ಹಿಂದೂಗಳಿಗೆ ನ್ಯಾಯ ಕೊಡಿಸುವ ಭರವಸೆಯೊಂದಿಗೆ ಉದಯ ವಾಗಲಿದೆ ಹೊಸ ಪಕ್ಷ..!

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಯ ನಂತರ ಹಿಂದೂ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಬಂಡೆದಿದ್ದು, ಬಿಜೆಪಿಗೆ ಟಕ್ಕರ್​ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಅಸ್ತಿತ್ವಕ್ಕೆ ತರಲು ಮುಂದಾಗಿದ್ದಾರೆ.

ಹಿಂದೂ ಸಂಘಟನೆಗಳಿಂದ ಹೊಸ ಪಕ್ಷ ಉದಯ ಬಿಜೆಪಿ ಗೇ ಡವ ಡವ

 

ವಿನಾಯಕ್ ಮಾಳದಕರ್ ಅಧ್ಯಕ್ಷತೆಯಲ್ಲಿ ನಾಳೆ ಹಿಂದೂಸ್ತಾನ್ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬರಲಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ಶರಣ ಸೇವಾ ಸಮಾಜದಲ್ಲಿ ಮಠಾಧೀಶರೇ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ.

ಇನ್ನು ನಾಳೆ ಹೊಸ ಪಕ್ಷದ ಪ್ರಣಾಳಿಕೆಯೂ ಮಾಡುವ ಸಾಧ್ಯತೆಯಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ, 100ಯೂನಿಟ್​ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ, ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್,ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ, ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ಸಹಾಯಧನ ಸೇರಿದಂತೆ ಇತರ ಸೌಲಭ್ಯ ಜನರಿಗೆ ಒದಗಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *