ಟಾಲಿವುಡ್ ಯಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್…’SPY’ ಸಿನಿಮಾಗೆ ರಾಜ್ ಶೇಖರ್ ರೆಡ್ಡಿ ನಿರ್ಮಾಣ… ದಸರಾಗೆ ‘SPY’ ಬೆಳ್ಳಿತೆರೆಗೆ

ಟಾಲಿವುಡ್ ಹ್ಯಾಂಡ್ಸಮ್ ಹಂಕ್, ಪ್ರಾಮಿಸಿಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ನಿಖಿಲ್ 19ನೇ ಸಿನಿಮಾಗೆ ಖ್ಯಾತ ನಿರ್ದೇಶಕ‌ ಕಂ ಸಂಕಲನಕಾರ ಗ್ಯಾರಿ ಬಿ.ಎಚ್ ಆಕ್ಷನ್ ಕಟ್ ಹೇಳಿದ್ದು, ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ ರಾಜ ಶೇಖರ್ ರೆಡ್ಡಿ ED ಎಂಟರ್ ಟೈನ್ ಮೆಂಟ್ ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

*SPY ಫಸ್ಟ್ ಲುಕ್ ರಿಲೀಸ್*

Spy ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಕೈಯಲ್ಲಿ ಗನ್ ಹಿಡಿದು ಸಖತ್ ಸ್ಟೈಲೀಶ್ ಲುಕ್ ನಲ್ಲಿ ನಿಖಿಲ್ ಸಿದ್ಧಾರ್ಥ್ ಮಿಂಚಿದ್ದಾರೆ. ಸ್ಪೈ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ‌ ಮೂಡಿ ಬರ್ತಿದ್ದು, ನಿಖಿಲ್ವವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ದಸರಾ ಹಬ್ಬಕ್ಕೆ ಸ್ಪೈ ಸಿನಿಮಾ ಥಿಯೇಟರ್ ಗೆ ಎಂಟ್ರಿ‌ ಕೊಡಲಿದೆ.

ಸ್ಪೈ ಸಿನಿಮಾಗೆ ರಾಜ್ ಶೇಖರ್ ರೆಡ್ಡಿ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದು, ಗ್ಯಾರಿ ಬಿಹೆಎಚ್ ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದು, ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್ ಗೆ ಜೋಡಿಯಾಗಿ ಐಶ್ವರ್ಯ ಮೆನನ್ ನಾಯಕಿಯಾಗಿ ನಟಿಸಲಿದ್ದಾರೆ.

ಹೈ ಬಜೆಟ್ ನಲ್ಲಿ ತಯಾರಾಗಲಿರುವ ಸ್ಪೈ ಸಿನಿಮಾಗೆ ಹಾಲಿವುಡ್ ತಂತ್ರಜ್ಞಾನರ ಮೆರಗು ಸಿಕ್ಕಿದೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ಈ ಸಿನಿಮಾ ಜೊತೆಗೆ ED ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಮತ್ತೆರೆಡು ಹೊಸ ಪ್ರಾಜೆಕ್ಟ್ ತಯಾರಾಗಲಿದ್ದು, ಡಿಜೆ ಟಿಲ್ಲು ಖ್ಯಾತಿಯ ನಿರ್ದೇಶಕ ವಿಮಲ್ ಕೃಷ್ಣ ನಿರ್ದೇಶನಲ್ಲೊಂದು ಸಿನಿಮಾ ಬರಲಿದೆ.

Leave a Reply

Your email address will not be published. Required fields are marked *