ಸಿದ್ದರಾಮಯ್ಯ @ 75 | ದಾವಣಗೆರೆಯಲ್ಲಿ ಬೆಳಿಗ್ಗೆಯಿಂದ ಆರಂಭವಾದ ಜಿಟಿ ಜಿಟಿ ಮಳೆ

ದಾವಣಗೆರೆ :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ದಾವಣಗೆರೆಯತ್ತ ಜನಸಾಗರವೇ ಹರಿದು ಬರುತ್ತಿದೆ.

ಇಂದು ನಡೆಯುತ್ತಿರುವ ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮಾಲಿಕತ್ವದ ದಾವಣಗೆರೆ ಹೊರವಲಯದಲ್ಲಿರುವ ಎಸ್ ಎಸ್ ಪ್ಯಾಲೇಸ್ ಗ್ರೌಂಡ್ ನ 50 ಎಕರೆ ವಿಸ್ತೀರ್ಣ ಜಾಗದಲ್ಲಿ ಐದು ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ಬುಧವಾರ ಬೆಳಿಗ್ಗೆಯಿಂದಲೇ ದಾವಣಗೆರೆಯಲ್ಲಿ ತುಂತುರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣವಿದೆ. ಮಳೆಯ ನಡುವೆಯೂ ಅಭಿಮಾನಿಗಳು ಉತ್ಸಾಹ ಕುಂದಿಲ್ಲ.

ಸುಮಾರು 6-8 ಲಕ್ಷ ಜನ ಸೇರುವ ಸಾಧ್ಯತೆ ಇರುವುದರಿಂದ ಐದು ಬೃಹತ್ ವೇದಿಕೆಗಳಲ್ಲಿ 5 ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

 

Leave a Reply

Your email address will not be published.