ಮಾರ್ವಾಡಿ ವರ್ತಕರ ಓಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ

ಸಂತೆಬೆನ್ನೂರು:

ಇತ್ತೀಚಿಗೆ ವ್ಯವಹಾರದ ಪ್ರತಿಯೊಂದು ಕ್ಷೇತ್ರದಲ್ಲೂ ಮಾರ್ವಾಡಿಗಳು ತಮನ್ನ ತೊಡಗಿಸಿಕೊಂಡಿದ್ದಾರೆ ಅದರ ಜೊತೆ ಮಾರ್ವಾಡಿಗಳ ಸ್ಪರ್ಧಾತ್ಮಕ ವ್ಯವಹಾರದಿಂದ ಕರ್ನಾಟಕದ ಮೂಲ ವರ್ತಕರಿಗೆ ತುಂಬಾ ತೊಂದರೆಯಾಗುತ್ತಿದೆ , ಇದರ ವಿರುದ್ಧ ಸಿಡಿದೆದ್ದ ಊರಿನ ಜನ ಹಾಗೂ ಮೂಲ ವರ್ತಕರು ಗ್ರಾಮಪಂಚಾಯ್ತಿ ಗೆ ಮಾರವಾಡಿಗಳ ಓಟಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ .

ಮಾರ್ವಾಡಿಗಳ ವ್ಯವಹಾರದಿಂದ ಏರಿದ ಸೈಟ್ ಹಾಗೂ ರೂಮ್ ಬಾಡಿಗೆ ದರ .

ಮಾರ್ವಾಡಿಗಳು   ಕೇವಲ ತಮ್ಮ ವ್ಯವಹಾರದಿಂದ ಊರಿನ ಸೈಟ್ ಹಾಗೂ ರೂಮ್ ಗಳ ಬಾಡಿಗೆ ಏರತೊಡಗಿದೆ , ಅವರು ಅತೀ ಹೆಚ್ಚು ಬೆಲೆಗೆ ಸೈಟ್ ಹಾಗೂ ಮಳಿಗೆಗಳ ಬಾಡಿಗೆ ಹೆಚ್ಚಿಸಿ ಮೂಲ ವರ್ತಕರಿಗೆ ನಷ್ಟ ಆಗುವಂತೆ ಮಾಡಿದ್ದಾರೆ. ಅದರ ಜೊತೆ ಜಮೀನಿನ ರೇಟ್ ಜಾಸ್ತಿ ಆಗುತ್ತಿದೆ ಎಂದು ಊರಿನ ಮೂಲ ವರ್ತಕರು ಆರೋಪಿಸಿದ್ದಾರೆ .

ಊರಿನ ಮೂಲ ವರ್ತಕರು ಗ್ರಾಮಪಂಚಾಯ್ತಿಗೆ ಬರೆದಿರುವ ಪತ್ರ     

 

ಊರಿನ ಯುವಕರಿಗೆ ಸಿಗುತ್ತಿಲ್ಲ ಕೆಲಸ , ರಾಜಸ್ಥನದಿಂದ ಬಂದವರಿಗೆ  ನೀಡುತ್ತಿದ್ದಾರೆ ಕೆಲಸ 

ತ್ರಿಮಿತ್ರ ನ್ಯೂಸ್ .ಕಾಮ್ ನೊಂದಿಗೆ ಮಾತನಾಡಿದ ವರ್ತಕ ಸಂದೀಪ್ ಕೊಬ್ಬರಿ “ಮಾರ್ವಾಡಿ ಗಳಿಂದ ನಮ್ಮ  ವ್ಯವಹಾರ ಎಲ್ಲಾ ಹಾಳಾಗಿ ಹೋಗಿದೆ , ದಿನೇ ದಿನೇ ನಮ್ಮ ( ಮೂಲ ವರ್ತಕರು)  ವ್ಯವಹಾರ ಕ್ಷೀಣಿಸುತ್ತಿದೆ , ದುಡಿಮೆ ಇಲ್ಲದೆ ಜೀವನ ಸಾಗಿಸೋದು ಕಷ್ಟ ಆಗುತಿದೆ , ಬಡ ವ್ಯಾಪರಿಗಳು ಈಗಾಗಲೇ ನೆಲಕಚ್ಚಿ  ಹೋಗಿದ್ದಾರೆ , ಅದರ ಜೊತೆ ನಮ್ಮ ಊರಿನ ಯುವಕರಿಗೆ ಕೆಲಸ ಸಿಗುತಿಲ್ಲ ಬದಲಾಗಿ ಅವರ ಜೊತೆ ಬರುವಾಗ ರಾಜಸ್ತಾನದಿಂದ ಹುಡುಗರನ್ನು ಕರೆದುಕೊಂಡು ಬಂದು ಕೆಲಸ ನೀಡುತ್ತಿದ್ದಾರೆ ,ನಮಾ ಊರಿನ ಯುವಕರು  ಕೆಲಸ ಅರಸಿ ಬೆಂಗಳೂರು ಹಾಗೂ ರಾಜ್ಯದ  ನಾನಾ ಕಡೆಗೆ ಕೆಲಸ ಅರಸಿ ಹೋಗುತ್ತಿದ್ದಾರೆ ಹಿಂಗೆ ಆದ್ರೆ ಮುಂದಿನ ದಿನಗಳಲ್ಲಿ ಊರಿನ ಮೂಲ ವರ್ತಕರು ಕೆಲಸ ಇಲ್ಲದೆ ಕೈ ಕಟ್ಟಿ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ಹೇಳಿದರು .

ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಚರ್ಚೆ 

ಊರಿನ ಜನರು ಊರಿನ ಅಭಿವೃದ್ದಿ ಬಗ್ಗೆ ಚರ್ಚಿಸಲು ಮಾಡಿರುವ ಗ್ರೂಪ್ ನಲ್ಲಿ ಮಾರ್ವಾಡಿ ವರ್ತಕರ ಬಗ್ಗೆ ಚರ್ಚೆ

ದಿನೇ ದಿನೇ ಹೆಚ್ಚಾಗುತ್ತಿದೆ ಮಾರ್ವಾಡಿಗಳ ಸಂಖ್ಯೆ .

ಸಂತೆಬೆನ್ನೂರು ಒಂದೇ ಗ್ರಾಮದಲ್ಲಿ ದಿನೇ ದಿನೇ ಮಾರ್ವಾಡಿಗಳ ಜನಸಂಖ್ಯೆ ಹೆಚ್ಚಾಗುತ್ತಿದೆ . ಡಿನಕೊಬ್ಬರು ಹೊಸ ಹೊಸ ಮರ್ವಾಡಿಗಳು ಊರಿಗೆ ಬಂದು ವ್ಯವಹಾರ ಪ್ರಾರಂಭ ಮಾಡುತಿದಾರೆ , ಇದರ ಬಗ್ಗೆಯೂ ಗ್ರಾಮ ಪಂಚಾಯ್ತಿಗೆ ಮಾಹಿತಿ ನೀಡಿರುವ ಮಾರ್ವಾಡಿ ವರ್ತಕರು ಹೊಸದಾಗಿ ಬಂದಿರೋ ಮಾರ್ವಾಡಿ ವರ್ತಕರ ಪರವಾನಗಿ ರದ್ದು ಮಾಡಬೇಕು ಅದರ ಜೊತೆ ಹೊಸ ಪರವಾನಗಿಯನ್ನು ಮಾರ್ವಾಡಿಗಳಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಿಸಿದ್ದಾರೆ.

 

Leave a Reply

Your email address will not be published. Required fields are marked *