ನವರಾತ್ರಿಯ ಮೊದಲನೇ ದಿನದಿಂದಲೇ ರಾಮನವಮಿ ಆಚರಣೆ ಆರಂಭ

ಶ್ರೀ ರಾಮ(Shri Ram) ಎಂದರೆ ಆದರ್ಶ ಪುರುಷ. ವಿಷ್ಣು(Lord Vishnu)ವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದ ರಾಮನ ಹೆಸರಲ್ಲೇ ಅಗ್ನಿ ಬೀಜಾಕ್ಷರ ಮಂತ್ರವಿದೆ. ಪ್ರತಿ ಹೆಣ್ಣೂ ಬಯಸುವುದೇ ಶ್ರೀರಾಮನಂಥ ಪತಿ ಸಿಗಲಿ ಎಂದು. ಆತ ಏಕಪತ್ನೀ ವ್ರತಸ್ಥ. ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಜನಿಸಿದನು. ಹಾಗಾಗಿ ಪ್ರತಿ ವರ್ಷ ಆ ದಿನದಂದು ಶ್ರೀ ರಾಮನವಮಿ(Ramnavami) ಎಂದು ರಾಮನ ಜನ್ಮ ದಿನ ಆಚರಿಸಲಾಗುತ್ತದೆ. ಅಲ್ಲದೆ ಈ ದಿನವನ್ನು ಕೆಟ್ಟದ್ದರ ವಿರುದ್ಧ ಒಳಿತಿನ ಜಯವಾಗಿಯೂ ನೋಡಲಾಗುತ್ತದೆ. ಭಾರತದಾದ್ಯಂತ ಬಹಳಷ್ಟು ದೇವಾಲಯಗಳಲ್ಲಿ ರಾಮನವಮಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ರಾಮನವಮಿ ಆಚರಣೆ ಆರಂಭವಾಗುತ್ತದೆ.

ರಾಮನವಮಿಯು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಅತ್ಯಂತ ಭಕ್ತಿಯಿಂದ ಜನರು ಇದನ್ನು ಆಚರಿಸುತ್ತಾರೆ. ರಾಮನವಮಿ ಈ ಬಾರಿ ಯಾವತ್ತು? ಹೇಗೆ ಆಚರಿಸಲಾಗುತ್ತದೆ ಎಲ್ಲವನ್ನೂ ನೋಡೋಣ.

ಯಾವಾಗ?ಈ ಬಾರಿ ರಾಮನವಮಿಯು ಏಪ್ರಿಲ್ 10ರಂದು ಬರಲಿದೆ. ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನ ಜನಿಸಿದನು ಎನ್ನಲಾಗುತ್ತದೆ. ಹಾಗಾಗಿ, ಸಾಮಾನ್ಯವಾಗಿ ಮಧ್ಯಾಹ್ನದ ಸಮಯವನ್ನು ರಾಮನವಮಿಯಿಂದು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಬಾರಿ ಬೆಳಗ್ಗೆ 11.10ರಿಂದ ಮಧ್ಯಾಹ್ನ 1.37 ಗಂಟೆಯ ಅವಧಿ ರಾಮನವಮಿ ಆಚರಣೆಗೆ ಮುಹೂರ್ತವಾಗಿದೆ.

ರಾಮನವಮಿ ಆಚರಣೆ ಹೇಗೆ?ರಾಮನವಮಿ 9 ದಿನಗಳ ಮುನ್ನವೇ ಅಂದರೆ ಚೈತ್ರ ನವರಾತ್ರಿಯ ಮೊದಲನೇ ದಿನದಿಂದಲೇ ದೇವಾಲಯಗಳಲ್ಲಿ, ಮನೆಗಳಲ್ಲಿ ರಾಮಾಯಣದ ಕತೆಯನ್ನು ಹೇಳಲಾಗುತ್ತದೆ. ಈ ಸಂಬಂಧ ನಾಟಕ ನಿರೂಪಣೆಗಳು ನಡೆಯುತ್ತವೆ. ಇದರ ಪಠಣ, ಶ್ರವಣವೆರಡೂ ಅಪಾರ ಲಾಭಗಳನ್ನು ತಂದುಕೊಡಲಿದೆ.ಜನರು ಪ್ರತಿ ಸಂಜೆ ರಾಮರಕ್ಷಾ ಸ್ತ್ರೋತ್ರ ಪಠಣ ಮಾಡುತ್ತಾರೆ.ರಾಮನ ಕುರಿತ ಭಜನೆಗಳು ಎಲ್ಲೆಡೆ ಭಯಭಕ್ತಿಗಳಿಂದ ನಡೆಯುತ್ತವೆ. ರಾಮನ ವಿಗ್ರಹವನ್ನು ತೊಟ್ಟಿಲಿಗೆ ಹಾಕಿ ತೂಗಿ ಪೂಜಿಸಲಾಗುತ್ತದೆ. ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ರಾಮನ ವಿಗ್ರಹವಿಟ್ಟು ವಿಶೇಷವಾಗಿ ಪೂಜಿಸಲಾಗುತ್ತದೆ. ರಾಮನವಮಿಗೂ 8 ದಿನಗಳ ಮೊದಲಿಂದಲೇ ಭಕ್ತರು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳು ವರ್ಜಿಸಿದ ಆಹಾರವನ್ನು ಮಾತ್ರ ಸೇವಿಸುತ್ತಾರೆ.

ಪೂಜಾ ವಿಧಿ(Puja Vidhi)ರಾಮನವಮಿಯ ದಿನ ಬೇಗ ಎದ್ದು ಸ್ನಾನ ಮಾಡಿ, ಪೂಜೆಗೆ ಕೂರಬೇಕು. ತುಳಸಿ ಹಾಗೂ ಕಮಲದ ಹೂವು ರಾಮನ ಪೂಜೆಗೆ ಮುಖ್ಯವಾಗಿವೆ. ಶೋಡಶೋಪಚಾರದಿಂದ ಆರಂಭವಾಗಿ 16 ಹಂತಗಳಲ್ಲಿ ರಾಮ ಪೂಜೆ ನಡೆಸಬೇಕು. ಬಳಿಕ ಖೀರು, ಹಣ್ಣುಗಳ ನೈವೇದ್ಯ ಮಾಡಿ ಎಲ್ಲರಿಗೂ ಪಾನಕ, ಮಜ್ಜಿಗೆ ಹಂಚಬೇಕು. ಪೂಜೆಯ ಬಳಿಕ, ಮನೆಯ ಅತಿ ಕಿರಿಯ ಮಹಿಳೆ ಎಲ್ಲ ಸದಸ್ಯರ ಹಣೆಗೆ ತಿಲಕವಿರಿಸಬೇಕು.

 

 

Leave a Reply

Your email address will not be published. Required fields are marked *