ಪ್ರೀತಿ ಅತ್ಯಂತ ಸುಂದರವಾದ ಭಾವನೆ. ಪ್ರೀತಿ ಇದ್ದರೇ, ಜಗತ್ತನ್ನೇ ಮರೆಯುತ್ತೇವೆ. ಅದೇನೋ ಅಂತಾರಲ್ಲ ‘love is blind’ ಅಂತ ಹಾಗೆ, ಲವ್ ಒಂಥರಾ ಮ್ಯಾಜಿಕ್. ಗೆಳತಿ/ಗೆಳೆಯ ಜೊತೆ ಇದ್ದಾಗ ಸಂತೋಷ, ಕೈಕೊಟ್ರೆ ಸ್ವರ್ಗವೂ ನರಕ. ಲವ್ ಫೈಲ್ಯೂರ್ ಆದ್ರೆ ಜೀವನವೇ ಸಾಕು ಅನ್ಸತ್ತೆ. ನಿಮಗೂ ಪ್ರೇಮ ವೈಫಲ್ಯ ಕಾಡುತ್ತಿದ್ದರೆ ಇಲ್ಲಿದೇ ಸಲಹೆಗಳು…
ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ : ಅಪಘಾತದಲ್ಲಿ ಕೈ, ಕಾಲು ಮುರಿದುಕೊಂಡವರು ನಮ್ಮ ದೇಹದ ಒಂದು ಭಾಗ ಇಲ್ಲ ಎಂದು ಯಾವತ್ತೂ ಮೂಲೆಯಲ್ಲಿ ಕೂರುವುದಿಲ್ಲ. ಇನ್ನೊಂದು ಮಾರ್ಗವನ್ನು ಹುಡುಕುತ್ತಾರೆ. ಹಾಗೆಯೇ ಹೃದಯಕ್ಕೆ ನೋವಾದರೆ ಅದು ಸರಿಹೋಗಲು ಸಾಕಷ್ಟು ಸಮಯಬೇಕು. ಹಂತ ಹಂತವಾಗಿ ಇದು ಸಾಧ್ಯವಾಗುತ್ತದೆ. ಪರವಾಗಿಲ್ಲ ನಿಮ್ಮೊಂದಿಗೆ ನೀವು ಇದ್ದಿರಾ ನಿಮ್ಮನ್ನು ನಿಮ್ಮಷ್ಟು ಯಾರೂ ಪ್ರೀತಿಸಲಾರರು ಎಂದು ಅರಿತುಕೊಂಡು ನಡೆಯಿರಿ.
ನಿಮ್ಮನ್ನು ಪ್ರೀತಿಸುವವರನ್ನು ಪ್ರೀತಿಸಿ : ಕೆಲವೊಮ್ಮೆ ನಾವು ತಪ್ಪಾದ ಹೃದಯನ್ನು ಆಯ್ಕೆ ಮಾಡಿಕೊಂಡು ಅದೇ ನಮ್ಮದು ಅಂತ ಬಲವಾಗಿ ನಂಬಿ ಮೋಸ ಹೋಗುತ್ತೇವೆ. ನಾವು ಎಷ್ಟೇ ಪ್ರೀತಿ ಮಾಡಿದರೂ ಸಹ ಅವರು ಅದನ್ನ ಟೈಮ್ ಪಾಸ್ ಆಗಿಯೇ ತೆಗೆದುಕೊಳ್ಳುತ್ತಾರೆ. ಪ್ರೀತಿಯಲ್ಲಿ ಹೆಚ್ಚು ಕಡಿಮೆ ಎನ್ನುವುದೇ ಇಲ್ಲ. ಪ್ರೀತಿ ಸಮುದ್ರದಷ್ಟಿರಬೇಕು ಅದರಲ್ಲಿ ನಂಬಿಕೆ ಉಪ್ಪಿನಂತಿರಬೇಕು. ಏಕಂದ್ರೆ ಯಾವತ್ತೂ ಸಮುದ್ರದಿಂದ ಉಪ್ಪನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಪ್ರೀತಿಸುವುದಕ್ಕೂ ಮುಂಚೆ ಹಣ, ಸೌಂದರ್ಯ, ಮೈಮಾಟ ನೋಟದೆ ನಿಮ್ಮನ್ನ ಆ ಹೃದಯ ಎಷ್ಟು ಲವ್ ಮಾಡುತ್ತೇ ಅನ್ನೋದನ್ನ ಅರಿತುಕೊಳ್ಳಿ.
