ಕನ್ನಡ ಹಾಗೂ ದಕ್ಷಿಣ ಚಿತ್ರ ರಂಗದ ಬಹುಬೇಡಿಕೆಯ ಖ್ಯಾತ ನಟ ಪ್ರಕಾಶ್ ರೈ ರವರು ದಿವಂಗತ ಪುನೀತ್ ರಾಜಕುಮಾರ್ ರವರ ಹಲವಾರು ಚಿತ್ರದಲ್ಲೂ ನಟಿಸಿರುವ ಅವರು. ನಟ ಪುನೀತ್ ರಾಜಕುಮಾರ್ ರವರ ನೆನಪಿಗಾಗಿ ಅವರ ಮೇಲಿನ ಪ್ರೀತಿಯಿಂದ “ಅಪ್ಪು ಎಕ್ಸ್ ಪ್ರೆಸ್” ಎಂಬ ಹೆಸರಿನಿಂದ ಆಂಬುಲೆನ್ಸ್ ಅನ್ನು ಮೈಸೂರಿನ ಆಸ್ಪತ್ರೆಗೆ ತಮ್ಮ ಪ್ರಕಾಶ್ ರಾಜ್ ಫೌಡೇಶನ್ ವತಿಇಂದ ನೀಡಿದ್ದಾರೆ.


ಈ ವೇಳೆ ಮಾತಾಡಿದ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ ಇವರ ಈ ನಡೆಗೇ ಅಪ್ಪು ಅಭಿಮಾನಿಗಳು ಹಾಗೂ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಿರ್ದೇಶಕ ಸಂತೋಷ್ ಆನಂದರಾಮ ಕೂಡ ಭಾಗವಹಿಸಿದ್ದರು
