Breaking News : ನಾಳೆ ಬೆಳಗ್ಗೆ ಹಿಜಾಬ್ ತೀರ್ಪು

ಬೆಂಗಳೂರು : ರಾಜ್ಯಾದ್ಯಂತ ಕಳೆದೆರಡು ತಿಂಗಳಿನಿಂದ ಸಂಘರ್ಷದ ವಾತಾವರಣ ಹುಟ್ಟುಹಾಕಿದ್ದ ವಿವಾದಿತ ಹಿಜಾಬ್‌ ಪ್ರಕರಣದ ತೀರ್ಪು ನಾಳೆ ಹೈಕೋರ್ಟ್‌ ನೀಡಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದಿನಗಳಿಂದ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ನಾಳೆ ಮಂಗಳವಾರ ಮುಂಜಾನೆ 10.30ಕ್ಕೆ ಈ ವಿವಾದದ ಕುರಿತು ಅಂತಿಮ ತೀರ್ಪು ಪ್ರಕಟವಾಗಲಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿ ಸದಸ್ಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.

Leave a Reply

Your email address will not be published. Required fields are marked *