ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ ಸಹಾಯಧನ ಹೆಚ್ಚಳ : ಸಿಎಂ

ಬೆಂಗಳೂರು : ವಸತಿ ಯೋಜನೆಯಡಿ ಪರಿಶಿಷ್ಠ ಜಾತಿಯವರಿಗೆ ಸಹಾಯಧನವನ್ನು 1.75 ಲಕ್ಷ ರೂ.ನಿಂದ 2,00,000 ರೂ.ವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಬಾಬು ಜಗಜೀವನ್ ರಾಂ 115ನೇ ಜನ್ಮದಿನ ಆಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದವರ ಭೂ ಒಡೆತನ ಹೆಚ್ಚಿಸಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ.

ಭೂ ಒಡೆತನ ಯೋಜನೆಯಡಿ ಭೂ ಖರೀದಿ‌ ಮೊತ್ತವನ್ನು‌ 15 ಲಕ್ಷ ರೂ.ನಿಂದ 20,0000 ರೂ.ಗೆ ಹೆಚ್ಚಳ‌ ಮಾಡಲು ತೀರ್ಮಾನ ಮಾಡಲಿದ್ದೇವೆ. ಕುಟೀರ‌ ಜ್ಯೋತಿ ಯೋಜನೆಯಡಿ 40 ಯುನಿಟ್‌ನಿಂದ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ಮುಂದಿನ ವಾರ ನಿರ್ಧಾರ ಕೈಗೊಳ್ಳುತ್ತೇವೆ. ಜೊತೆಗೆ ತಾಲೂಕಿಗೊಂದು ಬಾಬು ಜಗಜೀವನ್ ರಾಂ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಿದ್ದೇವೆ ಎಂದರು.

ಹಾಗಾಗಿ, ಆಹಾರ ವಿಚಾರದಲ್ಲಿ ಸ್ವಾವಲಂಬನೆ ಭಾವ ಮೂಡಿಸಿದ್ದು ಬಾಬು ಜಗಜೀವನ್ ರಾಂ. ಪ್ರತಿ ವ್ಯಕ್ತಿ ಸ್ವಾವಲಂಬನೆ ಆದರೆ ಮಾತ್ರ ಸಮಾನತೆ ಬರುತ್ತದೆ. ಎಲ್ಲಿವರೆಗೆ ಸಮುದಾಯ ಮುಖ್ಯವಾಹಿನಿಗೆ ಬರುದಿಲ್ಲವೋ ಅಲ್ಲಿಯವರೆಗೆ ಭಾರತದ ಸಮಗ್ರತೆ, ಅಭಿವೃದ್ಧಿ ಅಪೂರ್ಣವಾಗಿರುತ್ತದೆ ಎಂದರು. ಇದೇ ವೇಳೆ ಐದು ವರ್ಷಗಳಿಂದ ಬಾಕಿ ಇದ್ದ ಬಾಬು ಜಗಜೀವನ ರಾಂ ಪ್ರಶಸ್ತಿಯನ್ನು ಐದು ಜನ‌ಸಾಧಕರಿಗೆ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *