ವಿವಾದಿತ ಪೋಸ್ಟ್ನಿಂದ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ಅರೆಸ್ಟ್, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು

 

ಹುಬ್ಬಳ್ಳಿ: ಏಪ್ರಿಲ್ 17ರ ಭಾನುವಾರ ರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆಯಾಗಿರೋದು ರಾಜ್ಯವನ್ನ ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಪರಾರಿಯಾಗಿರುವ ಮತ್ತಷ್ಟು ಆರೋಪಿಗಳಿಗಾಗಿ 2 ಪೊಲೀಸ್ ತಂಡಗಳಿಂದ ಶೋಧಕಾರ್ಯ ನಡೆಯುತ್ತಿದೆ.

ಹುಬ್ಬಳ್ಳಿ ಘಟನೆಗೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಸಾಮ್ಯತೆ

ಡಿಜೆ ಹಳ್ಳಿ, ಕೆಜೆ ಹಳ್ಳಿ ರೀತಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಗಲಭೆಗೆ ಫ್ಲ್ಯಾನ್ ನಡೆದಿತ್ತು ಎಂಬ ಬಗ್ಗೆ ಸ್ವತಃ ಗೃಹ ಸಚಿವರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಹಳೇ ಹುಬ್ಬಳ್ಳಿ ಗಲಭೆಗೂ ಡಿಜೆ ಹಳ್ಳಿ ಘಟನೆಗೂ ಸಾಮ್ಯತೆ ಇದೆ ಎಂದು ಗೃಹ ಸಚಿವ ಆರಗ ತಿಳಿಸಿದ್ದರು. ಹೀಗಾಗೇ ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಪ್ರಕರಣವನ್ನ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ನಿನ್ನೆ ರಾತ್ರಿಯೇ ಹಳೇ ಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ ಎಡಿಜಿಪಿ ಕಮಿಷನರ್ ಲಾಬೂರಾನ್ ರಿಂದ ಮಾಹಿತಿ ಪಡೆದಿದ್ದಾರೆ.

ಕಾಂಗ್ರೆಸ್ ಕಾರ್ಯಧ್ಯಕ್ಷ ಸಲೀಂ ನೇತೃತ್ವದ ನಿಯೋಗ ಪೊಲೀಸ್ ಕಮಿಷನರ್ ಲಾಬೂರಾಮ್ ಭೇಟಿ ಮಾಡಲಿದೆ. ನಿನ್ನೆಯ ಘಟನೆ ಬಗ್ಗೆ ಸಭೆ ನಡೆಸಿರುವ ಕಾಂಗ್ರೆಸ್, ಅಮಾಯಕರ ಬಂಧನವಾಗುತ್ತಿದೆ ಎಂದಿತ್ತು. ಹೀಗಾಗಿ ಅಮಾಯಕರನ್ನ ಬಂಧಿಸಬೇಡಿ, ಘಟನೆಯ ಆರೋಪಿಗಳನ್ನ ಬಂಧಿಸಿ ಎಂದು ಮನವಿ ಮಾಡಲಿದೆ.

ರಾತ್ರೋ ರಾತ್ರಿ ಹೊತ್ತಿ ಉರಿದ ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ಗೆ ಗಲಭೆಯಾಗಿದೆ. ನಿನ್ನೆ(ಏಪ್ರಿಲ್ 17) ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ಹಾಕ್ಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಸ್ಟೇಟಸ್ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಗ್ರೂಪ್ಗಳಲ್ಲಿ ಪೋಸ್ಟ್ ಶೇರ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಕೆರಳಿದ ಉದ್ರಿಕ್ತರು ಮನಬಂದಂಗೆ ಕಲ್ಲೆಸೆದು ಹುಬ್ಬಳ್ಳಿಯಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದ್ರು. ಬಸ್ಗಳ ಮೇಲೂ ಕಲ್ಲು ತೂರಾಡಿದ್ರು. ಬಸ್ಗಳ ಗಾಜು ಪುಡಿ ಪುಡಿಯಾದ್ವು. ಅಷ್ಟೇ ಅಲ್ಲ, ಪೊಲೀಸರ ವಾಹನದ ಮೇಲೂ ಕಲ್ಲೆಸೆದ್ರು. ಉದ್ರಿಕ್ತರ ಪುಂಡಾಟಕ್ಕೆ ಪೊಲೀಸ್ ಜೀಪ್ಗಳು ಜಖಂ ಆಗಿವೆ.

ದುಷ್ಕರ್ಮಿಗಳ ಗುಂಪು ಆಸ್ಪತ್ರೆಯನ್ನ ಕೂಡ ಬಿಟ್ಟಿಲ್ಲ. ಹಳೇ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ ಮೇಲೂ ಕಲ್ಲು ತೂರಿದ್ರು. ಏಕಾಏಕಿ ಆಸ್ಪತ್ರೆ ಬಳಿ ಜಮಾಯಿಸಿ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಮುಂಭಾಗದ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ರು. ಹುಬ್ಬಳ್ಳಿ ನಗರದ ಆಂಜನೇಯ ದೇಗುಲದ ಮೇಲೂ ಕಲ್ಲು ತೂರಿದ್ದು ಈ ಪರಿಣಾಮ ದೇವಸ್ಥಾನದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.

ಖಾಕಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

ಇನ್ನು ಉದ್ರಿಕ್ತರ ಅಟ್ಟಹಾಸ ತಾರಕಕ್ಕೇರುತ್ತಲೇ ಪೊಲೀಸರು ಕಾರ್ಯಾಚರಣೆಗೆ ಇಳಿದ್ರು. ಕೈ ಮೀರಿ ಹೋಗಿದ್ದ ಪರಿಸ್ಥಿತಿ ಕಂಟ್ರೋಲ್ಗೆ ತರೋಕೆ, ಗುಂಪನ್ನ ಚದುರಿಸೋಕೆ ಅಶ್ರುವಾಯು ಪ್ರಯೋಗಿಸಿದ್ರು. ಲಾಠಿ ಚಾರ್ಜ್ ಮಾಡಿದ್ರು.

Leave a Reply

Your email address will not be published. Required fields are marked *