ಸ್ವಪ್ನ ಎಸ್.ಎಂ. ಗೆ 5 ಚಿನ್ನದ ಪದಕ :ಇನ್ನೂ ಯಾರು ಎಷ್ಟು ಪದಕ ಪಡೆದು ಕೊಂಡಿದ್ದಾರೆ ಇಲ್ಲಿದೆ ನೋಡಿ

ದಾವಣಗೆರೆ : ದಾವಣಗೆರೆ ವಿವಿಯಲ್ಲಿ ಸ್ನಾತಕೋತ್ತರ ಆಡಳಿತ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದಲ್ಲಿ ವ್ಯಾಸಂಗ ಮಾಡಿದ ಸ್ವಪ್ನ ಎಸ್.ಎಂ. ಅವರು 05 ಚಿನ್ನದ ಪದಕಗಳನ್ನು ಬಾಚಿಕೊಂಡು ಚಿನ್ನದ ಹುಡುಗಿ ಎನಿಸಿಕೊಂಡರು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ಒಟ್ಟು 44 ಅಭ್ಯರ್ಥಿಗಳ ಪೈಕಿ ವಿದ್ಯಾರ್ಥಿನಿಯರೇ (32) ಅತಿ ಹೆಚ್ಚು ಚಿನ್ನದಪದಕ ಪಡೆದುಕೊಂಡಿದ್ದು ವಿಶೇಷವೆನಿಸಿದರೆ, 12 ವಿದ್ಯಾರ್ಥಿಗಳು ಕೂಡ ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡರು.

ಪಿಹೆಚ್‍ಡಿ ಹಾಗೂ ಎಂಫಿಲ್ ಪ್ರದಾನ : ಅರ್ಥಶಾಸ್ತ್ರ ವಿಭಾಗದಲ್ಲಿ ಗುರುಪ್ರಸಾದ್ ಎಂಎಸ್, ಮೈಕ್ರೋಬಯಾಲಜಿ ವಿಭಾಗದಲ್ಲಿ ನವೀನ ಕೆ.ಸಿ. ಹಾಗೂ ಈರಮ್ಮ ಎನ್., ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಜಾರುಬಂಡಿ ರಾಜಶೇಖರ್,

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರಾಜಪ್ಪ ಎಲ್ ಮತ್ತು ಪ್ರಸನ್ನ ಎಸ್.ಹೆಚ್. ಅವರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. ಗಣಿತಶಾಸ್ತ್ರ ವಿಭಾಗದಲ್ಲಿ ರೇಖಾ ಎಂ.ಬಿ., ಜೀವಶಾಸ್ತ್ರ ವಿಭಾಗದಲ್ಲಿ ವಿರುಪಾಕ್ಷ ಟಿ.ಆರ್., ರಸಾಯನಶಾಸ್ತ್ರ ವಿಭಾಗದಲ್ಲಿ ಮಧು ಹೆಚ್, ಸಾಮಾಜಿಕ ಸೇವೆ ವಿಭಗದಲ್ಲಿ ಪಾಪಯ್ಯ ಸಿ., ಹಾಗೂ ಶಿಕ್ಷಣ ವಿಭಾಗದಲ್ಲಿ ದೀಪಕ್ ಕೆ.ಎಸ್. ಅವರಿಗೆ ಎಂ.ಫಿಲ್ ಅನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು..

Leave a Reply

Your email address will not be published. Required fields are marked *