ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಡಿಆರ್ಡಿಒದಲ್ಲಿ ಮತ್ತೊಂದು ಪ್ರಯೋಗ ಯಶಸ್ವಿಯಾಗಿದೆ. ಏರೋನಾಟಿಕಲ್ ಟೆಸ್ಟ್ ರೇಂಜ್ ಯಿಂದ ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್ ವಿಂಗ್ ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ನ ಹಾರಾಟದ ಪ್ರಯೋಗವನ್ನು DRDO ಯಶಸ್ವಿಯಾಗಿ ಪ್ರದರ್ಶಿಸಿದೆ.
ಬಾಲರಹಿತ ಸಂರಚನೆಯಲ್ಲಿರುವ ಡೆಮಾನ್ ಸ್ಟ್ರೇಟರ್ ಹಾರಾಟ ಯಶಸ್ವಿಯಾಗಿದ್ದು , ಈ ಮೂಲಕ ಫ್ಲೈಯಿಂಗ್ ವಿಂಗ್ ಸಂರಚನೆ ನಿಯಂತ್ರಣವನ್ನ ಕರಗತ ಮಾಡಿಕೊಂಡ ದೇಶಗಳ ಪಟ್ಟಿಗೆ ಭಾರತವು ಸೇರ್ಪಡೆಯಾಗಿದೆ. ಈ ಕುರಿತು ಟ್ವೀಟರ್ ಮೂಲಕ ಡಿಆರ್ ಡಿಓ ಮಾಹಿತಿ ಹಂಚಿಕೊಂಡಿದೆ.
#DRDOUpdates | DRDO successfully conducted flight trial of Autonomous Flying Wing Technology Demonstrator with Tailless configuration from Aeronautical Test Range, Chitradurga @DefenceMinIndia @SpokespersonMoD pic.twitter.com/42XQki1seV
— DRDO (@DRDO_India) December 15, 2023