ ಐಮ್ಯಾಕ್ಸ್ ಸ್ಟೀನ್‌ಗಳಲ್ಲಿ ದಾಖಲೆಯ ಗಳಿಕೆ ಮಾಡಿದ ಮೊದಲ ಸಿನಿಮಾ

Leave a Reply

Your email address will not be published. Required fields are marked *