ಸಂತೇಬೆನ್ನೂರು Breaking | ಅಕ್ರಮ ಜಾನುವಾರು ಸಾಕಾಣಿಕೆ 6 ಮಂದಿ ವಶ

ಸಂತೆಬೆನ್ನೂರು :  ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿ 19 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ .

 

 

ಚಿತ್ರದುರ್ಗದ ದನದ ಸಂತೆಯಿಂದ ರೈತರ ಬಳಿ ಕಡಿಮೆ ಬೆಲೆಗೆ ಖರೀದಿಸಿ ಖಾಸಾಯಿಖಾನೆಗೆ ತರುತಿದ್ದ ವೇಳೆ ಸಂತೇಬೆನ್ನೂರು ಹೊರವಲಯದ ಚೌಡೇಶ್ವರಿ ದೇವಸ್ಥಾನದ ಬಳಿ  5 ವಾಹನಗಳಲ್ಲಿ ಅಕ್ರಮವಾಗಿ  ತರುತಿದ್ದ  19  ಜಾನುವಾರುಗಳನ್ನು ರಕ್ಷಣೆ ಮಾಡಲಾಗಿ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ . ಬಂಧಿತರಿಂದ  15 ಎಮ್ಮೆ , 3 ಹಸುಕರುಗಳು ಹಾಗೂ 1 ಹಸುವನ್ನ ರಕ್ಷಣೆ ಮಾಡಲಾಗಿದೆ 14,23000 ರೂಪಾಯಿಗಳ ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇದರ ಬಗ್ಗೆ ಸಂತೇಬೆನ್ನುರು ಪಿ .ಎಸ್.ಐ . ಶಿವರುದ್ರಪ್ಪ ಮೇಟಿ ಹಾಗೂ ಅವರ ಸಿಬ್ಬಂದಿಗಳನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸಿ. ಬಿ. ರಿಷ್ಯಂತ್ ಶ್ಲಾಗಿಸಿದ್ದಾರೆ.

 

Leave a Reply

Your email address will not be published. Required fields are marked *