ವಾಸ್ತವವನ್ನು ಒಪ್ಪಿಕೊಳ್ಳಿ : ಜೊತೆಗಿದ್ದ ಜೀವ ಇಂದು ನಮ್ಮ ಜೊತೆ ಇಲ್ಲ ಅಂದಾಗ ನೋವು ಸಹಜ. ಆದ್ರೆ, ನೀವು ಅದರಲ್ಲೇ ಕುಳಿತುಕೊಂಡ್ರೆ ಜೀವನ ಸಾಗದು ಹೇಗೆ, ನಾವು ವಾಸ್ತವವನ್ನು ಒಪ್ಪಿಕೊಂಡು ಅದರಿಂದ ಹೊರಬರಬೇಕು. ಬಂದೇ ಬರುತ್ತಾಳೆ/ ಬರುತ್ತಾನೆ ಎಂಬ ಸುಳ್ಳು ಭರವಸೆಗೆ ಕಟ್ಟುಕೊಳ್ಳಬೇಡಿ. ಅದರಿಂದ ಹೊರ ಬಂದು ಸಾಧನೆ ಕಡೆಗೆ ಹೆಜ್ಜೆ ನಡೆಸಬೇಕು.

ಅವಳು/ಅವನನ್ನು ನೆನಪಿಸಿಕೊಳ್ಳುವುದು ಬಿಟ್ಟು ಬಿಡಿ : ಸಂಗಾತಿಯ ಬಗ್ಗೆ ಅತಿಯಾಗಿ ಯೋಚಿಸುವುದನ್ನು ಬಿಟ್ಟು ಬಿಡಿ. ಸಂಬಂಧದಲ್ಲಿ ಬಿರುಕು ಬಂದಾಗ ದೂರವಾಗಲು ಕಾರಣಬೇಕಷ್ಟೆ. ಸುಮ್ಮನಿದ್ದು ಬಿಡಿ. ಗಾಯನ್ನ ಕೆದಕಿದಷ್ಟು ದೊಡ್ಡದಾಗುತ್ತದೆ. ಏನಾದರೊಂದು ಹೊಸತನ್ನು ಕಲಿಯಿರಿ ಆದಷ್ಟು ಜೀವನದಲ್ಲಿ ಬ್ಯುಸಿಯಾಗಿರಿ. ಮೆದುಳಿಗೆ ಕೆಲಸಕೊಡಿ ಅವಳ/ಅವನ ನೆನೆಪಿಗಲ್ಲ. ಹಾಗೆ ಯಾವುದೇ ಕಾರಣಕ್ಕೂ ದೂರವಾದ ನಿಮ್ಮ ಸಂಗಾತಿಯ ಮೇಲೆ ದ್ವೇಷ ಬೆಳೆಸಿಕೊಳ್ಳಬೇಡಿ.
ಇತರ ಸಂಬಂಧಗಳಿಗೆ ಆದ್ಯತೆ ನೀಡಿ : ಅವಳಿಲ್ಲ/ಅವನಿಲ್ಲ ಎಂದು ಮನೆಯ ಮೂಲೆಯಲ್ಲಿ ಕುಳಿತುಕೊಳ್ಳುವ ಬದಲು ತಂದೆ, ತಾಯಿ, ಸ್ನೇಹಿತರು, ಸಂಬಂಧಿಕರ ಜೊತೆ ಆದಷ್ಟು ಬೆರೆಯಲು ನೋಡಿ. ಸಾಧ್ಯವಾದರೆ, ನಿಮ್ಮನ್ನು ಯಾರು ಪ್ರೀತಿಸುತ್ತಾರೋ ಅವರೊಂದಿಗೆ ಸಮಯ ಕಳೆಯಿರಿ. ಯಾಕಂದರೆ ಅವರ ಮಾತು ನಿಮ್ಮ ನೋವುಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಅವರಿಗೆ ನೀವೇನು ಅಂತ ಗೊತ್ತಿರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿ ಸ್ವಲ್ಪ ರಿಫ್ರೆಶ್ ಸಿಗುತ್ತದೆ.
