Jio ಕಂಪನಿಯ ಸೂಪರ್ ಹಿಟ್ ಕೊಡುಗೆ ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್, ಹೇಗೆ?

Jio Phone 4G Free Offer: ಇಂದು ನಾವು ನಿಮಗೆ ಜಿಯೋ ಕಂಪನಿಯ ಒಂದು ಅದ್ಭುತ ಪ್ರೀಪೇಡ್ ಯೋಜನೆ ಮತ್ತು ಅದರ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಯೋಜನೆಯಲ್ಲಿ ನಿಮಗೆ ಉಚಿತ ಡೇಟಾ ಹಾಗೂ ಕರೆ ಸೌಲಭ್ಯಗಳು ಸಿಗುತ್ತಿವೆ. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ನಿಮಗೆ ಉಚಿತ 4ಜಿ ಸ್ಮಾರ್ಟ್ ಫೋನ್ ಕೂಡ ನೀಡಲಾಗುತ್ತಿದೆ. ಸಂಪೂರ್ಣ ಎರಡು ವರ್ಷಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಕುರಿತು ವಿಸ್ತೃತ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ,

ಜಿಯೋ ಕಂಪನಿಯ ಸೂಪರ್ ಹಿಟ್ ಯೋಜನೆ

ಈ ಯೋಜನೆಯಲ್ಲಿ ಸಿಗುತ್ತಿದೆ ಉಚಿತ ಸ್ಮಾರ್ಟ್ ಫೋನ್

ಈ ಯೋಜನೆ ಏನೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ತಿಳಿಯೋಣ ಬನ್ನಿ

Free Jio Phone 4G with Rs 1499 Plan:

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಯಾವಾಗಲು ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಈ ಪ್ರಯತ್ನವನ್ನು ಕಂಪನಿ ಒಂದು ಹೆಜ್ಜೆ ಮುಂದೆಕ್ಕೆ ತೆಗೆದುಕೊಂಡು ಹೋಗಿದೆ, ಹೌದು, ಇದಕ್ಕಾಗಿ ಜಿಯೋ ಒಂದು ಹೊಸ ಯೋಜನೆಯನ್ನು ರೂಪಿಸಿದೆ, ಈ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳು ಬಳಕೆದಾರರು ಮತ್ತು ಇತರ ಟೆಲಿಕಾಂ ಕಂಪನಿಗಳನ್ನು ನಿಬ್ಬೇರಗಾಗಿಸಿವೆ. ಜಿಯೋ ಈ ಯೋಜನೆಯಲ್ಲಿ ಕಡಿಮೆ ವೆಚ್ಚದಲ್ಲಿ ಉಚಿತ ಡೇಟಾ ಮತ್ತು ಕರೆ ಸೌಲಭ್ಯದ ಜೊತೆಗೆ 4G ಸ್ಮಾರ್ಟ್‌ಫೋನ್ ಅನ್ನು ಸಹ ನೀಡುತ್ತಿದೆ. ಜಿಯೋದ ಈ ಯೋಜನೆ ಬಗ್ಗೆ ತಿಳಿಯೋಣ ಬನ್ನಿ.

ಜಿಯೋದ ಈ ಯೋಜನೆಗೆ ಯಾವುದೇ ಸರಿಸಾಟಿ ಇಲ್ಲ

ಪ್ರಸ್ತುತ ಸಮಯದಲ್ಲಿ, ಏರ್‌ಟೆಲ್, ವೊಡಾಫೋನ್ ಐಡಿಯಾ ಅಥವಾ ಬಿಎಸ್‌ಎನ್‌ಎಲ್, ಯಾವ ಕಂಪನಿಗಳೂ ಕೂಡ ತನ್ನ ಬಳಕೆದಾರರಿಗೆ ಇಂತಹ ಯೋಜನೆಯನ್ನು ನೀಡುತ್ತಿಲ್ಲ, ಏಕೆಂದರೆ ಈ ಯೋಜನೆಯ ಮಾನ್ಯತೆ ಎರಡು ವರ್ಷಗಳಾಗಿದೆ. ಜಿಯೋದ ಈ ಯೋಜನೆಗೆ ಯಾವುದೇ ಸರಿಸಾಟಿ ಇಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಇಷ್ಟೊಂದು ವ್ಯಾಲಿಡಿಟಿಯೊಂದಿಗೆ 4G ಸೇವೆಗಳ ಜೊತೆಗೆ ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ಈ ಯೋಜನೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಜಿಯೋದ ಅತ್ಯದ್ಭುತ ಯೋಜನೆ ಇದಾಗಿದೆ

ನಾವು ಹೇಳಲು ಹೊರಟಿರುವ ಜಿಯೋ ಯೋಜನೆಯು ರೂ 1,499ರ ಯೋಜನೆಯಾಗಿದೆ ಮತ್ತು ಎರಡು ವರ್ಷಗಳ ಮಾನ್ಯತೆಯೊಂದಿಗೆ ಬರುತ್ತದೆ. 1,499 ರೂಗಳಿಗೆ ಬದಲಾಗಿ, ಜಿಯೋ ಈ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 24GB ಹೈ-ಸ್ಪೀಡ್ ಇಂಟರ್ನೆಟ್ ಅನ್ನು ನೀಡುತ್ತಿದೆ. ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯೊಂದಿಗೆ ಈ ಯೋಜನೆಯಲ್ಲಿ 4G ಸ್ಮಾರ್ಟ್‌ಫೋನ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ಯಾವ ಸ್ಮಾರ್ಟ್ ಫೋನ್ ಅಂತೀರಾ?

ಉಚಿತ 4G ಸ್ಮಾರ್ಟ್ಫೋನ್ ಲಭ್ಯವಿದೆ

ಈ ಯೋಜನೆಯಲ್ಲಿ ನಾವು ಹೇಳುತ್ತಿರುವ 4G ಸ್ಮಾರ್ಟ್‌ಫೋನ್ Jio Phone 4G ಆಗಿದೆ. 2,999 ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ 2.4-ಇಂಚಿನ QVGA ಡಿಸ್ಪ್ಲೇ, 1,500mAh ಬ್ಯಾಟರಿ ಮತ್ತು 9 ಗಂಟೆಗಳ ಟಾಕ್ ಟೈಮ್, SD ಕಾರ್ಡ್ ಮೂಲಕ 128GB ವರೆಗೆ ಸಂಗ್ರಹಣಾ ಸಾಮರ್ಥ್ಯ ವಿಸ್ತರಣೆ ಮತ್ತು 0.3MP ಮುಂಭಾಗ ಮತ್ತು 0.3MP ಹಿಂಭಾಗದ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಧ್ವನಿ ಸಹಾಯಕ ಬೆಂಬಲವನ್ನು ಸಹ ಪಡೆಯುತ್ತೀರಿ ಮತ್ತು ಇದು ಇಂಗ್ಲಿಷ್ ಸೇರಿದಂತೆ 18 ಭಾಷ್ಟೆಗಳ ಬೆಂಬಲದೊಂದಿಗೆ ಬರುತ್ತದೆ.

Leave a Reply

Your email address will not be published. Required fields are marked *