ಹಿಂದೂ ಸಂಘಟನೆಗಳಿಂದ ಹೊಸ ಪಕ್ಷ ಉದಯ ಬಿಜೆಪಿ ಗೇ ಡವ ಡವ

ಬೆಂಗಳೂರು – ಹಿಂದೂ ಯುವಕರು ಸಂಘಟಿತರಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂದೂಸ್ತಾನ ಜನತಾ ಪಕ್ಷ (ಹೆಚ್‌ಜೆಪಿ) ಕಟ್ಟಲು ಹೊರಟಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಯುವಕರನ್ನು ಕಣಕ್ಕಿಳಿಸಲು ಈ ಪಕ್ಷ ಮುಂದಾಗಿದೆ.

ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಯುವಕನ ಹತ್ಯೆಯ ನಂತರ ಈ ಸಂಘಟಕರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹಿಂದೂಸ್ತಾನ್ ಜನತಾ ಪಕ್ಷವನ್ನು 2004 ರಲ್ಲೇ ಕೇಂದ್ರ ಚುನಾವಣಾ ಅಧಿಕಾರಿಗಳ ಮುಂದೆ ನೋಂದಾಯಿಸಿಕೊಳ್ಳಲಾಗಿದೆ. ಬಿಜೆಪಿಯ ಅಂಗ ಸಂಘಟನೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದವರು, ಈ ಸಂಘಟನೆಯು ಸಂಘಟನೆ ಯುವಕರು, ತಮ್ಮ ಅಸ್ತಿತ್ವ ಮತ್ತು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೊಸ ಪಕ್ಷವನ್ನು ಕಟ್ಟಲು ಮುಂದಾಗಿದ್ದಾರೆ.

ನಂತರ ಬಿಜೆಪಿಯ ವಿರುದ್ಧವೇ ಸಿಡಿದೆದ್ದಿದ್ದಾರೆ. ತಮ್ಮ ಸ್ನೇಹಿತ ಹಾಗೂ ಸಹೋದ್ಯೋಗಿ ಹತ್ಯೆಯಾದ ನಂತರ ಮಂಗಳೂರು ಮತ್ತಿತರೆಡೆ ಯುವಕರು ತಮ್ಮ ಸರ್ಕಾರದ ವಿರುದ್ಧವೇ ಅಪಸ್ವರ  ಎತ್ತಿದ್ದಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಆ ಪಕ್ಷದ ಮುಖಂಡರ ವಿರುದ್ಧ ತಿರುಗಿಬಿದ್ದಿದ್ದರು.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮೊದಲ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದು, ಅಂದು ಪದಾಧಿಕಾರಿಗಳ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಹಿಂದೂ ಸಂಘಟನೆಯ ಯುವಕರು ಹೊಸ ಪಕ್ಷ ಕಟ್ಟಲು ಹೊರಟಿರುವುದು ಬಿಜೆಪಿಯ ವರಿಷ್ಠರಿಗೆ ಇರಿಸುಮುರಿಸು ಉಂಟು ಮಾಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ.

Leave a Reply

Your email address will not be published.